ಧಾರವಾಡ: ರಜೆ ಮೇಲೆ ಬಂದಿದ್ದ ಯೋಧ ಟ್ರ್ಯಾಕ್ಟರ್​ನಿಂದ ಬಿದ್ದು ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 09, 2023 | 3:40 PM

ರಜೆಗೆಂದು ತಮ್ಮ ಊರಿಗೆ ಬಂದಿದ್ದ ಸೈನಿಕ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಧಾರವಾಡ ತಾಲೂಕಿನ ಗರಗ-ಲೋಕೂರ ಕ್ರಾಸ್‌ನಲ್ಲಿ ನಡೆದಿದೆ.

ಧಾರವಾಡ: ರಜೆ ಮೇಲೆ ಬಂದಿದ್ದ ಯೋಧ ಟ್ರ್ಯಾಕ್ಟರ್​ನಿಂದ ಬಿದ್ದು ಸಾವು
ಮೃತ ಯೋಧ ನಾಗಪ್ಪ ಉದ್ಮೀಶಿ
Follow us on

ಧಾರವಾಡ: ರಜೆಗೆಂದು ತಮ್ಮ ಊರಿಗೆ ಬಂದಿದ್ದ ಸೈನಿಕ (soldier) ಟ್ರ್ಯಾಕ್ಟರ್ ಮೇಲಿಂದ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಧಾರವಾಡ ತಾಲೂಕಿನ ಗರಗ-ಲೋಕೂರ ಕ್ರಾಸ್‌ನಲ್ಲಿ ನಡೆದಿದೆ. ನಾಗಪ್ಪ ಉದ್ಮೀಶಿ (27) ಮೃತ ಸೈನಿಕ. ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದವರು ಎಂದು ಗುರುತಿಸಲಾಗಿದೆ. ಗ್ರಾಮಸ್ಥರೊಂದಿಗೆ ಗರಗ ಮಡಿವಾಳೇಶ್ವರ ಜಾತ್ರೆ ಬಂದಿದ್ದು, ಬಳಿಕ ಜಾತ್ರೆ ಮುಗಿಸಿಕೊಂಡು ವಾಪಸ್ಸ್​ ಮರಳುತ್ತಿದ್ದಾಗ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ದುರ್ಘಟನೆ ನಡೆದಿದೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಗೃಹಿಣಿ ಅನುಮಾನಾಸ್ಪದ ಸಾವು 

ಗದಗ: ಬಾವಿಯಲ್ಲಿ ಗೃಹಿಣಿಯ ಅನುಮಾನಾಸ್ಪದ ಶವ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಹೊರವಲಯದ ಸಾಸ್ವಿಹಳ್ಳಿ ಪಾರ್ಮ್​ನಲ್ಲಿ ಘಟನೆ ನಡೆದಿದೆ. ರುಬಿನಾ ಕಣವಿ (28) ಮೃತ ದುರ್ದೈವಿ. ಇತ್ತ ಪತ್ನಿ ಸಾವನ್ನಪ್ಪಿದ್ದು, ಅತ್ತ 3 ವರ್ಷದ ಮಗು ನಾಪತ್ತೆ ಆಗಿದೆ. ಮೃತ ರುಬಿನಾ ಕಣವಿ ಕುಟುಂಬಸ್ಥರು ಪತಿ ದಾವಲ್ ಸಾಬ್ ಸೇರಿದಂತೆ ಆತನ ಕೊಲೆ ಆರೋಪ ಮಾಡಿದ್ದಾರೆ. ಮಹಿಳೆಯನ್ನು ಕೊಂದು ದೇಹದ ಮೇಲೆ ನೀರು ಹಾಕಿ ಬಾವಿಗೆ ಹಾರಿದ್ದಾಳೆ ಎಂದು ನಾಟಕ ಮಾಡಿದ್ದಾನೆಂದು ಹೇಳಲಾಗುತ್ತಿದೆ. ದಾವಲ್ ಸಾಬ್​ ಸಾಕಷ್ಟು ಕಿರುಕುಳ, ಜಗಳ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: Hassan: ಮೊದಲು ಮಿಸ್ಸಿಂಗ್, ಆ ಮೇಲೆ ಕಿಡ್ನಾಪ್, ಕೊನೆಗೆ ಕೊಲೆ ಕೇಸ್: ಇದು ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಗೆಳೆಯರಿಂದಲೇ ನವವಿವಾಹಿತ ಹತ್ಯೆಯಾದ ಕತೆ

ನೀರಿನ ತೊಟ್ಟಿಯಲ್ಲಿ ಬಿದ್ದು 3 ವರ್ಷದ ಹೆಣ್ಣು ಮಗು‌ ಸಾವು

ಬೀದರ್: ನೀರಿನ ತೊಟ್ಟಿಯಲ್ಲಿ ಬಿದ್ದು ಹೆಣ್ಣು ಮಗು‌ ಸಾವನ್ನಪ್ಪಿರುವಂತಹ ಘಟನೆ ಔರಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ನಡೆದಿದೆ. ಸ್ಫೋರ್ತಿ ತಂದೆ ಜೀವನ್ (3) ನೀರಿನ ತೊಟ್ಟಿಯಲ್ಲಿ ಬಿದ್ದು ಸಾವಿಗೀಡಾದ ಬಾಲಕಿ. ಅಂಗನವಾಡಿಗೆ ಹೋಗಿದ್ದಾಗ ಘಟನೆ ನಡೆದಿದೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಂಕ್ರದನ ಮುಗಿಲು‌ ಮುಟ್ಟಿದೆ. ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಔರಾದ್ ಪಟ್ಟಣದ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಯುವತಿ ಸಾವು

ತುಮಕೂರು: ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಯುವತಿ ಸಾವನ್ನಪ್ಪಿದ್ದು, ಸವಾರನಿಗೆ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ. ಗಂಭೀರ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಯುವತಿ, ಗಾಯಾಳು ಯುವಕನ ಹೆಸರು ತಿಳಿದುಬಂದಿಲ್ಲ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರವಾರ: ದೇವಸ್ಥಾನ ಕಳ್ಳತನ ಮಾಡಿ ಓಡಿ ಹೋಗುವಾಗ ಅಪಘಾತದಲ್ಲಿ ಸಿಕ್ಕಿಬಿದ್ದ ಕಳ್ಳರು

ಆಟೋ ಚಾಲಕನ ಮೇಲೆ ಕಾಡಾನೆ ದಾಳಿ

ಕೊಡಗು: ಆಟೋ ಚಾಲಕನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಆಟೋ ಸಂಪೂರ್ಣ ಜಖಂ ಆಗಿರುವಂತಹ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಬಳಿ ನಡೆದಿದೆ. ಚಾಲಕ ಕಿರಣ್​​ಗೆ ಗಂಭೀರ ಗಾಯವಾಗಿದೆ. ಆಟೋದಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಗಾಯಾಳು ಆಟೋ ಚಾಲಕ ಕಿರಣ್ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮತ್ತಷ್ಟ ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.