ಕೊಡಗಿನ ಹುಡುಗಿ.. ವಿಜಯಲಕ್ಷ್ಮೀ.. ಚಿನ್ನು.. ಬಂಗಾರ: ಬಗೆದಷ್ಟು ಬಯಲಾಗುತ್ತಿವೆ ಸ್ಯಾಂಟ್ರೋ ರವಿಯ ಲೀಲೆಗಳು

ಸ್ಯಾಂಟ್ರೋ ರವಿಯ ಲೀಲೆಗಳು ಒಂದಲ್ಲ ಎರಡಲ್ಲ, ಬಗೆದಷ್ಟೂ ಈ ಶೋಕಿಲಾಲನ ರೋಚಕ ಭಯಾನಕ ಮುಖ ತೆರೆದುಕೊಳ್ಳುತ್ತಲೇ ಇವೆ. ಗರ್ಲ್ಸ್ ಸಪ್ಲೈಗೆ ‘ಕಾರ್’ ಕೋಡ್‌ವರ್ಡ್​ಗಳನ್ನ ಇಟ್ಟಿದ್ದ ಈ ಸ್ಯಾಂಟ್ರೋ ರವಿ ಹುಡುಗಿಯರಿಗೆಲ್ಲಾ ಅಡ್ಡ ಹೆಸರಿನಲ್ಲಿ ಕರೆಯುತ್ತಿದ್ದನಂತೆ..

ಕೊಡಗಿನ ಹುಡುಗಿ.. ವಿಜಯಲಕ್ಷ್ಮೀ.. ಚಿನ್ನು.. ಬಂಗಾರ: ಬಗೆದಷ್ಟು ಬಯಲಾಗುತ್ತಿವೆ ಸ್ಯಾಂಟ್ರೋ ರವಿಯ ಲೀಲೆಗಳು
ಸ್ಯಾಂಟ್ರೋ ರವಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 08, 2023 | 9:09 PM

ಸ್ಯಾಂಟ್ರೋ ರವಿ. ಈ ಹೆಸರು ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈತನ ಬಗ್ಗೆ ಹೇಳಲು ಶುರುಮಾಡಿದ್ರೆ ಕೊನೆಯಿಲ್ಲ. ಎಷ್ಟು ಹೇಳಿದ್ರೂ ಮುಗಿಯುತ್ತಿಲ್ಲ. ಮಹಾ ಪಾಕಡಾ ಸ್ಯಾಂಟ್ರೋ ರವಿಯ ಲೀಲೆಗಳು ಒಂದಲ್ಲ ಎರಡಲ್ಲ, ಬಗೆದಷ್ಟೂ ಈ ಶೋಕಿಲಾಲನ ರೋಚಕ ಭಯಾನಕ ಮುಖ ತೆರೆದುಕೊಳ್ಳುತ್ತಲೇ ಇದೆ.. ಸ್ಯಾಂಟ್ರೋ ರವಿಯ ಪಲ್ಲಂಗ ಸೇವೆಯ ಕರಾಳ ಕಥೆಗಳು ಹೊರಬರ್ತಿವೆ.

ಇದನ್ನೂ ಓದಿ: ಯುವತಿಯರ ವಯಸ್ಸು.. ಚೆಂದಕ್ಕೆ ತಕ್ಕಂತೆ ಕೋಡ್​ ವರ್ಡ್: ಗರ್ಲ್ಸ್ ಸಪ್ಲೈಗೆ ಇಟ್ಟಿದ್ದ ‘ಕಾರ್’ ಕೋಡ್‌ವರ್ಡ್​ಗಳು ಹೀಗಿವೆ

ಸ್ಯಾಂಟ್ರೋ ರವಿ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಫೋಟೋ ಶೇರ್‌ ಮಾಡಿ ಒಬ್ಬರನ್ನ ಚಿನ್ನು, ಇನ್ನೊಬ್ಬರನ್ನ ವಿಜಯಲಕ್ಷ್ಮೀ, ಮತ್ತೊಬ್ಬರನ್ನ ಬಂಗಾರ, ಮಗದೊಬ್ಬಳನ್ನ ಕೊಡಗಿನ ಕಾವೇರಿ ಎಂದು ಹೀಗೆ ಈತನ ವ್ಯಾಪ್ತಿಯಲ್ಲಿರುವ ಹುಡುಗಿಯರಿಗೆಲ್ಲಾ ಅಡ್ಡಹೆಸರಿನಲ್ಲಿ ಕರೆಯುತ್ತಿದ್ದನಂತೆ. ಈತನ ಕಾಂಟ್ಯಾಕ್ಟ್‌ನಲ್ಲಿರೋ ಹಿರಿಯ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ದೊಡ್ಡ ದೊಡ್ಡವರು ಫೋಟೋ ನೋಡಿ ಸೆಲೆಕ್ಟ್‌ ಮಾಡ್ತಿದ್ರಂತೆ. ಆಮೇಲೆ ಶುರುವಾಗ್ತಿತ್ತಂತೆ ಈ ಸ್ಯಾಂಟ್ರೋ ರವಿಯ ಆಟ.

ಐಷಾರಾಮಿ ಮನೆಗಳೇ ಈತನ ವೇಶ್ಯಾವಾಟಿಕೆ ಅಡ್ಡೆಗಳು..!

ಮೊಬೈಲ್‌ ಫೋನಲ್ಲೇ ಚೆಂದದ ಯುವತಿಯರು ಬುಕಿಂಗ್ ಆಗ್ತಿದ್ರೆ, ದೊಡ್ಡ ದೊಡ್ಡ ಬಂಗಲೆ, ಡ್ಯೂಪ್ಲೆಕ್ಸ್‌ ಮನೆಗಳು, ಪೆಂಟ್‌ಹೌಸ್‌ಗಳು, ವಿಲ್ಲಾಗಳು ಹೀಗೆ, ಐಷಾರಾಮಿ ಮನೆಗಳನ್ನ ಬಾಡಿಗೆ ಪಡೀತಿದ್ದನಂತೆ. ಇದೇ ಐಷಾರಾಮಿ ಮನೆಗಳನ್ನೇ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡು ಪಲ್ಲಂಗ ಸೇವೆಗೆ ವ್ಯವಸ್ಥೆ ಮಾಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿವೆ.

ಲೋಕಲ್‌ ಮಾತ್ರವಲ್ಲ, ಫಾರಿನ್‌ ಹುಡುಗಿಯರ ಸಪ್ಲೈ!

ಈತನ ಈ ಕತ್ತಲ ಲೋಕದ ನೆಟ್‌ವರ್ಕ್‌ ಎಷ್ಟು ದೊಡ್ಡದಾಗಿದೆ ಅಂದ್ರೆ, ವಿದೇಶದಲ್ಲೂ ಈತ ಲಿಂಕ್‌ ಹೊಂದಿದ್ದ ಎನ್ನಲಾಗಿದೆ.. ತನ್ನ ಕಸ್ಟಮರ್‌ಗಳಿಗೆ ಸರ್ವಿಸ್‌ ಕೊಡಲು ಬರೀ ಲೋಕಲ್‌ ಹುಡುಗಿಯರು ಮಾತ್ರವಲ್ಲ, ರಷ್ಯಾ ಮತ್ತು ಇರಾನ್‌, ದೆಹಲಿ, ಮುಂಬೈ ಕೋಲ್ಕತ್ತಾದಿಂದಲೂ ಯುವತಿಯರನ್ನ ಕರೆಸ್ತಿದ್ದ ಎಂಬ ಮಾಹಿತಿ ಇದೆ.

ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ

ದಂಧೆಗೆ ಸಹಕರಿಸಿದ ಯುವತಿಯರಿಗೆ ದುಬಾರಿ ಗಿಫ್ಟ್‌!

ಚೆಂದದ ಯುವತಿಯರನ್ನ ಬಳಸಿಕೊಂಡು ಈ ಜಗತ್ ಕಿಲಾಡಿ ಸ್ಯಾಂಟ್ರೋ ರವಿ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನೂ ಸಾಧಿಸ್ತಿದ್ದ.. ಇನ್ನು, ತನ್ನ ಕೆಲಸಗಳಿಗೆ ಸಹಕರಿಸಿದ ಯುವತಿಯರಿಗೆ ದುಬಾರಿ ಗಿಫ್ಟ್‌ಗಳನ್ನೂ ಕೊಡ್ತಿದ್ದನಂತೆ.. ತನ್ನ ಬ್ಯುಸಿನೆಸ್‌ಗೆ ಸಹಕರಿಸಿದ್ದ ಯುವತಿಯೊಬ್ಬಳಿಗೆ ಬರೋಬ್ಬರಿ 1 ಲಕ್ಷ 83 ಸಾವಿರ ರೂಪಾಯಿ ಮೌಲ್ಯದ ರ್ಯಾಡೋ ವಾಚ್‌ನ್ನು ಸ್ಯಾಂಟ್ರೋ ರವಿ ಗಿಫ್ಟ್‌ ಮಾಡಿದ್ದನಂತೆ.. ಯುವತಿ ಜೊತೆಗೆ ವಾಚ್‌ ಖರೀದಿಸುವ ಫೋಟೋ, ದೃಶ್ಯವನ್ನೂ ವಾಟ್ಸಾಪ್‌ ಸ್ಟೇಟಸ್‌ಗೆ ಹಾಕಿಕೊಂಡಿದ್ದನಂತೆ.

ಬರೀ ಯುವತಿಯರ ಫೋಟೋಗಳು ಮಾತ್ರವಲ್ಲ ಸ್ಯಾಂಟ್ರೋ ರವಿ ಖರಾಬು ಶೋಕಿಲಾಲನಾಗಿದ್ದ.. ಅಡ್ಡಕದಾರಿಯಲ್ಲಿ ದುಡಿದ ದುಡ್ಡನ್ನ ಶೋ ಆಫ್‌ ಮಾಡ್ತಿದ್ದ.. ಕಂತೆ ಕಂತೆ ನೋಟಿನ ಕಟ್ಟುಗಳ ಫೋಟೋಗಳು, ವಿಡಿಯೋಗಳನ್ನ ವಾಟ್ಸಾಪ್‌ನಲ್ಲಿ ಶೇರ್‌ ಮಾಡ್ತಿದ್ದ.. ಕಾರುಗಳು ಬಂಗಲೆಗಳ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ದ.

ಇನ್ನು, ವಿರೋಧಿಗಳನ್ನ ಹೆದರಿಸಲು ಪಿಸ್ತೂಲಿನ ಫೋಟೋಗಳನ್ನ ಕೂಡ ಸ್ಯಾಂಟ್ರೋ ರವಿ ವಾಟ್ಸಾಪ್‌ ಸ್ಟೇಟಸ್‌ಗೆ ಹಾಕಿದ್ದ.. ಪಾಯಿಂಟ್ 32 ಕಪ್ಪು ಬಣ್ಣದ ಪಿಸ್ತೂಲು ಮತ್ತು ಬುಲೆಟ್‌ಗಳ ಫೋಟೋವನ್ನ ಶೇರ್ ಮಾಡಿದ್ದ. ಇನ್ನು ಸ್ಯಾಂಟ್ರೋ ರವಿಯ ಅಸಲಿ ನಾಮ ಕೆ.ಎಸ್. ಮಂಜುನಾಥ್ ಹೆಸರಲ್ಲಿ ಪತ್ರಕರ್ತನ ಐಡಿ ಕಾರ್ಡ್‌ ಪತ್ತೆಯಾಗಿದೆ. ಸಂಚಲನ ಅನ್ನೋ ವಾರಪತ್ರಿಕೆಯ ಸಬ್ ಎಡಿಟರ್ ಎಂದು ನಮೂದಾಗಿದೆ.. ಹೀಗಾಗಿ, ಪತ್ರಕರ್ತನ ಸೋಗಿನಲ್ಲೂ ಸ್ಯಾಂಟ್ರೋ ರವಿ ವಂಚನೆ ಮಾಡಿದ್ದಾನಾ ಅನ್ನೋ ತನಿಖೆ ನಡೆಯುತ್ತಿದೆ.

ವಿವಾದದಲ್ಲಿ ಹೆಸರು ಹೊರಬರುತ್ತಿದ್ದಂತೆ ಸ್ಯಾಂಟ್ರೋ ರವಿ ನಾಪತ್ತೆಯಾಗಿದ್ದಾನೆ. 6 ದಿನಗಳು ಕಳೆದ್ರೂ ಸ್ಯಾಂಟ್ರೋ ರವಿ ಪತ್ತೆಯಿಲ್ಲ. ಇನ್ನೊಂದೆಡೆ ಸ್ಯಾಂಟ್ರೋ ರವಿ ಪತ್ನಿ ಮೈಸೂರಿನ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ 164ರ ಅಡಿ ಹೇಳಿಕೆ ದಾಖಲಿಸಿದ್ದಾರೆ.. ಇದ್ರಿಂದ ಜಾಮೀನು ಅರ್ಜಿಗೆ ಕಾಯ್ತಿರುವ ಸ್ಯಾಂಟ್ರೋ ರವಿಗೆ ಕಷ್ಟವಾಗಬಹುದು ಎಂದೇ ಹೇಳಲಾಗುತ್ತಿದೆ. ಮತ್ತೊಂದೆಡೆ ಪೊಲೀಸರು ಕೂಡ ಸ್ಯಾಂಟ್ರೋ ರವಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:09 pm, Sun, 8 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ