ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ 27 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿಯ ಪತಿಯ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಮೃತದೇಹವನ್ನು ಸುಟ್ಟುಹಾಕಿರುವ ಘಟನೆ ವರದಿಯಾಗಿದೆ.ಆರೋಪಿಯನ್ನು ವಜೀರಾಬಾದ್ ನಿವಾಸಿ ಮುನಿಶುದ್ದೀನ್ ಎಂದು ಗುರುತಿಸಲಾಗಿದೆ. ಮುನಿಶುದ್ದೀನ್ ತನ್ನ ಸ್ನೇಹಿತನಾಗಿದ್ದ ಮೃತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಜೀರಾಬಾದ್‌ನ ರಾಮ್ ಘಾಟ್‌ನ ಮುಂಭಾಗದಲ್ಲಿ ವ್ಯಕ್ತಿಯ ಶವ ಸುಟ್ಟ ಸ್ಥಿತಿಯಲ್ಲಿ ಇರುವುದು ತಿಳಿದುಬಂದಿತ್ತು. ದೇಹವು ಸುಮಾರು 90 ರಷ್ಟು ಸುಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಲ್ಲದೆ ಸಮೀಪದ ಪೊದೆ ಬಳಿಕ ರಕ್ತ ಪತ್ತೆಯಾಗಿದೆ, ಸ್ಥಳದಿಂದ ಪೇಪರ್ ಕಟರ್ ಹಾಗೂ ಬೆಂಕಿಕಡ್ಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ಓದಿ: ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಯ ಮೇಲೆ ಗುಂಡು ಹಾರಿಸಿದ ಬಾಲಕಿ
ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಮೃತನ ಜೊತೆಯಲ್ಲಿ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ.
ಆರೋಪಿಗಳು ರೋಹಿಣಿ ಸೆಕ್ಟರ್ 16 ಬವಾನಾ ನಾಲೆಯ ಬಳಿ ಬರುತ್ತಾರೆ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು, ಇದೀಗ ಮುನಿಶುದ್ದೀನ್ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಮುನಿಶುದ್ದೀನ್ ತನ್ನ ಸ್ನೇಹಿತ ರಶೀದ್ ಮನೆಗೆ ಆಗಾಗ ಹೋಗುತ್ತಿದ್ದ, ಅಲ್ಲಿಯೇ ಸ್ನೇಹಿತನ ಪತ್ನಿ ಹಾಗೂ ಆತನ ನಡುವೆ ಪ್ರೀತಿಯಾಗಿತ್ತು. ಕಳೆದ 10-15 ದಿನಗಳಿಂದ ಮುನಿಶುದ್ದೀನ್ಗೆ ರಶೀದ್ನನ್ನು ದೂರ ಮಾಡುವಂತೆ ಒತ್ತಡ ಹೇರುತ್ತಿದ್ದಳು. ಹೀಗಅಗಿ ಮುನಿಶುದ್ದೀನ್ ರಶೀದ್ನನ್ನು ರಾಮ್ಘಾಟ್ಗೆ ಕರೆದೊಯ್ದಿದ್ದ, ಅಲ್ಲಿ ಇಬ್ಬರೂ ಮದ್ಯ ಸೇವಿಸಿದ್ದರು. ಆ ಸಂದರ್ಭದಲ್ಲಿ ರಶೀದ್ನನ್ನು ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಿದ್ದ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ