ಶ್ರದ್ಧಾ ವಾಕರ್ ಹತ್ಯೆ ಮರೆಯುವ ಮುನ್ನವೇ ದೆಹಲಿಯಲ್ಲಿ ಅನೇಕ ಇಂತಹ ಘಟನೆಗಳು ಸಂಭವಿಸುತ್ತಿವೆ. ದೆಹಲಿಯ ಮೆಟ್ರೋ ಪ್ರದೇಶದಲ್ಲಿ ಬ್ಯಾಗ್ ಒಂದರಲ್ಲಿ ಮಹಿಳೆಯ ತಲೆ ಸೇರಿದಂತೆ ಇತರೆ ದೇಹದ ಭಾಗಗಳು ಪತ್ತೆಯಾಗಿವೆ. ಆಗ್ನೇಯ ದೆಹಲಿಯ ಸರಾಯ್ ಕಾಲೇಖಾನ್ನಲ್ಲಿ ರಾಪಿಡ್ ಮೆಟ್ರೋ ನಿರ್ಮಾಣದ ಸ್ಥಳದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ವಿರೂಪಗೊಂಡಿರುವ ದೇಹದ ಭಾಗಗಳು ಪತ್ತೆಯಾಗಿವೆ.
ಕ್ಷಿಪ್ರ ಮೆಟ್ರೋ ನಿರ್ಮಾಣ ಸ್ಥಳದ ಮೇಲ್ಸೇತುವೆಯ ಪಕ್ಕದಲ್ಲಿರುವ ಸರೈ ಕಾಲೇ ಖಾನ್ ಐಎಸ್‌ಬಿಟಿ ಬಳಿ ದೇಹದ ಭಾಗಗಳು ಪತ್ತೆಯಾಗಿರುವ ಬಗ್ಗೆ ಪೊಲೀಸರು ಮಧ್ಯಾಹ್ನದ ವೇಳೆಗೆ ಮಾಹಿತಿ ಪಡೆದಿದ್ದಾರ ಎಂದು ಉಪ ಪೊಲೀಸ್ ಆಯುಕ್ತ (ಆಗ್ನೇಯ) ರಾಜೇಶ್ ಡಿಯೋ ತಿಳಿಸಿದ್ದಾರೆ.
ಪೊಲೀಸರು ಭಾಗಗಳನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದು, ಬಲಿಪಶುವಿನ ಗುರುತನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ವಿಧಿವಿಜ್ಞಾನ ತಂಡವು ಭಾಗಗಳು ಪತ್ತೆಯಾದ ಸ್ಥಳದಲ್ಲಿ ತನಿಖೆ ನಡೆಸುತ್ತಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಹಾಸನದಲ್ಲಿ ಪುಂಡರ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ಆವಾಜ್ ಹಾಕಿದ್ದ ಆಟೋ ಚಾಲಕನನ್ನು ಕೊಂದೇಬಿಟ್ಟರು!
ಕಳೆದ ವರ್ಷ, ದೆಹಲಿ ಪೊಲೀಸರು 28 ವರ್ಷದ ಅಫ್ತಾಬ್ ಪೂನಾವಾಲಾ ಎಂಬಾತನನ್ನು ತನ್ನ ಸಂಗಾತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಿ, ನಗರಾದ್ಯಂತ ಎಸೆದಿದ್ದ ಆಕೆಯ ದೇಹದ ಭಾಗಗಳನ್ನು ಪತ್ತೆ ಮಾಡಿದ್ದರು.
ಅಫ್ತಾಬ್ ಶ್ರದ್ಧಾ ವಾಕರ್ ಅವರ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300-ಲೀಟರ್ ರೆಫ್ರಿಜರೇಟರ್‌ನಲ್ಲಿ ಇರಿಸಿದ್ದ, ನಂತರ ನಗರದಾದ್ಯಂತ ಎಸೆದಿದ್ದ.