ನಾನು ಹೋಗಲ್ಲ ಎಂದು ಅಪಹರಣಕಾರನನ್ನು ಅಪ್ಪಿಕೊಂಡು ಅತ್ತ ಮಗು

ಮಗುವಿಗೆ ಸರಿ ಯಾವುದು ಕೆಟ್ಟದ್ಯಾವುದು ಎಂಬುದರ ಅರಿವಿರುವುದಿಲ್ಲ, ಕೆಟ್ಟ ಜನರು ಚೆನ್ನಾಗಿ ನೋಡಿಕೊಂಡರೂ ಮಗು ಅವರನ್ನೇ ನಂಬಿ ಬಿಡುತ್ತದೆ. ಅಂಥದ್ದೇ ಘಟನೆ ಜೈಪುರದಲ್ಲಿ ನಡೆದಿದೆ. 14 ತಿಂಗಳ ಹಿಂದೆ ಅಪಹರಣವಾಗಿದ್ದ ಮಗು ಪೋಷಕರ ಬಳಿ ಬರಲು ನಿರಾಕರಿಸಿ ಅಪಹರಣಕಾರನನ್ನು ತಬ್ಬಿಕೊಂಡು ಅತ್ತಿರುವ ಘಟನೆ ವರದಿಯಾಗಿದೆ.

ನಾನು ಹೋಗಲ್ಲ ಎಂದು ಅಪಹರಣಕಾರನನ್ನು ಅಪ್ಪಿಕೊಂಡು ಅತ್ತ ಮಗು
ಮಗು
Follow us
ನಯನಾ ರಾಜೀವ್
|

Updated on: Aug 30, 2024 | 2:02 PM

ಮಗುವನ್ನು ಅಪಹರಿಸಿದ್ದು ಆತ ಮಾಡಿರುವ ದೊಡ್ಡ ತಪ್ಪು ಎಂಬುದು ಎಷ್ಟು ನಿಜವೋ ಆ ಅಪಹರಣಕಾರನ ಬಿಟ್ಟು ಹೋಗಲು ಮನಸ್ಸಿಲ್ಲದೆ ಮಗು ಆತನನ್ನು ಅಪ್ಪಿಕೊಂಡು ಅತ್ತಿದ್ದು ಕೂಡ ಅಷ್ಟೇ ಸತ್ಯ. 14 ತಿಂಗಳ ಹಿಂದೆ ಮಗುವನ್ನು ಅಪಹರಿಸಲಾಗಿತ್ತು, ಕೊನೆಗೂ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಆ ಮಗು ಪೋಷಕರ ಬಳಿ ಬರಲು ಸಿದ್ಧವಿರಲಿಲ್ಲ, ಬದಲಾಗಿ ಅಪಹರಣಕಾರನನ್ನು ತಬ್ಬಿಕೊಂಡು ಅತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಗು ಅಳು ನೋಡಿ ಅಪಹರಣಕಾರನ ಕಣ್ಣಲ್ಲೂ ನೀರು ಬಂದಿದೆ.

ಜೈಪುರದ ಸಂಗನೇರ್ ಸದರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜೂನ್ 14, 2023 ರಂದು, ಮಗುವಿನ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆಗ ಮಗುವಿಗೆ ಕೇವಲ 11 ತಿಂಗಳಾಗಿತ್ತು. ಆರೋಪಿಯನ್ನು ತನುಜ್ ಚಹರ್ ಎಂದು ಗುರುತಿಸಲಾಗಿದೆ. ಯುಪಿ ಪೊಲೀಸ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದ ಅವರು ಅಮಾನತುಗೊಂಡಿದ್ದರು.

ತನುಜ್ ತನ್ನ ಸಹಚರರೊಂದಿಗೆ ಸೇರಿ ಮಗುವನ್ನು ತನ್ನ ಮನೆಯಿಂದ ಅಪಹರಿಸಿದ್ದಾರೆ. ಮಗುವಿನ ಪತ್ತೆಗೆ ಪೊಲೀಸರು ಹಲವೆಡೆ ದಾಳಿ ನಡೆಸಿದ್ದಾರೆ. ಸುಮಾರು 14 ತಿಂಗಳ ನಂತರ, ಆಗಸ್ಟ್ 27 ರಂದು, ಪೊಲೀಸರು ಆರೋಪಿಯನ್ನು ಅಲಿಗಢದಿಂದ ಬಂಧಿಸಿ ಜೈಪುರಕ್ಕೆ ಕರೆತಂದರು.

ಮತ್ತಷ್ಟು ಓದಿ: Viral: ಪ್ರಿಯಕರನಿಗಾಗಿ ಹೆತ್ತ ಕಂದಮ್ಮನನ್ನೇ ಕೊಂದು ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಗೆ ಎಸೆದ ಪಾಪಿ ತಾಯಿ

ಆರೋಪಿಯು ಮಗುವನ್ನು ಅಪಹರಿಸಿದ್ದರೂ ಕೂಡ ಯಾವುದೇ ಹಾನಿಯುಂಟು ಮಾಡಿರಲಿಲ್ಲ. ಪೃಥ್ವಿ ತನ್ನ ಮಗು ಎಂದು ಆರೋಪಿ ಹೇಳಿಕೊಂಡಿದ್ದಾನೆ. ಆರೋಪಿಯು ಮಗುವಿನ ತಾಯಿಯನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮಗುವಿನ ಪಾಲಕರು ಆತನನ್ನು ಕರೆದುಕೊಂಡು ಹೋಗಲು ಠಾಣೆಗೆ ಬಂದಾಗ ಆತ ಅಪಹರಣಕಾರ ತನುಜ್ ನನ್ನು ಅಪ್ಪಿಕೊಂಡು ಅಳಲು ಶುರು ಮಾಡಿತ್ತು. ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ