AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಬ್ಯಾಗ್​ನಲ್ಲಿ 6 ದಿನದ ಹೆಣ್ಣು ಮಗುವಿನ ಶವ ಪತ್ತೆ; ಹೆತ್ತವಳೇ ಹಂತಕಿ

ದೆಹಲಿಯ ಶಹದಾರಾ ಪ್ರದೇಶದ ಮನೆಯೊಂದರಲ್ಲಿದ್ದ ಬ್ಯಾಗ್​ನಲ್ಲಿ 6 ದಿನದ ಹೆಣ್ಣುಮಗುವಿನ ಶವ ಪತ್ತೆಯಾಗಿದೆ. ವಿಚಾರಣೆಯ ನಂತರ ಆ ಮಗುವಿನ ತಾಯಿ ದೆಹಲಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ. ತನಗೆ ನಾಲ್ಕನೇ ಬಾರಿ ಹೆಣ್ಣು ಮಗುವಾಗಿದ್ದು, ಮಾನಸಿಕ ಖಿನ್ನತೆಯಿಂದ ಆ ಮಗುವನ್ನು ಬ್ಯಾಗ್​ನಲ್ಲಿ ಹಾಕಿ ಛಾವಣಿಯ ಮೇಲೆ ಎಸೆದಿದ್ದೇನೆ ಎಂದಿದ್ದಾಳೆ.

ದೆಹಲಿಯಲ್ಲಿ ಬ್ಯಾಗ್​ನಲ್ಲಿ 6 ದಿನದ ಹೆಣ್ಣು ಮಗುವಿನ ಶವ ಪತ್ತೆ; ಹೆತ್ತವಳೇ ಹಂತಕಿ
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Aug 31, 2024 | 8:07 PM

Share

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಶಾಹದಾರ ಪ್ರದೇಶದಲ್ಲಿ ಮನೆಯೊಂದರ ಛಾವಣಿಯ ಮೇಲೆ ಚೀಲವೊಂದರಲ್ಲಿ 6 ದಿನದ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ. ಶಿಶುವಿನ ತಾಯಿ 28 ವರ್ಷದ ಶಿವಾನಿಯೇ ಈ ಕೊಲೆ ಮಾಡಿ ಮಗುವನ್ನು ಬ್ಯಾಗ್​ನಲ್ಲಿ ತುಂಬಿಸಿಟ್ಟಿದ್ದಾಳೆ. ಆಕೆ ಮಗುವನ್ನು ಛಾವಣಿಯ ಮೇಲೆ ಎಸೆದಿರುವುದಾಗಿ ಅಧಿಕಾರಿಗಳ ಬಳಿ ಒಪ್ಪಿಕೊಂಡ ನಂತರ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಬೆಳಗ್ಗೆ 5.30ರ ಸುಮಾರಿಗೆ ಪಿಸಿಆರ್ ಕರೆ ಬಂದಿದ್ದು, 6 ದಿನದ ಹೆಣ್ಣು ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಗುವಿನ ತಾಯಿ ಶಿವಾನಿ ಅವರನ್ನು ವಿಚಾರಿಸಿದ್ದು, ಹಿಂದಿನ ರಾತ್ರಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಆಕೆ ಪೋಷಕರ ಮನೆಗೆ ಬಂದಿರುವುದಾಗಿ ತಿಳಿಸಿದ್ದಾರೆ. ರಾತ್ರಿ 2.30ಕ್ಕೆ ತನ್ನ ಮಗುವಿಗೆ ಹಾಲುಣಿಸಿದ ನಂತರ ಅವಳು ಮಲಗಲು ಹೋದಳು. ನಂತರ ತನ್ನ ಮಗು ನಾಪತ್ತೆಯಾಗಿದೆ ಎಂದು ಹೇಳಿದಳು.

ಇದನ್ನೂ ಓದಿ: Shocking News: ಅಮ್ಮ ಕ್ಷಮಿಸಿಬಿಡು; ತಾಯಿಯನ್ನು ಕೊಂದು ಇನ್​ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ ಮಗ

ಪೊಲೀಸರು ಬಂದು ನೆರೆಹೊರೆಯ ಸಿಸಿಟಿವಿಗಳನ್ನು ಪರಿಶೀಲಿಸಲು ಮತ್ತು ಹತ್ತಿರದ ಎಲ್ಲಾ ಮನೆಗಳು ಮತ್ತು ಪ್ರದೇಶಗಳನ್ನು ಪರಿಶೀಲಿಸಲು ತಂಡವನ್ನು ರಚಿಸಲಾಯಿತು. ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಹೆರಿಗೆಯ ಸಮಯದ ಹೊಲಿಗೆಗಳನ್ನು ತೆಗೆಯಲು ತಾನು ಆಸ್ಪತ್ರೆಗೆ ಹೋಗಬೇಕಾಗಿದೆ ಎಂದು ಶಿವಾನಿ ಹೇಳಿದ್ದು, ಇದು ಪೊಲೀಸರನ್ನು ಅನುಮಾನಾಸ್ಪದವಾಗಿ ಕಂಡಿತ್ತು. ಅದೇನೇ ಇದ್ದರೂ, ಆಕೆಯ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸಿ ಅವರು ಆಕೆಗೆ ಹೋಗಲು ಅವಕಾಶ ಮಾಡಿಕೊಟ್ಟರು.

ಹುಡುಕಾಟದ ವೇಳೆ ಆಕೆಯ ಮನೆಯ ಮೇಲ್ಛಾವಣಿಯಲ್ಲಿ ಚೀಲವೊಂದು ಪತ್ತೆಯಾಗಿದ್ದು, ಅದರಲ್ಲಿ ಮಗು ಪತ್ತೆಯಾಗಿದೆ. ಆ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಆ ಮಗು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ತಾಯಿಯ ನಡವಳಿಕೆಯು ಅನುಮಾನಾಸ್ಪದವೆಂದು ಪರಿಗಣಿಸಲ್ಪಟ್ಟಿದ್ದರಿಂದ, ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಆಕೆ ದಾಖಲಾಗಿದ್ದ ಆಸ್ಪತ್ರೆ, ಬಸ್, ಮೆಟ್ರೋ ನಿಲ್ದಾಣಗಳು ಮತ್ತು ಶಹದಾರದಲ್ಲಿರುವ ದಂಪತಿಗಳ ನಿವಾಸಕ್ಕೆ ಕಳುಹಿಸಲಾಗಿದೆ. ಬಳಿಕ ಆಕೆಯನ್ನು ವಿಚಾರಣೆ ನಡೆಸಿದಾಗ ಆ ಮಹಿಳೆ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: Shocking News: ಮಧ್ಯರಾತ್ರಿ ಮೈದುನನನ್ನು ರೂಮ್​ಗೆ ಕರೆದು ಮರ್ಮಾಂಗ ಕತ್ತರಿಸಿದ ಅತ್ತಿಗೆ!

ಇದು ನನ್ನ ನಾಲ್ಕನೇ ಹೆಣ್ಣು ಮಗುವಾಗಿದ್ದು, ಅವರಲ್ಲಿ ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಾಕಷ್ಟು ಸಾಮಾಜಿಕ ಕಳಂಕವನ್ನು ಎದುರಿಸುತ್ತಿದ್ದೇನೆ ಎಂದು ಶಿವಾನಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಆಲೋಚನೆಗಳಿಂದ ಹೊರಬರಲಾಗದೆ ನಾನು ಮಗುವಿಗೆ ಹಾಲುಣಿಸುವಾಗ ಉಸಿರುಗಟ್ಟಿಸಿ ನಂತರ ಮನೆಯ ಛಾವಣಿಯ ಮೇಲೆ ಎಸೆದಿದ್ದೆ. ಈ ಕೃತ್ಯದ ನಂತರ ಆಕೆಗೆ ನಿದ್ರೆ ಬರಲಿಲ್ಲ ಮತ್ತು ತನ್ನ ಕುಟುಂಬ ಸದಸ್ಯರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಹಾಗಾಗಿ ಮಗು ಕಾಣೆಯಾಗಿದೆ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ