Bengaluru Crime: ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದಿದಕ್ಕೆ ಹೆಂಡತಿಯನ್ನು ಗೋಡೆಗೆ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಸಾಫ್ಟ್‌ವೇರ್ ಗಂಡ‌

ಲಕ್ಷ ಲಕ್ಷ ಹಣ ಬರುತ್ತಿದ್ದ ಕೆಲಸ ಬಿಟ್ಟು ಮನೆಯಲ್ಲಿದ್ದ ಗಂಡ ಹೆಂಡತಿ ತಲೆಯನ್ನು ಗೋಡೆಗೆ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕಂಡ ಮಗ ಮನೆಯಲ್ಲಿ ಓಡಿ ಹೋಗಿದ್ದಾನೆ.

Bengaluru Crime: ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದಿದಕ್ಕೆ ಹೆಂಡತಿಯನ್ನು ಗೋಡೆಗೆ ಹೊಡೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಸಾಫ್ಟ್‌ವೇರ್ ಗಂಡ‌
ಹರ್ಷ
Follow us
ಆಯೇಷಾ ಬಾನು
|

Updated on:Mar 19, 2023 | 7:51 AM

ಬೆಂಗಳೂರು: ಲಕ್ಷ ಲಕ್ಷ ಸಂಬಳ ಎಣಿಸುವ ಸಾಫ್ಟ್‌ವೇರ್ ಗಂಡ‌(Software Husband) ಕಂಠ ಪೂರ್ತಿ ಕುಡಿದು ಬಂದು ಹೆಂಡತಿ ತಲೆಯನ್ನು ಗೋಡೆಗೆ ಹೊಡೆದು ಕೊಲೆಗೆ ಯತ್ನಿಸಿ(Murder Attempt) ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಆರ್​ಆರ್​ ನಗರದಲ್ಲಿ(RR Nagar) ನಡೆದಿದೆ. ಅಪ್ಪ-ಅಮ್ಮನ ಜಗಳ ನೋಡಿದ 12 ವರ್ಷದ ಮಗ ಮನೆಯಿಂದ ಓಡಿ ಹೋಗಿದ್ದಾನೆ. ಸದ್ಯ ಗಂಡ-ಹೆಂಡತಿ ಇಬ್ಬರೂ ಆಸ್ಪತ್ರೆ ಸೇರಿದ್ದು ಪೋಷಕರ ಬಳಿ ಇರಲು ಮಗ ಭಯಪಡುವಂತಾಗಿದೆ.

ಮೂಲತಃ ತುಮಕೂರು ನಿವಾಸಿಯಾದ ಹರ್ಷ 10 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಹರ್ಷ ಹಾಗೂ ಸುಧಾರಾಣಿ ಇಬ್ಬರೂ ಸಾಫ್ಟ್‌ವೇರ್ ಇಂಜನಿಯರ್​ಗಳಾಗಿದ್ದು ದಂಪತಿಗೆ 12 ವರ್ಷದ ಮಗ ಇದ್ದಾನೆ. ಇಬ್ಬರಿಗೂ ಕೈ ತುಂಬ ಸಂಬಳವಿತ್ತು. ಸುಖ, ಸಂತೋಷದಲ್ಲೇ ಸಂಸಾರ ಸಾಗುತ್ತಿತ್ತು. ಆದ್ರೆ ಇತ್ತೀಚೆಗೆ ತುಮಕೂರಿನಲ್ಲಿ ಜಮೀನು ಮಾರಿದ್ದು, ಸಾಕಷ್ಟು ಹಣ ಬಂದಿತ್ತು. ಹಣ ಬಂದದ್ದೇ ಟೆಕ್ಕಿ ಹರ್ಷ ಸಂಪೂರ್ಣವಾಗಿ ಬದಲಾಗಿದ್ದ. ಇದ್ದಕ್ಕಿದ್ದಂತೆ ಕೋಟಿ ಕೋಟಿ ಹಣ ನೋಡಿದ ಹರ್ಷ ಲಕ್ಷ ಬರುತ್ತಿದ್ದ ಕೆಲಸ ಬಿಟ್ಟು ಮನೆಯಲ್ಲೇ ಸೆಟಲ್ ಆಗಿದ್ದ. ಕಳೆದ ಐದಾರು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುತ್ತಿದ್ದ. ಪ್ರತಿ ದಿನ ಕುಡಿದು ಬಂದು ಹೆಂಡತಿಗೆ ಮಾನಸಿಕ ಹಿಂಸೆ ನೀಡೋದು, ಹೊಡೆಯೋದು ಮಾಡ್ತಿದ್ದ. ಚನ್ನಾಗಿ ಮಗನ ಜೊತೆ ಇರುತ್ತಿದ್ದ ಹರ್ಷ ಕುಡಿದ ತಕ್ಷಣ ಸೈಕೊ ರೀತಿ ವರ್ತಿಸುತ್ತಿದ್ದನಂತೆ.

ಇದನ್ನೂ ಓದಿ: ಹಾಸನದಲ್ಲಿ ಪುಂಡರ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ಆವಾಜ್ ಹಾಕಿದ್ದ ಆಟೋ ಚಾಲಕನನ್ನು ಕೊಂದೇಬಿಟ್ಟರು!

ಕುಡಿತ ಬಿಟ್ಟು ಕೆಲಸಕ್ಕೆ ಹೋಗಿ ಎಂದದ್ದೆ ತಪ್ಪಾಯ್ತು

ಅದೇ ರೀತಿ ಮಾರ್ಚ್ 17 ರಂದು ಕೂಡ ಹರ್ಷ ಕುಡಿದು ಬಂದಿದ್ದ. ಆಗ ಹೆಂಡತಿ ಸುಧಾರಾಣಿ ಕುಡಿತ ಬಿಟ್ಟು ಕೆಲಸಕ್ಕೆ ಹೋಗಿ ಅಂದಿದ್ದಕ್ಕೆ ಆಕೆಯ ಜೊತೆ ಜಗಳವಾಡಿ ತಲೆಯನ್ನು ಗೋಡೆಗೆ ಹೊಡೆದು‌ ಕೊಲೆಗೆ ಯತ್ನಿಸಿ ನಂತರ ತಾನೂ ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮರೆಯಲ್ಲಿ ನಿಂತು ಅಪ್ಪ-ಅಮ್ಮನ ಜಗಳ ನೋಡುತ್ತಿದ್ದ ಮಗ ಮನೆಯಿಂದ ಓಡಿ ಹೋಗಿದ್ದಾನೆ. ಸದ್ಯ ದಂಪತಿ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಸುಧಾರಣಿ ಸಹೋದರನ ದೂರಿನ ಅನ್ವಯ ಆರ್​ಆರ್ ನಗರದಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:51 am, Sun, 19 March 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್