Online Fraud: ಗಂಡನ ಮಾತು ಕೇಳದೆ ಆನ್‌ಲೈನ್ ಆ್ಯಪ್ನಲ್ಲಿ ಲಕ್ಷಗಟ್ಟಲೇ ಹಣ ಹೂಡಿ ಮೋಸ ಹೋಗಿರುವ ಮಹಿಳಾ ಟೆಕ್ಕಿ, ಕಾಣೆಯಾಗಿದ್ದಾರೆ!
ಈ ಮಧ್ಯೆ ಚಿತ್ತಾಕರ್ಷಕ ವಂಚಕ ಆ್ಯಪ್ ಕುರಿತು ಪೊಲೀಸರು ಆಳವಾಗಿ ವಿಚಾರಿಸುತ್ತಿದ್ದಾರೆ. ಅದರಲ್ಲಿನ್ನೂ ಎಷ್ಟು ಅಮಾಯಕರು ಸಿಕ್ಕಿಬಿದ್ದಿದ್ದಾರೆ... ಎಷ್ಟೆಲ್ಲಾ ವಂಚನೆಗೊಳಗಾಗಿದ್ದಾರೆ ಎಂಬ ವಿವರಗಳಿಗಾಗಿ ಅಂತರ್ಜಾಲದಲ್ಲಿ ಜಾಲಾಡುತ್ತಿದ್ದಾರೆ. ಆದರೆ ಹಿಮಾ ಕುಟುಂಬ ತೀವ್ರ ದುಃಖದಲ್ಲಿದೆ.
ವಿಜಯವಾಡ: ಕಾಲಕ್ಕೆ ತಕ್ಕಂತೆ ಆಕರ್ಷಕ ಹೆಸರಿನ ಆನ್ ಲೈನ್ ಆ್ಯಪ್‌ಗಳನ್ನು ಹುಟ್ಟು ಹಾಕಿ ಅಮಾಯಕರನ್ನು ಬಲೆಗೆ ಬೀಳಿಸುವುದೇ ಇವರ ಕೆಲಸ. ಕೊನೆಗೆ ಏನಾಗುತ್ತಿದೆ ಎಂದು ಅರಿವಾಗುವ ವೇಳೆಗೆ ವಂಚನೆಗೆ ಶರಣಾಗಿರುವುದು (Online Fraud)… ತದನಂತರ ಎಲ್ಲವನ್ನೂ ಆಪ್ತರಿಗೆ ಒಪ್ಪಿಸುವುದು ವಾಡಿಕೆಯಾಗಿಬಿಟ್ಟಿದೆ. ಇತ್ತೀಚೆಗೆ ಮತ್ತೊಬ್ಬ ನತದೃಷ್ಟ ಮಹಿಳೆ (Married techie Woman)… ಈ ಆಪ್ ಗಳಿಂದ ಪ್ರಭಾವಿತಳಾಗಿ ಎಡವಟ್ಟು ಮಾಡಿಕೊಂಡು ಇದೀಗ ಎಲ್ಲಿಗೋ ಹೊರಟು ಬಿಟ್ಟಿದ್ದಾಳೆ (Missing).
ಆನ್‌ಲೈನ್ ಸಾಲದ ಆ್ಯಪ್‌ಗಳು… ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳು… ಆನ್‌ಲೈನ್ ಹೂಡಿಕೆ ಯೋಜನೆಗಳು… ಅವಿದ್ಯಾವಂತರು ಹಾಗಿರಲಿ ವಿದ್ಯಾವಂತರನ್ನೇ ತನ್ನ ಮೋಸದ ಜಾಲಕ್ಕೆ ಬೀಳಿಸುತ್ತಿವೆ. ಅಂತರ್ಜಾಲದಲ್ಲಿ ಈ ಐನಾತಿ ಖದೀಮರು ಲೀಲಾಜಾಲವಾಗಿ ವಿಹರಿಸುತ್ತಾ, ಮುಂದಿನ ಮೀನಿಗೆ ಗಾಳ ಹಾಕುವ ಕಾರ್ಯದಲ್ಲಿ ಮುಳುಗಿರುತ್ತಾರೆ. ಅಷ್ಟೊತ್ತಿಗೆ ವಂಚನೆಗೊಳಗಾದವರ ಜೀವನ ನಡುನೀರಿನಲ್ಲಿ ಮುಳುಗಿರುತ್ತೆ. ತುಂಬಿದ ಜೀವಗಳೇ ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಹಾಗಾಗಿ ಇನ್ನಾದರೂ ಎಚ್ಚೆತ್ತಿ, ಆನ್ ಲೈನೋ/ ಆಫ್ಲೈನೋ ವಂಚನೆಗೆ ಸಿಲುಕಬೇಡಿ… ಲೈಫ್ ಹಾಳುಮಾಡಿಕೊಳ್ಳಬೇಡಿ. ಅದೇನೇ ಇರಲಿ ಆನ್‌ಲೈನ್ ಮೋಸಕ್ಕೆ ಬಲಿಯಾಗುತ್ತಿರುವವರ ಪಟ್ಟಿಗೆ ಹಿಮಬಿಂದು ಎಂಬ ಮಹಿಳೆ ಲೇಟೆಸ್ಟ್ ಎಂಟ್ರಿ ಆಗಿದ್ದಾರೆ… ಕೇರಾಫ್ ಬೆಜವಾಡ. ಸಾಫ್ಟ್ ವೇರ್ ಇಂಜಿನಿಯರ್ ಆಗಿ ಖಾಸಗಿ ಕೆಲಸ ಮಾಡುತ್ತಿರುವ ಹಿಮಬಿಂದು… ಈಗ ಎಲ್ಲಿದ್ದಾಳೆ… ಏನಾಯ್ತು… ಎಂದು ಕುಟುಂಬಸ್ಥರು ಅಲ್ಲೋಲಕಲ್ಲೋಲಗೊಂಡು ಆಕೆಗಾಗಿ ಹುಡುಕುತ್ತಿದ್ದಾರೆ.
ಸೀತಾರಾಮಪುರದಲ್ಲಿ ಟೆಕ್ಕಿ ಹಿಮಬಿಂದು ನಾಪತ್ತೆ ವಿಷಯ ನಿಗೂಢವಾಗಿದೆ. ಹಿಮಬಿಂದು ವರ್ಷದ ಮೊದಲ ತಿಂಗಳಲ್ಲಿ 31 ರಂದು ನಾಪತ್ತೆಯಾದರು. ಹತ್ತಾರು ದಿನ ಕಳೆದರೂ ಆಕೆ ಪತ್ತೆಯಾಗಿಲ್ಲ. ಹಾಗಾದರೆ ಇಲ್ಲಿಯವರೆಗೆ ಏನಾಯಿತು ಎಂದು ನೋಡುವುದಾದರೆ… ಆಕೆ ಕಾಣೆಯಾಗಲು ಕಾರಣಗಳೇನು? ಎಂದು ನೋಡುವುದಾದರೆ ವಾಷಿಂಗ್ಟನ್ ಫಿಲ್ಮ್ ಸ್ಕ್ವೇರ್ ಎಂಬ ಹೆಸರಿನ ಅಪ್ಲಿಕೇಶನ್ ಕಣ್ಣಿಗೆ ಬೀಳುತ್ತದೆ.
ಹೆಸರೇ ವೈವಿಧ್ಯಮಯವಾಗಿದೆ. ಆದರೆ ಇದೊಂದು ಫೇಕ್ ಆ್ಯಪ್… ಟೆಕ್ಕಿ ಹಿಮಬಿಂದು ಅದರ ಮಾಯಕ್ಕೇ ಬಿದ್ದಿರುವುದು. ಮಹಿಳೆ ತಮ್ಮ ಖಾತೆಯಿಂದ 7 ಲಕ್ಷ ರೂಪಾಯಿಗಳನ್ನು ಕಂತುಗಳಲ್ಲಿ ಈ ಆ್ಯಪ್ಗೆ ಪಾವತಿಬಿಟ್ಟಿದ್ದಾರೆ. ತನ್ನ ಖಾತೆಗೆ ಹಣ ಸಂದಾಯವಾಗುತ್ತಿದ್ದಂತೆ ಕಂಪನಿ ಸೈಲೆಂಟ್ ಮೋಡಿಗೆ ಹೋಗಿಬಿಟ್ಟಿದೆ!
ತನಗೆ ಮೋಸವಾಗಿದೆ ಎಂದು ಹಿಮಬಿಂದು ಮನವರಿಕೆಯಾಗುತ್ತಿದ್ದಂತೆ ಒಂದೊಂದೇ ಬಿಂದುವಾಗಿ ಹಿಮದಂತೆ ಕರಗಿದ್ದಾರೆ/ಕುಗ್ಗಿದ್ದಾರೆ/ ಕುಸಿದು ಬಿದ್ದಿದ್ದಾರೆ… ಕೊನೆಗೆ ಮನನೊಂದು ಎಲ್ಲಿಗೆ ಪಯಣ, ಯಾವುದೋ ದಾರಿ, ಏಕಾಗಿ ಜೀವನ ಎಂದು ವ್ಯಾಕುಲಗೊಂಡು ಗಂಡ, ಮನೆಯನ್ನು ಬಿಟ್ಟು ಹೋಗಿದ್ದಾರೆ.
ಮೊದಮೊದಲು, ವಂಚಕ ನಕಲಿ ಆ್ಯಪ್ ನಲ್ಲಿ ಹಣ ಹಾಕಬೇಡ ಎಂದು ಪತಿ ನಾಗ ಕೃಷ್ಣಪ್ರಸಾದ್ ತಮ್ಮ ಪತ್ನಿ ಹಿಮಬಿಂದುಗೆ ಹೇಳಿದ್ದರಂತೆ. ಆದರೆ ವಿಧಿ, ಬಂಗಾರದ ಜಿಂಕೆಯ ಸೆಳೆತ ಹಿಮಬಿಂದು ಲಕ್ಷಾಂತರ ರೂಪಾಯಿ ಹಣ ಹೂಡಿಬಿಟ್ಟಿದ್ದಾರೆ… ಅತ್ತ ಆ ಕಂಪನಿಯೋ, ತನ್ನ ಖಾತೆಗೆ ಹಣ ಸಂದಾಯವಾಗುತ್ತಿದ್ದಂತೆ ಸೈಲೆಂಟಾಗಿ ಬಂದ್ ಆಗಿಬಿಟ್ಟಿದೆ.
ಕೊನೆಗೆ ಫ್ಯಾಮಿಲಿಗೆ ಮುಖ ತೋರಿಸಲಾರದೆ… ಅದೇನು ಗಟ್ಟಿ ನಿರ್ಧಾರ ತೆಗೆದುಕೊಂಡರೋ ಹಿಮಬಿಂದು ಗಾಯಬ್ ಆಗಿಬಿಟ್ಟಿದ್ದಾರೆ. ಎಲ್ಲಾದರೂ ಸೇಫ್ ಆಗಿ ಬದುಕಿದ್ದಾರೋ ಅಥವಾ ಸಾವಿಗೆ ಶರಣಾಗಿದ್ದಾರೋ ಎಂಬುದು ಮನೆಯವರಿಗೆ ತಕ್ಷಣಕ್ಕೆ ತಿಳಿದುಬಂದಿಲ್ಲ.
ಕೊನೆಗೆ ಅಪಾಯದ/ಆಘಾತದ/ಆತಂಕದ ಘಟನೆ ನಡೆದಿರುವ ಸುಳಿವು ಪಡೆದ ಪತಿ ದೂರು ನೀಡಿದ್ದಾರೆ. ಅದರ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೊಲೀಸರು ಪ್ರಕಾಶಂ ಬ್ಯಾರೇಜ್ ಬಳಿಯ ಸಿಸಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಮತ್ತು ಹಿಮಬಿಂದು ಅವರ ಚಲನವಲನವನ್ನು ಅಲ್ಲಿ ಪತ್ತೆ ಹಚ್ಚಿದ್ದಾರೆ. ಆದರೆ ಅಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಕುಟುಂಬದವ ಸದ್ಯದ ಆತಂಕ. ಪೊಲೀಸರು ಸದ್ಯ ವಿಶೇಷ ತಂಡಗಳನ್ನು ರಚಿಸಿ… ಹಿಮಬಿಂದುಗಾಗಿ ತಲಾಷ್ ನಡೆಸಿದ್ದಾರೆ.
ಈ ಮಧ್ಯೆ ಚಿತ್ತಾಕರ್ಷಕ ವಂಚಕ ಆ್ಯಪ್ ಕುರಿತು ಪೊಲೀಸರು ಆಳವಾಗಿ ವಿಚಾರಿಸುತ್ತಿದ್ದಾರೆ. ಅದರಲ್ಲಿನ್ನೂ ಎಷ್ಟು ಅಮಾಯಕರು ಸಿಕ್ಕಿಬಿದ್ದಿದ್ದಾರೆ… ಎಷ್ಟೆಲ್ಲಾ ವಂಚನೆಗೊಳಗಾಗಿದ್ದಾರೆ ಎಂಬ ವಿವರಗಳಿಗಾಗಿ ಅಂತರ್ಜಾಲದಲ್ಲಿ ಜಾಲಾಡುತ್ತಿದ್ದಾರೆ. ಆದರೆ ಹಿಮಾ ಕುಟುಂಬ ತೀವ್ರ ದುಃಖದಲ್ಲಿದೆ.