‘ಪಕ್ಕಕ್ಕೆ ಸರಿಯಪ್ಪ ಕಸ ಗುಡಿಸ್ಬೇಕು’ ಅಂದಿದ್ದೇ ತಪ್ಪಾಯ್ತಾ!?
ಹುಬ್ಬಳ್ಳಿ: ರಸ್ತೆ ಕಸ ಗುಡಿಸುವಾಗ ಪಕ್ಕಕ್ಕೆ ಹೋಗಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಉಣಕಲ್ನ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಅರ್ಚಕ ಬಸಪ್ಪ ಗುಡಿಮನಿ. 2ದಿನದ ಹಿಂದೆ ದೇಗುಲದ ಕಸ ಗುಡಿಸ್ತಿದ್ದಾಗ, ಶಿವಾನಂದ ಗಂಬ್ಯಾಪೂರ್ ಎಂಬ ವ್ಯಕ್ತಿಗೆ ಸ್ವಲ್ಪ ಆ ಕಡೆ ಕೂರಿ ಎಂದಿದ್ದಾರೆ. ಇಷ್ಟಕ್ಕೆ ಶಿವಾನಂದ ಜಗಳ ಮಾಡಿದ್ದಾನೆ. ನಂತರ ಸ್ಥಳದಲ್ಲಿದ್ದ ಭಕ್ತರು ಜಗಳ ಬಿಡಿಸಿ ಕಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶಿವಾನಂದ ರಾತ್ರಿ ಯಾರೂ ಇಲ್ಲದ ಹೊತ್ತಲ್ಲಿ ಬಂದು […]
ಹುಬ್ಬಳ್ಳಿ: ರಸ್ತೆ ಕಸ ಗುಡಿಸುವಾಗ ಪಕ್ಕಕ್ಕೆ ಹೋಗಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಉಣಕಲ್ನ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಅರ್ಚಕ ಬಸಪ್ಪ ಗುಡಿಮನಿ. 2ದಿನದ ಹಿಂದೆ ದೇಗುಲದ ಕಸ ಗುಡಿಸ್ತಿದ್ದಾಗ, ಶಿವಾನಂದ ಗಂಬ್ಯಾಪೂರ್ ಎಂಬ ವ್ಯಕ್ತಿಗೆ ಸ್ವಲ್ಪ ಆ ಕಡೆ ಕೂರಿ ಎಂದಿದ್ದಾರೆ. ಇಷ್ಟಕ್ಕೆ ಶಿವಾನಂದ ಜಗಳ ಮಾಡಿದ್ದಾನೆ. ನಂತರ ಸ್ಥಳದಲ್ಲಿದ್ದ ಭಕ್ತರು ಜಗಳ ಬಿಡಿಸಿ ಕಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶಿವಾನಂದ ರಾತ್ರಿ ಯಾರೂ ಇಲ್ಲದ ಹೊತ್ತಲ್ಲಿ ಬಂದು ಬಸಪ್ಪನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಬಸಪ್ಪ ಆಸ್ಪತ್ರೆ ಸೇರಿದ್ದಾರೆ.
ಹಿನ್ನೆಲೆ: ಶಿವಾನಂದ ಈ ಹಿಂದೆ ದೇಗುಲದಲ್ಲಿ ಸ್ಮೋಕ್ ಮಾಡ್ತಿದ್ನಂತೆ. ಈ ವೇಳೆ ಅರ್ಚಕ ಬಸಪ್ಪ ಇಲ್ಲಿ ಸ್ಮೋಕ್ ಮಾಡ್ಬೇಡಿ ಎಂದು ಹೇಳಿ ಕಳುಹಿಸಿದ್ದರಂತೆ. ಇದ್ರಿಂದ ಕುಪಿತಗೊಂಡಿದ್ದ ಶಿವಾನಂದ, ಸರಿದು ನಿಲ್ಲು ಎಂದಿದ್ದನ್ನೇ ನೆಪವಾಗಿಟ್ಕೊಂಡು ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ. ಇನ್ನು, ಹಲ್ಲೆಯಿಂದ ಬಸಪ್ಪರ ಕಿಡ್ನಿ ಹಾಗೂ ಎದೆಗೆ ತೀವ್ರವಾಗಿ ಪೆಟ್ಟಾಗಿದೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಪ್ರಕರಣ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸರು ಶಿವಾನಂದ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಅಂತ ಬಸಪ್ಪನ ಸಂಬಂಧಿಕರು ಆರೋಪಿಸಿದ್ದಾರೆ.
Published On - 1:44 pm, Thu, 21 November 19