Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ

Mysore Police: ಸ್ಯಾಂಟ್ರೋ ರವಿ ಮಂಡ್ಯದವ. ಓದು ಇವನ ತಲೆಗೆ ಹತ್ತಲಿಲ್ಲ. ಪಿಯುಸಿ ಡ್ರಾಪ್ ಔಟ್ ಆಗಿದ್ದ ಮಂಜುನಾಥ್. ತಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿದ್ದರು. ಇವನಿಗೆ ಅಧಿಕೃತವಾಗಿ ಒಂದು ಮದುವೆಯಾಗಿದ್ದು, 1 ಹೆಣ್ಣು 1 ಗಂಡು ಮಗು ಇದೆ.

Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ
ಸ್ಯಾಂಟ್ರೋ ರವಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 07, 2023 | 1:53 PM

ಅವನು ಖತರ್ನಾಕ್ ಆಸಾಮಿ. ಯುವತಿಯರನ್ನು ನಂಬಿಸಿ ಮೋಸ ಮಾಡುವುದು, ವೇಶ್ಯಾವಾಟಿಕೆ ದಂಧೆಗೆ ಇಳಿಸೋದೆ ಅವನ ಕಾಯಕ. ಈ‌ ಬಗ್ಗೆ ಹತ್ತಾರು ಪ್ರಕರಣಗಳನ್ನು ಎದುರಿಸುತ್ತಿರುವ ಅವನ ವಿರುದ್ದ ಇದೀಗ ಮೈಸೂರಿನಲ್ಲಿ (Mysore Police) ಮತ್ತೊಂದು ಪ್ರಕರಣ ದಾಖಲಾಗಿದೆ. ಯಾರೀತಾ? ಏನೀತನ ಸ್ಟೋರಿ? ಮುಂದೆ ಓದಿ

ಮೇಲಿನ ಪೋಟೋದಲ್ಲಿರುವ ವ್ಯಕ್ತಿಯೇ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi). ಮೈಸೂರು ಬೆಂಗಳೂರಿನಲ್ಲಿ ವಾಸವಾಗಿರುವ ಈತನ ವಿರುದ್ದ ಮಹಿಳೆಯೊಬ್ಬರು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ನನ್ನನ್ನು ವಂಚಿಸಿ‌ ಅತ್ಯಾಚಾರವೆಸಗಿ ಮದುವೆಯಾಗಿದ್ದಾನೆ. ಮದುವೆಯಾಗಿ ಬೇರೆಯವರ ಜೊತೆ ಮಲಗುವಂತೆ ಒತ್ತಾಯಿಸುತ್ತಿದ್ದಾನೆ ಅಂತಾ ದೂರು ದಾಖಲಿಸಿದ್ದಾರೆ. ಇದರಿಂದಾಗಿ ಮಂಜುನಾಥ್ ವಿರುದ್ದ ಸೆಕ್ಷನ್ 506, 498A, 504, 376, 270, 313, 323 ಅಡಿಯಲ್ಲಿ ಜನವರಿ 2 2023ರಂದು ಪ್ರಕರಣ ದಾಖಲಾಗಿದೆ.

2018ರಲ್ಲಿ ಬಿಇ ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದ ಈಕೆ ಕೆಲಸ ಹುಡುಕುವ ವೇಳೆ ಜಾಹೀರಾತು ಮೂಲಕ ಪರಿಚಯವಾದ ಮಂಜುನಾಥ್ ಜ್ಯೂಸ್‌ನಲ್ಲಿ‌ ಮತ್ತು ಬರುವ ಔಷಧಿ ಕೊಟ್ಟು ಅತ್ಯಾಚಾರ ಮಾಡಿ ಹೆದರಿಸಿ‌ ನನ್ನನ್ನು ಮದುವೆಯಾದ. ನಂತರ ಬೇರೆಯವರ ಜೊತೆ ಹೋಗು, ವರದಕ್ಷಿಣೆ ತೆಗೆದುಕೊಂಡುಬಾ ಎಂದೆಲ್ಲ ಪೀಡಿಸುತ್ತಿದ್ದ. ನನಗೆ ಗರ್ಭಪಾತ ಮಾಡಿಸಿದ್ದಾನೆ. ಜಾತಿ ನಿಂದನೆ ಮಾಡಿದ್ದಾನೆ ಎಂಬ ಆರೋಪಗಳ‌ನ್ಜು ಮಾಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಾಗಿ ಮೈಸೂರು ಪೊಲೀಸರು ಬಲೆ ಬೀಸಿದ್ದಾರೆ‌.

ಮಂಡ್ಯದ ಸ್ಯಾಂಟ್ರೋ ರವಿ ತಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್‌ಪಿ, ಮದುವೆಯೂ ಆಗಿದೆ

ಆರೋಪಿ ಸ್ಯಾಂಟ್ರೋ ರವಿ ಮೂಲತಃ ಮಂಡ್ಯದವನು. ವಯಸ್ಸು 52. ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ‌ ವಾಸವಾಗಿದ್ದ. ಓದು ಈತನ ತಲೆಗೆ ಹತ್ತಲಿಲ್ಲ. ಪಿಯುಸಿ ಡ್ರಾಪ್ ಔಟ್ ಆಗಿದ್ದ ಮಂಜುನಾಥ್. ತಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿದ್ದರು. ಈತನಿಗೆ ಮದುವೆಯಾಗಿ ಒಂದು ಹೆಣ್ಣು ಒಂದು ಗಂಡು ಮಗು ಇದೆ.

ಈತ 1995ರಿಂದ ಹಲವಾರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಮೈಸೂರು ಬೆಂಗಳೂರು ಸೇರಿ ಹಲವು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿದೆ. ದ್ವಿಚಕ್ರ ವಾಹನ ಕಳ್ಳತನ, ಕಾರು ಕಳ್ಳತನ, ಅಪಹಣರಣ, ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ‌ ಈತ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. 1995ರಲ್ಲಿ ಮೊದಲ ಬಾರಿಗೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಮಂಜುನಾಥ್ ಆ ನಂತರ, ರವಿ ಅಂತಾ ತನ್ನ ಹೆಸರು ಬದಲಾಯಿಸಿಕೊಂಡಿದ್ದ.

ಸ್ಯಾಂಟ್ರೋ ರವಿ ವಿರುದ್ದ 2005ರಲ್ಲಿಯೇ ಈಗಿನ ಡಿಜಿ-ಐಜಿಪಿ ಪ್ರವೀಣ್ ಸೂದ್‌ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು

ಸ್ಯಾಂಟ್ರೋ ಕಾರಿನಲ್ಲಿ ವೇಶ್ಯಾವಾಟಿಕೆ ಹಿನ್ನೆಲೆ ಈತನಿಗೆ ಸ್ಯಾಂಟ್ರೋ ರವಿ ಅಂತಾ ಹೆಸರು ಬಂದಿತ್ತು. ಈತ ಸ್ಯಾಂಟ್ರೋ ಕಾರು ಸಮೇತ ಯುವತಿಯರನ್ನು ಸರಬರಾಜು‌ ಮಾಡುತ್ತಿದ್ದ.‌ ಅದರಲ್ಲೂ ರಷ್ಯಾ ಇರಾನ್ ದೆಹಲಿ ಮುಂಬೈ ಕೊಲ್ಕಾತ್ತಾದಿಂದ ದಂಧೆಗೆ ಯುವತಿಯರನ್ನು ಕರೆಸುತ್ತಿದ್ದ.

2005ರಲ್ಲಿ ಈತನ ವಿರುದ್ದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಮೈಸೂರು ಕಮಿಷನರ್ ಆಗಿದ್ದ ಪ್ರವೀಣ್ ಸೂದ್‌ ಈ‌ ಆದೇಶ ಹೊರಡಿಸಿದ್ದರು. ಅದಾದ ನಂತರ ಈತ ಒಂದು ವರ್ಷ ಬೆಂಗಳೂರು ಪರಪ್ಪನ ಜೈಲು ಸೇರಿದ್ದ. ಅಷ್ಟೇ ಅಲ್ಲ ಮೈಸೂರಿನಿಂದ ಗಡಿಪಾರು ಸಹಾ ಆಗಿದ್ದ ಸ್ಯಾಂಟ್ರೋ ರವಿ.

ನಂತರ ಮತ್ತಷ್ಟು ಹೈಟೆಕ್ ವೇಶ್ಯಾವಾಟಿಕೆ ದಂಧೆ ಆರಂಭಿಸಿದ್ದ. ಹಿರಿಯ ಅಧಿಕಾರಿಗಳು ರಾಜಕಾರಣಿಗಳು ಸರ್ಕಾರಿ ಅಧಿಕಾರಿಗಳಿಗೆ ಯುವತಿಯರ ಸರಬರಾಜು ಮಾಡಿ ಪ್ರಭಾವಿಗಳ ಸಂಪರ್ಕ ಬೆಳೆಸಿ ದಂಧೆಯನ್ನು ಮುಂದುವರಿಸಿದ್ದ. ಈತನ ಕರ್ಮಕಾಂಡ ಬಯಲು‌ ಮಾಡಿದವರ ವಿರುದ್ದ ಪ್ರಭಾವ ಬಳಸಿ ಪ್ರಕರಣ ದಾಖಲಿಸುತ್ತಿದ್ದ. ತನ್ನ ಪತ್ನಿ ಮೂಲಕ ಜಾತಿ ನಿಂದನೆ, ಅತ್ಯಾಚಾರ ಯತ್ನ, ಮಾನಹಾನಿ‌ ಪ್ರಕರಣ ದಾಖಲಿಸಿದ್ದ.‌ ಇನ್ಸಪೆಕ್ಟರ್ ಪೊಲೀಸ್ ಸಿಬ್ಬಂದಿ ಒಡನಾಡಿ ಸಂಸ್ಥೆಯವರ ವಿರುದ್ದ ಪ್ರಕರಣ ದಾಖಲಿಸಿ ಅವರನ್ನೂ ಹೆದರಿಸುತ್ತಿದ್ದ‌ ಈ ಸ್ಯಾಂಟ್ರೋ ರವಿ.

ಸದ್ಯ ಈತ ಬೆಂಗಳೂರಿನಲ್ಲಿ ಪತ್ನಿ ಜೊತೆ ವಾಸವಾಗಿದ್ದಾನೆ. ಬೆಂಗಳೂರಿನ ವಿಲ್ಸನ್ ಗಾರ್ಡನ್, ಆರ್ ಆರ್ ನಗರ ಮಲ್ಲೇಶ್ವರಂನಲ್ಲಿ ಮನೆ ಹೊಂದಿದ್ದಾನೆ. ಮೈಸೂರಿನ ದಟ್ಟಗಳ್ಳಿ, ಕುವೆಂಪು ನಗರ, ಶ್ರೀರಾಮಪುರ ಸೇರಿ 5 ಕಡೆಗಳಲ್ಲಿ ಮನೆ ಇದೆ. ಮೈಸೂರಿನ ಯುವತಿ ಪ್ರಕರಣ ದಾಖಲಿಸುತ್ತಿದ್ದಂತೆ ತಲೆ‌ ಮರೆಸಿಕೊಂಡಿದ್ದಾನೆ.

Mandya Mysore Santro Ravi background how he got that title details in Kannada

ಈತನಿಗಾಗಿ ಮೈಸೂರು ಪೊಲೀಸರು ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ. ಇದೆಲ್ಲಾ ಏನೇ ಇರಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬ ಈ ರೀತಿ ಸಿಎಂ ಸೇರಿ ಸಚಿವರು ಅಧಿಕಾರಿಗಳ ಹೆಸರನ್ನು ಅಷ್ಟು ಸುಲಭವಾಗಿ ಹೇಗೆ ಬಳಸಿಕೊಳ್ಳುತ್ತಿದ್ದಾನೆ ಅನ್ನೋದು ಸಧ್ಯದ ಯಕ್ಷ ಪ್ರಶ್ನೆಯಾಗಿದೆ.

ಅತ ಖತರ್ನಾಕ್ ಖದೀಮ. ಬಾಯಿ ಬಿಟ್ಟರೆ ಸಿಎಂ ಮಿನಿಸ್ಟರ್ ಅಂತಿದ್ದ. ಹಿರಿಯ ಪೊಲೀಸ್ ಅಧಿಕಾರಿಗಳು ಖಾಸಾ ಖಾಸಾ ಅಂತಿದ್ದ. ಹಿಂದೆ ಮುಂದೆ ನೋಡದೆ‌ ಎಲ್ಲರಿಗೂ ಏಕವಚನದಲ್ಲಿ ಬಾಯಿಗೆ ಬಂದ್ಹಾಗೆ ಮಾತಾಡ್ತಾ ಇದ್ದ. ಇದೀಗ ಈತನ ಬಾಯಿ ಬಡ್ಕುತನಕ್ಕೆ ಬ್ರೇಕ್ ಬಿದ್ದಿದೆ.

ಒಂದು ಕಡೆ ಸಿಎಂ ಜೊತೆ ಫೋಟೋಗೆ‌ ಪೋಸ್​ ಮತ್ತೊಂದು ಕಡೆ ಮಿನಿಸ್ಟರ್‌ಗಳ ಒಡನಾಟ. ಚಿನ್ನದ ಬಿಸ್ಕೆಟ್‌ಗಳ ಜೊತೆ‌ ಫೋಟೋ. ಕಂತೆ ಕಂತೆ ನೋಟುಗಳನ್ನು ಮುಂದಿಟ್ಟುಕೊಂಡು ಫೋಟೋಗೆ ಪೋಸ್ ಕೊಡುವುದು ಇವನ ಖಯಾಲಿ.

ಇದು ಒಂದು ಕಡೆಯಾದ್ರೆ ಮತ್ತೊಂದು‌ ಕಡೆ ಈತ ಬಾಯಿ‌ಬಿಟ್ರೆ ಬರೀ ಬಿಲ್ಡಪ್‌ಗಳೇ. ನನಗೆ ಅವರು ಗೊತ್ತು, ಇವರು ಗೊತ್ತು ಆ ಕೆಲ್ಸ ಮಾಡಿಸ್ತೇನೆ,‌ ಈ ಕೆಲ್ಸ ಮಾಡಿಸ್ತೇನೆ, ಸಿಎಂ ಮೀಟ್ ಮಾಡ್ತಾರೆ, ಸಲೀಂ ಸರ್ ಒನ್ ಟೂ ಒನ್ ಇದ್ದಾರೆ. ಪ್ರವೀಣ್ ಸೂದ್ ಅವರು ಒನ್ ಟೂ ಒನ್ ಇದ್ದಾರೆ ಎಂದೆಲ್ಲಾ ಬೊಗಳೆ ಬಿಡುವ ಜಾಯಮಾನದವ ಇವ.

ಇನ್ನು ಈತನ ಸ್ಕ್ರೀನ್ ಶಾಟ್‌ಗಳಂತೂ ಕೇಳೋದೆ ಬೇಡ. ನಿವೃತ್ತ ಐಎಎಸ್ ಅಧಿಕಾರಿ ಜೊತೆಯ ವಾಟ್ಸ್‌ಅಫ್ ಸ್ಕ್ರೀನ್ ಶಾಟ್, ಚಿನ್ನದ ಫ್ರೇಮ್‌ನ ಅಂಬೇಡ್ಕರ್ ಭಾವಚಿತ್ರ ಉಡುಗೊರೆ ಸಿದ್ದಪಡಿಸಿರುವುದಾಗಿ ಹೇಳಿರುವ ಚಾಟ್, ಹಲವು ಶಾಸಕರು ಸಚಿವರು, ಸಿಎಂ ಜೊತೆ ವಾಟ್ಸ್‌ಅಪ್ ಕಾಲ್‌ನಲ್ಲಿ ಮಾತನಾಡಿರುವ ಸ್ಕ್ರೀನ್ ಶಾಟ್‌ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈತನ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಹಾ ಈತನ ಬಗ್ಗೆ ಸ್ಪೋಟಕ ಆರೋಪ‌ ಮಾಡಿದ್ದಾರೆ. ಬಾಂಬೆಗೆ ಹೋಗಿದ್ದವರ ಜೊತೆ 12 ಹುಡುಗಿಯರನ್ನು ಈತ ಕಳುಹಿಸಿದ್ದ ಅಂತಾ ಹೇಳಿ ಸಂಚಲನ ಮೂಡಿಸಿದ್ದಾರೆ. ಇತ್ತ ಪ್ರಿಯಾಂಕಾ ಖರ್ಗೆ ಸಹ ಹೋಮ್ ಮಿನಿಸ್ಟರ್‌ಗಿಂತ ಸ್ಯಾಂಟ್ರೋ ರವಿಗೆ ಹೆಚ್ಚು ಮಾಹಿತಿ ಇದೆ ಅಂತಾ ಬಾಂಬ್ ಸಿಡಿಸಿದ್ದಾರೆ. ಇದೆಲ್ಲಾ ಕಾರಣಗಳಿಂದ ಸ್ಯಾಂಟ್ರೋ ರವಿ ವಿಚಾರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ‌.

ವರದಿ: ರಾಮ್, ಟಿವಿ 9, ಮೈಸೂರು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್