AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಬೀಡಿ,‌ ಸಿಗರೇಟ್, ಗಾಂಜಾ ಚಟಕ್ಕಾಗಿ ಬಾಲಕಿಯನ್ನು ಅಪಹರಿಸಲು ಯತ್ನ​

ಬೀಡಿ,‌ ಸಿಗರೇಟ್ ಮತ್ತು ಗಾಂಜಾ ಚಟಕ್ಕಾಗಿ ರಾಮನಗರದ ಚಾಮುಂಡಿಪುರ ಲೇಔಟ್​ನ ಏಳು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಮನಗರ: ಬೀಡಿ,‌ ಸಿಗರೇಟ್, ಗಾಂಜಾ ಚಟಕ್ಕಾಗಿ ಬಾಲಕಿಯನ್ನು ಅಪಹರಿಸಲು ಯತ್ನ​
ಅಪಹರಣಕ್ಕೆ ಯತ್ನಿಸಲಾಗಿದ್ದ ಬಾಲಕಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Sep 09, 2024 | 10:22 AM

Share

ರಾಮನಗರ, ಸೆಪ್ಟೆಂಬರ್​ 09: ರಾಮನಗರದ (Ramnagar) ಚಾಮುಂಡಿಪುರ ಲೇಔಟ್​ನ ಏಳು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ದರ್ಶನ್​ (22) ಅಪಹರಣಕ್ಕೆ ಯತ್ನಿಸಿದ ಆರೋಪಿ. ಆರೋಪಿ ದರ್ಶನ್​ ಬಾಲಕಿಯ ಪಕ್ಕದ ಮನೆಯವನಾಗಿದ್ದಾನೆ. ಆರೋಪಿ ದರ್ಶನ್​ ​ಬೀಡಿ,‌ ಸಿಗರೇಟ್ ಮತ್ತು ಗಾಂಜಾ ಚಟಕ್ಕೆ ದಾಸನಾಗಿದ್ದಾನೆ. ತನ್ನ ಚಟಕ್ಕಾಗಿ ಅವರಿವರಿಂದ 10-20 ರೂ. ಕೇಳಿ ಪಡೆಯುತ್ತಿದ್ದನು.

ಕೊನೆಗೆ ಯಾರು ಹಣ ನೀಡದಿದ್ದಾಗ, ಬಾಲಕಿಯನ್ನು ಅಪರಣ ಮಾಡಲು ಪ್ಯ್ಲಾನ್​ ಮಾಡಿದನು. ಬಾಲಕಿಯನ್ನು ಅಪಹರಣ ಮಾಡಿ ಎರಡು ಲಕ್ಷ ರೂ. ಬೇಡಿಕೆ ಇಡಲು ಯೋಚಿಸಿದ. ಬಂದ ಹಣ ತನ್ನ ಚಟಕ್ಕೆ ಆಗುತ್ತದೆ ಎಂದು ಅಪಹರಣ ಕೃತ್ಯಕ್ಕೆ ಕೈ ಹಾಕಿದ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬಾಲಕಿ ಗಣೇಶ ಪೆಂಡಲ್​ ಬಳಿ ಇದ್ದಳು. ಈ ಸಮಯದಲ್ಲಿ ಅಲ್ಲಿಗೆ ಬಂದ ಆರೋಪಿ ದರ್ಶನ್ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ನಾನು ಹೋಗಲ್ಲ ಎಂದು ಅಪಹರಣಕಾರನನ್ನು ಅಪ್ಪಿಕೊಂಡು ಅತ್ತ ಮಗು

ಅಲ್ಲಿ ಬಾಲಕಿಯ ಕೈ ಮತ್ತು ಬಾಯಿಗೆ ಟೇಪ್​​ನಿಂದ ಸುತ್ತಿದ್ದಾನೆ. ಮಗಳು ಕಾಣದಿದ್ದಾಗ ತಂದೆ ಸಂತೋಷ್​ ಗಾಬರಿಗೊಂಡು ಹುಡುಕಾಡಲು ಆರಂಭಿಸಿದ್ದಾರೆ. ಈ ವಿಚಾರವನ್ನು ಗಣೇಶ ಪೆಂಡಲ್​ ಬಳಿ ಇದ್ದ ಯುವಕರಿಗೂ ತಿಳಿಸಿದ್ದಾರೆ. ನಂತರ ಯುವಕರೆಲ್ಲರೂ ಒಂದುಗೂಡಿ ಹುಡುಕಾಡಲು ಶುರು ಮಾಡಿದ್ದಾರೆ. ಮಗಳು ಗಣೇಶ ಪೆಂಡಲ್​ ಬಳಿಯೇ ಇದ್ದಳು ಎಂದು ದರ್ಶನ್​ ಯುವಕರಿಗೆ ತಿಳಿಸಿದ್ದಾರೆ.

ಸ್ಥಳೀಯರ ಹುಡುಕಾಟ ಮತ್ತು ಬಾಯಿ ಶಬ್ದ ಕೇಳಿದ ಆರೋಪಿ ದರ್ಶನ ಬಾಲಕಿಯನ್ನು ಬಿಟ್ಟು ಪರಾರಿಯಾಗಲು ಮುಂದಾಗಿದ್ದಾನೆ. ಈತನ ಮೇಲೆ ಅನುಮಾನಗೊಂಡ ಯುವಕರು, ಹಿಡಿದು ವಿಚಾರಿಸಿದಾಗ ಬಾಯಿ ಬಿಟ್ಟಿದ್ದಾನೆ. ಕೂಡಲೆ ಅಡಗಿಸಿಟ್ಟ ಸ್ಥಳಕ್ಕೆ ಯುವಕರು ತೆರಳಿದಾಗ ಬಾಲಕಿ ಉಸಿರುಗಟ್ಟುವ ಹಂತದಲ್ಲಿದ್ದಳು. ಕೂಡಲೆ ಯುವಕರು ಬಾಲಕಿ ಕೈ ಮತ್ತು ಬಾಯಿಗೆ ಹಚ್ಚಿದ್ದ ಟೇಪ್​ ತೆಗೆದು ರಕ್ಷಿಸಿದ್ದಾರೆ. ಆರೋಪಿ ದರ್ಶನ್​ನನ್ನು ಯುವಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Syed Nizamuddin
Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More