ರಾಜಸ್ಥಾನದ ದೇವಾರ್ ಊರೇ ಕಳ್ಳರ ಅಡಗುತಾಣ, ಬಂಧಿಸಲು ಹೋದ ಪೊಲೀಸರ ಮೇಲೆ ನಡೆಯುತ್ತೆ ಅಟ್ಯಾಕ್!

| Updated By: Rakesh Nayak Manchi

Updated on: Dec 07, 2023 | 10:09 AM

ಪೊಲೀಸರಿಗೆ ರಾಜಸ್ಥಾನದ ದೇವರ್ ಎಂಬ ಊರಿಗೆ ಹೋಗುವುದೆಂದರೆ ಎಲ್ಲಿಲ್ಲದ ಟೆನ್ಶನ್. ಏಕೆಂದರೆ, ಆ ಒಂದು ಊರು ಕುಖ್ಯಾತ ಗ್ಯಾಂಗ್​ಗಳ ಅಡಗುತಾಣವಾಗಿದೆ. ಒಂದೊಮ್ಮೆ ಪೊಲೀಸರು ಅಲ್ಲಿಗೆ ಹೋದರೆ ಊರಿಗೆ ಊರೇ ಅಟ್ಯಾಕ್ ಮಾಡುತ್ತದೆ. ಅದೇ ರೀತಿ, ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಮೂರು ಬಾರಿ ವಿಫಲರಾಗಿದ್ದು, ಇದೀಗ ಮತ್ತೆ ಆ ಊರಿಗೆ ಎಂಟ್ರಿಕೊಟ್ಟು ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ.

ರಾಜಸ್ಥಾನದ ದೇವಾರ್ ಊರೇ ಕಳ್ಳರ ಅಡಗುತಾಣ, ಬಂಧಿಸಲು ಹೋದ ಪೊಲೀಸರ ಮೇಲೆ ನಡೆಯುತ್ತೆ ಅಟ್ಯಾಕ್!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿ.7: ಪೊಲೀಸರಿಗೆ ರಾಜಸ್ಥಾನದ ದೇವರ್ (Dewar) ಎಂಬ ಊರಿಗೆ ಹೋಗುವುದೆಂದರೆ ಎಲ್ಲಿಲ್ಲದ ಟೆನ್ಶನ್. ಏಕೆಂದರೆ, ಆ ಒಂದು ಊರು ಕುಖ್ಯಾತ ಗ್ಯಾಂಗ್​ಗಳ ಅಡಗುತಾಣವಾಗಿದೆ. ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿ ದೇವಾರ್​ನಲ್ಲಿ ತಲೆಮರೆಸಿಕೊಳ್ಳುತ್ತಾರೆ. ಇಲ್ಲಿ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರು ಮೇಲೆ ಊರಿಗೆ ಊರೇ ಅಟ್ಯಾಕ್ ಮಾಡುತ್ತದೆ. ಪ್ರಕರಣವೊಂದರಲ್ಲಿ ಭಾಗಿಯಾಗಿ ಇಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಬೆಂಗಳೂರಿನ (Bengaluru) ಬ್ಯಾಡರಹಳ್ಳಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ದೇವಾರ್​ನ 25 ಕಿ.ಮಿ. ದೂರದ ಜೇತಾರಾಮ್​ನ ಆ ಘಟನೆ ಪೊಲೀಸರನ್ನು ಇನ್ನೂ ಕಾಡುತ್ತಿದೆ. ಕೆಲ ವರ್ಷಗಳ ಹಿಂದೆ ಕಳ್ಳರನ್ನು ಹಿಡಿಯಲು ತಮಿಳುನಾಡು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದರು.

ಕೃತ ಎಸಗಿದ ಒಂದೊಂದೊ ಗಂಟೆ ‘ಗೋಲ್ಡನ್ ಹವರ್’

ದೇಶದಲ್ಲಿ ವಿವಿದೆಡೆ ಕಳ್ಳತನ ಮಾಡಿ ಆ ಗ್ರಾಮದಲ್ಲಿ ಕಳ್ಳರು ಅಡಗಿ ಕುಳಿತುಕೊಳ್ಳುತ್ತಾರೆ. ಬೆಂಗಳೂರಿನಿಂದ ಹೊರ ಹೊದ ಕೂಡಲೇ ಮೊಬೈಲ್​ಗಳು ಸ್ವಿಚ್ ಆಫ್ ಆಗುತ್ತವೆ. ರೈಲುಗಳ ಮುಖಾಂತರ ಪರಾರಿಯಾಗುವ ಕಳ್ಳರನ್ನು ಬಂಧಸುವುದೇ ಸಾಸಹವಾಗಿದೆ. ಕೃತ್ಯ ನಡೆದ ಬಳಿಕ ಕೆಲವು ಗಂಟೆಗಳು ಪೊಲೀಸರ ಪಾಲಿಗೆ ಗೋಲ್ಡನ್ ಹವರ್ ಆಗಿದೆ. ಒಂದೊಮ್ಮೆ ಆರೋಪಿಗಳು ಆ ಗ್ರಾಮವನ್ನು ತಲುಪಿದರೆ, ನಂತರ ಆರೋಪಿಗಳನ್ನು ಬಂಧಿಸಲು ಹರಸಾಹಸ ಪಡಬೇಕು. ಸದ್ಯ, ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಹಾಡಹಗಲೇ ದರೋಡೆಗೆ ಇಳಿದ ಖತರ್ನಾಕ್ ಗ್ಯಾಂಗ್; ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸ್ರು

ಬ್ಯಾಡರಹಳ್ಳಿಯಲ್ಲಿ ಜ್ಯೂವೆಲರಿ ಶಾಪ್ ಲೂಟಿ ಮಾಡಿದ್ದ ಪ್ರಕರಣ ಸಂಬಂಧ ಅಂಗಡಿಯಾತನಿಗೆ ಗನ್ ಫೈರ್ ಮಾಡಿ ಎಸ್ಕೇಪ್ ಆಗಿದ್ದ ಐವರ ಪೈಕಿ ಇಬ್ಬರನ್ನು ಬಂಧಿಸಿರುವ ಪೊಲೀಸರಿಗೆ ಉಳಿದ ಮೂವರು ಆರೋಪಿಗಳು ರಾಜಸ್ಥಾನದಲ್ಲಿರುವ ದೇವಾರ್​ನಲ್ಲಿ ಅಡಗಿರುವ ಬಗ್ಗೆ ಪಕ್ಕ ಮಾಹಿತಿ ಲಭ್ಯವಾಗಿದೆ. ಆದರೆ ಬಂಧಿಸಲು ಹೋದಾಗ ಇಡೀ ಗ್ರಾಮವೇ ಮುಗಿಬೀಳುತ್ತಿದೆ.

ಎತ್ತರದ ಪ್ರದೇಶದಲ್ಲಿ ಕುಳಿತು ಪೊಲೀಸರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ಪೊಲೀಸರೇ ಮೇಲೆ ಕಳ್ಳರು ದಾಳಿ ನಡೆಸುತ್ತಿದ್ದಾರೆ. ಸದ್ಯ ಇಬ್ಬರನ್ನ ಬಂಧಿಸಿದ ಪೊಲೀಸರು ಶೇ.50 ರಷ್ಟು ರಿಕವರಿ ಮಾಡಿದ್ದಾರೆ. ಆದರೆ, ಉಳಿದ ಮೂವರ ಬಂಧನಕ್ಕೆ ದೇವಾರ್ ಪ್ರದೇಶಕ್ಕೆ ಮೂರು ಬಾರಿ ಹೋಗಿ ವಿಫಲರಾಗಿರುವ ಪೊಲೀಸರು, ಮತ್ತೊಮ್ಮೆ ರಾಜಸ್ಥಾನಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ.

ಬ್ಯಾಡರಹಳ್ಳಿಯ ವಿನಾಯಕ ಜ್ಯುವೆಲರಿಶಾಪ್​ನಲ್ಲಿ ಅಕ್ಟೋಬರ್ 12 ರಂದು ದರೋಡೆ ನಡೆಸಲಾಗಿತ್ತು. ಆರೋಪಿಗಳು ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಅಧಿಕ ಚಿನ್ನ ಕದ್ದು ಪರಾರಿಯಾಗಿದ್ದರು. ಸದ್ಯ ಬಂಧಿತರಾಗಿರುವ ಆರೋಪಿಗಳು ಕುಖ್ಯಾತ ಗ್ಯಾಂಗ್ ಲೀಡರ್​ಗಳಲ್ಲ, ಸಹಾಯಕರಾಗಿದ್ದರು. ಈ ಕೃತ್ಯದ ಮಾಸ್ಟರ್ ಮೈಂಡ್​​ಗಳಾದ ಗ್ಯಾಂಗ್ ಲೀಡರ್​ಗಳ ಬಂಧನಕ್ಕೆ ತನಿಖೆ ಮುಂದುವರಿದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 am, Thu, 7 December 23