ಯುವತಿಯರ ವಯಸ್ಸು.. ಚೆಂದಕ್ಕೆ ತಕ್ಕಂತೆ ಕೋಡ್ ವರ್ಡ್: ಗರ್ಲ್ಸ್ ಸಪ್ಲೈಗೆ ಇಟ್ಟಿದ್ದ ‘ಕಾರ್’ ಕೋಡ್ವರ್ಡ್ಗಳು ಹೀಗಿವೆ
ರಾಜ್ಯ ರಾಜಕಾರಣದಲ್ಲಿ ಸ್ಯಾಂಟ್ರೋ ರವಿಯ ದಂಧೆಯ ವಿಚಾರವಾಗಿ ದೊಡ್ಡ ಸಂಚಲನವೇ ಎದ್ದಿದೆ. ಈತ ಕೈ ಇಟ್ಟ ಕಡೆಯಲ್ಲ ದಂಧೆ. ಟ್ರಾನ್ಸ್‌ಫರ್ ಆಗ್ಬೇಕಾ..? ಹುಡುಗೀರ ಸಪ್ಲೈ ಆಗ್ಬೇಕಾ..? ಏನ್ ಬೇಕು ಕೇಳಿ ಚಿಟಿಕೆ ಹೊಡೆಯೋದರಲ್ಲಿ ಕೆಲಸ ಮುಗಿಸಿಬಿಡ್ತಾನೆ. ಹೈಫೈ ಕಾರ್ ಹೆಸರಿಳಿದ್ರೆ ಸಾಕು ಲಲನೆಯರನ್ನ ಮಂಚಕ್ಕೆ ಕಳಿಸ್ತಿದ್ದ ಐನಾತಿ.
ಬೆಂಗಳೂರು: ಸ್ಯಾಂಟ್ರೋ ರವಿಯ(Santro Ravi) ಜೊತೆಗೆ ಸಚಿವರು, ಬಿಜೆಪಿ (BJP) ನಾಯಕರು ಇರುವ ಫೋಟೋಗಳನ್ನ ಕಾಂಗ್ರೆಸ್ (Congress) ರಿಲೀಸ್ ಮಾಡುತ್ತಿದ್ದರೆ. ಅತ್ತ ಹೆಚ್ಡಿ ಕುಮಾರಸ್ವಾಮಿ ವಿಡಿಯೋ ರಿಲೀಸ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಗಂಭೀರವಾದ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇನ್ನು ಸ್ಯಾಂಟ್ರೋ ಕಾರು ಓಡಿದಷ್ಟೇ ಸಲೀಸಾಗಿ ದಂಧೆ ಮುಗಿಸಿ ಬಿಸಾಡಿಬಿಡ್ತಾನೆ. ಓದಿರೋದು ಬರೀ ಪಿಯುಸಿ, ಆದ್ರೆ, ಈತನ ತಲೆಯಲ್ಲಿರೋ ಖತರ್ನಾಕ್ ಕಿಲಾಡಿತನಕ್ಕೇನು ಕಮ್ಮಿಯಲ್ಲ. ಗರ್ಲ್ಸ್ ಸಪ್ಲೈಗೆ ಇಟ್ಟಿದ್ದ ‘ಕಾರ್’ ಕೋಡ್‌ವರ್ಡ್ ಸಂಗತಿಗಳು ಬಯಲಿಗೆ ಬಂದಿವೆ.
ಹೌದು.. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ದಂಧೆಕೋರ ಸ್ಯಾಂಟ್ರೋ ರವಿ ಬಗ್ಗೆ ಬಾಂಬ್ ಸಿಡಿದಿದ್ದೇ ತಡ, ರವಿ ರಂಗೀನಾಟಗಳೆಲ್ಲಾ ರಸ್ತೆ ಬರುತ್ತಿವೆ. ಒಂದೆಡೆ ಪಾಲಿಟಿಕ್ಸ್ ಫೈಟ್ ನಡೆಯುತ್ತಿದ್ದರೆ, ಮತ್ತೊಂದ್ಕೆಡೆ ರವಿ ಕೋರ್ಡ್ ಕಳ್ಳಾಟಗಳು ಬಯಲಾಗುತ್ತಿವೆ. ಡೀಲ್‌ಗೊಂದು ಕೋಡ್, ಗರ್ಲ್ಸ್ ಸಪ್ಲೈಗೆ ಕೋರ್ಡ್ ವರ್ಡ್ ಬಳಸುತ್ತಿದ್ದ ಸ್ಯಾಂಟ್ರೋ ರವಿ ಸೀಕ್ರೆಟ್ ಕೇಳಿದ್ರೆ, ಹಿಂಗೂ ಮಾಡ್ತಿದ್ನಾ ಎಂದು ನೀವೇ ಶಾಕ್ ಆಗ್ತೀರಾ..
ವೇಶ್ಯಾವಾಟಿಕೆ ದಂಧೆ.. ಗರ್ಲ್ಸ್ ಸಪ್ಲೈಗೆ ಇಟ್ಟಿದ್ದ ‘ಕಾರ್’ ಕೋಡ್ ವರ್ಡ್?
ಒಂದೇ ಮಾತಲ್ಲಿ ಹೇಳಬೇಕಂದರೆ, ಇವನ ಉದ್ಯೋಗವೇ ಡೀಲ್ ಆ್ಯಂಡ್ ಸಪ್ಲೈ. ಅಧಿಕಾರಿಗಳಿಗೆ ವರ್ಗಾವಣೆ ಡೀಲ್ ಮಾಡಿಸುತ್ತಿದ್ದನಂತೆ. ರಾಜಕಾರಣಿಗಳಿಗೆ ಹುಡುಗಿಯರನ್ನ ಕಳುಹಿಸುತ್ತಿದ್ದನಂತೆ. ಈ ದಂಧೆಯಲ್ಲಿ ಪಿಎಚ್ಡಿ ಮಾಡಿದ್ದ ಈ ಕೇಡಿ, ತನ್ನ ದಂಧೆಯ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಹೋಟೆಲ್ನಲ್ಲಿ ಮೆನ್ಯೂ ಕಾರ್ಡ್ನಂತೆ ಹೈಟೆಕ್ ವೇಶ್ಯಾವಾಟಿಕೆಗೆ ಕೋರ್ಡ್ ವರ್ಡ್ ಇಟ್ಟಿದ್ದನಂತೆ. ಹಾಗಾದ್ರೆ ಏನಿದು ಸ್ಯಾಂಟ್ರೋ ರವಿಯ ಸೀಕ್ರೆಟ್..? ಹೈಟೆಕ್ ವೇಶ್ಯಾವಾಟಿಕೆಗೆ ಈ ಐನಾತಿ ಕೊಟ್ಟಿದ್ದ ಕೋಡ್ ವರ್ಡ್ ಏನು ಎನ್ನುವುದು ಈ ಕೆಳಗಿನಂತಿದೆ ನೋಡಿ.
ಯುವತಿಯರ ವಯಸ್ಸು.. ಚೆಂದಕ್ಕೆ ತಕ್ಕಂತೆ ಕೋಡ್ ವರ್ಡ್
ಸ್ಯಾಂಟ್ರೋ ರವಿ ವೇಶ್ಯಾವಾಟಿಕೆ ದಂಧೆಯಲ್ಲಿ 18 ರಿಂದ 22 ವಯಸ್ಸಿನ ಯುವತಿಯರಿಗೆ ಜಾಗ್ವಾರ್ ಎಂದು ಕೋಡ್ ವರ್ಡ್ ಕೊಟ್ಟಿದ್ನಂತೆ.. 23 ರಿಂದ 25 ವಯಸ್ಸಿನ ಯುವತಿಯರಿಗೆ ಆಡಿ ಕಾರು ಹೆಸರಿಟ್ಟಿದ್ರೆ, 26 ರಿಂದ 29 ವಯಸ್ಸಿನ ಯುವತಿಯರಿಗೆ ಬೆಂಜ್ ಕಾರು ಕೋಡ್ ಕೊಟ್ಟಿದ್ನಂತೆ. ಇಷ್ಟೇ ಅಲ್ಲ 30 ವರ್ಷದ ಹುಡುಗಿಯರಿಗೆ ಬಿಎಂಡಬ್ಲ್ಯೂ ಕಾರು ಹೆಸರಿನ ಕೋಡ್ ಇಟ್ಟಿದ್ನಂತೆ. ಇದರ ಜತೆಗೆ ಚಂದದ ಯುವತಿಯರು, ಅವರ ವಯಸ್ಸಿಗೆ ತಕ್ಕಂತೆಯೂ ಕೋಡ್ ವರ್ಡ್ ಕೊಟ್ಟಿದ್ನಂತೆ ಕಿಲಾಡಿ.. ಮಾರ್ಕೆಟ್ನಲ್ಲಿ ಜಾಗ್ವಾರ್ ಕಾರಿಗೆ ಫುಲ್ ಡಿಮ್ಯಾಂಡ್ ಇತ್ತಂತೆ. ಎಳಸು ಯುವತಿಯರಿಗೆ ಈತನ ಭಾರಿ ಬೇಡಿಕೆ ಇತ್ತು ಎನ್ನುವ ಬಗ್ಗೆ ಮಾಹಿತಿಯೂ ಇದೆ. ಹೀಗೆ ಕೋಡ್‌ವರ್ಡ್ ಇಟ್ಟಿದ್ದವನೇ, ಗ್ರಾಹಕ ರಾಜಕಾರಣಿಗಳಿಗೆ ಫೋಟೋ ಕಳಿಸಿ ಗಾಳ ಹಾಕಿದ್ದನಂತೆ. ಮಾಂಸದಂಧೆಯಲ್ಲಿ ಪ್ರಭಾವಿಗಳನ್ನೇ ಕ್ಲೈಂಟ್‌ಗಳನ್ನಾಗಿ ಮಾಡಿಕೊಳ್ಳುತ್ತಿದ್ದನಂತೆ. ಕ್ಲೈಂಟ್ಗಳ ಮೂಲಕವೇ ತನ್ನ ಕೆಲಸವನ್ನೂ ಸಲೀಸಲಾಗಿ ಮಾಡಿಕೊಳ್ತಿದ್ನಂತೆ.
ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳೇ ಕ್ಲೈಂಟ್ಗಳು
ರಾಜಕಾರಣಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳೇ ಸ್ಯಾಂಟ್ರೋ ರವಿಯ ಕ್ಲೈಂಟ್ಗಳಾಗಿದ್ರಂತೆ. ಆ ಕ್ಲೈಂಟ್ಗಳಿಗೆ ಹುಡುಗಿಯರ ಫೋಟೋಗಳನ್ನ ಕಳಿಸೋಕು ಮುನ್ನ, ಮೀಟಿಂಗ್ ಮಾಡುತ್ತಿದ್ನಂತೆ.. ಮೀಟಿಂಗ್ ಬಳಿಕ 50 ಯುವತಿಯರ ಫೋಟೋಸ್ ಕಳುಹಿಸಿ, ಅವರು ಸೆಲೆಕ್ಟ್ ಮಾಡಿದವರನ್ನ ಕಳುಹಿಸುತ್ತಿದ್ನಂತೆ.. ಸ್ಯಾಂಟ್ರೋ ಕಾರಿನಲ್ಲಿಯೇ ಕೂತು ದೊಡ್ಡ ದೊಡ್ಡ ಡೀಲ್ ಮಾಡುತ್ತಿದ್ನಂತೆ. ಅಚ್ಚರಿ ಅಂದ್ರೆ ಕ್ಲೈಂಟ್ನ ಪ್ರತಿಯೊಂದು ವ್ಯವಹಾರಗಳನ್ನೂ ಈ ಸ್ಯಾಂಟ್ರೋ ರವಿ ರೆಕಾರ್ಡ್ ಮಾಡುತ್ತಿದ್ದ ಅನ್ನೋ ಬಗ್ಗೆ ಮಾಹಿತಿ ಇದೆ.. ಯಾಕಂದ್ರೆ ತನ್ನ ಮುಂದಿನ ಕೆಲಸಕ್ಕೆ ಅನುಕೂಲ ಆಗಲಿ ಅಂತ ರೆಕಾರ್ಡ್ ಮಾಡ್ತಿದ್ನಂತೆ.. ಕೆಲಸ ಮಾಡಿಕೊಡದ ಅಧಿಕಾರಿಗಳಿಗೆ ವಿಡಿಯೋ ತೋರಿಸಿ ಬ್ಲ್ಯಾಕ್ಮೇಲ್ ಮಾಡ್ತಿದ್ದ ಅಂತಾನೂ ಹೇಳಲಾಗ್ತಿದೆ.
‘ಲ್ಯಾಪ್ಟಾಪ್’ ಹುಡುಕೋಕೆ ಹೋಗಿ ತಗ್ಲಾಕೊಂಡ್ನಾ ಸ್ಯಾಂಟ್ರೋ ರವಿ..?
ಅಸಲಿಗೆ ಸ್ಯಾಂಟ್ರೋ ರವಿ ಸೀಕ್ರೆಟ್ ಸ್ಫೋಟವಾಗಿದ್ದೇ ಅಂದೊಂದು ಲ್ಯಾಪ್‌ಟಾಪ್‌ನಿಂದ. ತನ್ನ ಪತ್ನಿಯ ವಿರುದ್ಧವೇ ದೂರು ಕೊಡಿಸಿದ್ದ ಸ್ಯಾಂಟ್ರೋ, ತಾನು ತೋಡಿದ್ದ ಖೇಡ್ಡಾಕ್ಕೆ ತಾನೇ ಬಿದ್ದಿದ್ದಾನೆ. ಅದೇಗಂದ್ರೆ, ಪತ್ನಿ ವಿರುದ್ಧ ಖಾಸಗಿ ವ್ಯಕ್ತಿ ಮೂಲಕ ದೂರು ದಾಖಲಿಸಿದ್ದ ರವಿ, ನಮ್ಮ ಮನೆಯಲ್ಲಿ ಕಳ್ಳತನ ಸುಲಿಗೆ ಆಗಿದೆ ಎಂದು ಆರೋಪ ಮಾಡಿದ್ದ. ಈ ಸಂಬಂಧ ಪತ್ನಿ, ಆಕೆಯ ತಂಗಿಯನ್ನ ಬೆಂಗಳೂರು ಕಾಟನ್ಪೇಟೆ ಪೊಲೀಸರು ಬಂಧಿಸಿದ್ದರಂತೆ.. ಇದಾದ ಬಳಿಕ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆತನ ಪತ್ನಿಯೇ ದೂರು ನೀಡಿದ್ದಳು. ಅತ್ಯಾಚಾರದ ಆರೋಪ ಹಾಗೂ ವೇಶ್ಯಾವಾಟಿಕೆಗೆ ಹೋಗುವಂತೆ ಕಿರುಕುಳ ನೀಡಿದ ಆರೋಪದಡಿ ದೂರು ನೀಡಿದ್ದಳು. ಆದ್ರೆ ಇಬ್ಬರ ಈ ಗುದ್ದಾಟ ಕೇವಲ ದೂರಿಗಷ್ಟೇ ಮುಗಿಯಲಿಲ್ಲ. ಅಸಲಿಗೆ ಇಲ್ಲಿ ಸ್ಯಾಂಟ್ರೋ ರವಿ ದೂರು ಕೊಟ್ಟಿದ್ದೇ ಆ ಲ್ಯಾಪ್‌ಟಾಪ್‌ಗಾಗಿ ಎನ್ನಲಾಗಿದೆ.
ಏನಿದು ಲ್ಯಾಪ್ಟಾಪ್ ಕಹಾನಿ.?
ಅಂದಹಾಗೆ, ಲ್ಯಾಪ್ ಟಾಪ್‌ಗಾಗಿ ಸ್ಯಾಂಟ್ರೋ ರವಿ ಹಾತೊರೆಯುತ್ತಿದ್ದ ಎನ್ನಲಾಗಿದೆ. ಯಾಕಂದ್ರೆ, ಸ್ಯಾಂಟ್ರೋ ರವಿ ಕಳೆದುಕೊಂಡಿರುವ ಲ್ಯಾಪ್ಟಾಪ್ನಲ್ಲಿ ಪ್ರಭಾವಿ ರಾಜಕಾರಣಿಗಳ ರಹಸ್ಯಗಳು ಅಡಗಿವೆಯಂತೆ.. ಪ್ರಮುಖವಾಗಿ ‘ಬಾಂಬೆ ಫ್ರೆಂಡ್ಸ್’ಗೆ ಸಲ್ಲಿಸಿದ್ದ ‘ಸೇವೆ’ಯ ಬಗ್ಗೆ ದಾಖಲೆಗಳು ಲ್ಯಾಪ್ಟಾಪ್ನಲ್ಲಿ ಇದ್ದ ಬಗ್ಗೆ ಮಾಹಿತಿ ಇದೆ. ಇದೇ ಕಾರಣಕ್ಕೆ ಸೀಕ್ರೆಟ್ ಲ್ಯಾಪ್ಟಾಪ್ನ್ನ ರವಿ ಪತ್ನಿ ಹೊತ್ತೊಯ್ದಿರಬೇಕು ಅಂತ ರವಿ ಅನುಮಾನ ವ್ಯಕ್ತಪಡಿಸಿದ್ದಾನಂತೆ.. ಲ್ಯಾಪ್ಟಾಪ್ ಮಿಸ್ ಆದಾಗಿನಿಂದಲೇ ಮಾಹಿತಿ, ದಾಖಲೆ ಲೀಕ್ ಆದ ಬಗ್ಗೆ ಮಾಹಿತಿಯೂ ಇದೆ.. ಪರ್ಸನಲ್ ದಾಖಲೆಗಳು ಲೀಕ್ ಆಗಿದ್ದರಿಂದಲೇ ಸ್ಯಾಂಟ್ರೋ ರವಿ ಹೆಸರು ಭಾರಿ ಚರ್ಚೆ ಗ್ರಾಸವಾಗಿದೆ.
ಪರಾರಿಯಾಗಿರೋ ಸ್ಯಾಂಟ್ರೋ ರವಿಗಾಗಿ ಖಾಕಿ ಹುಡುಕಾಟ
ಇನ್ನೂ ಇಷ್ಟೆಲ್ಲಾ ಕಿರಾತಕ ಕೆಲಸ ಮಾಡಿ ತಲೆಮರೆಸಿಕೊಂಡಿರೋ ಸ್ಯಾಂಟ್ರೋ ರವಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಈಗಾಗಲೇ ತನಿಖೆ ಆರಂಭಿಸಿರುವ ಪೊಲೀಸರು, ಶೀಘ್ರವೇ ಸ್ಯಾಂಟ್ರೋ ರವಿಯನ್ನ ಬಂಧಿಸುತ್ತೇವೆ ಎಂದಿದ್ದಾರೆ. ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಪ್ರತಿಕ್ರಿಯಿಸಿ ಯಾವುದೇ ಮುಲಾಜಿಲ್ಲದೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಒಟ್ಟಿನಲ್ಲಿ ಸ್ಯಾಂಟ್ರೋ ರವಿಯ ಒಂದೊಂದೇ ಮುಖವಾಡಗಳು ಬಯಲಾಗ್ತಿದ್ದು, ರವಿಯ ದಂಧೆ ಬೆನ್ನತ್ತಿ ಪೊಲೀಸರು ಹೊರಟಿದ್ದಾರೆ. ಆತ ಸೆರೆ ಸಿಕ್ಕರೆ ಮತ್ತಷ್ಟು ಖತರ್ನಾಕ ಕಹಾನಿಗಳು, ಲ್ಯಾಪ್‌ಟಾಪ್‌ನ ರಹಸ್ಯಗಳು ಬಯಲಿಗೆ ಬರಲಿವೆ.
ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:33 pm, Sat, 7 January 23