ವೈದ್ಯನ ಕೊಲೆ ಪ್ರಕರಣ: ಮಾಜಿ ಪ್ರೇಯಸಿಯ ವಿಚಾರಣೆ ವೇಳೆ ಹೊರಬಿತ್ತು ಅಸಲಿ ಸತ್ಯ

| Updated By: Rakesh Nayak Manchi

Updated on: Oct 10, 2022 | 10:11 AM

ವೈದ್ಯನ ಕೊಲೆ ಪ್ರಕರಣ ಸಂಬಂಧ ಆತನ ಮಾಜಿ ಪ್ರೇಯಸಿಯನ್ನು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ವೈದ್ಯನ ಪ್ರೇಯಸಿಗೆ ಬೇರೊಬ್ಬನೊಂದಿಗೆ ಲವ್ ಆರಂಭದ ನಂತರದ ಬೆಳವಣಿಗೆ ಇಲ್ಲಿದೆ.

ವೈದ್ಯನ ಕೊಲೆ ಪ್ರಕರಣ: ಮಾಜಿ ಪ್ರೇಯಸಿಯ ವಿಚಾರಣೆ ವೇಳೆ ಹೊರಬಿತ್ತು ಅಸಲಿ ಸತ್ಯ
ವೈದ್ಯನ ಕೊಲೆ ಪ್ರಕರಣ: ಮಾಜಿ ಪ್ರೇಯಸಿಯ ವಿಚಾರಣೆ ವೇಳೆ ಹೊರಬಿತ್ತು ಅಸಲಿ ಸತ್ಯ
Follow us on

ಬೆಂಗಳೂರು: ವೈದ್ಯನ ಕೊಲೆ ಪ್ರಕರಣ ಸಂಬಂಧ ಆತನ ಮಾಜಿ ಪ್ರೇಯಸಿಯನ್ನು ಬೇಗೂರು ಪೊಲೀಸರ ವಿಚಾರಣೆ ನಡೆಸಿದಾ ಅಸಲಿ ಸತ್ಯ ಹೊರಬಿದ್ದಿದೆ. ವೈದ್ಯ ವಿಕಾಸ್ ಪ್ರೀತಿಸುತ್ತಿದ್ದ ಪ್ರತಿಭಾ ಎಂಬ ಯುವತಿಗೆ ಮತ್ತೊಬ್ಬನ ಮೇಲೆ ಪ್ರೇಮಾಂಕುರವಾಗಿದೆ. ಇದರಿಂದ ಕೋಪಗೊಂಡ ವಿಕಾಸ್ ಪ್ರತಿಭಾಳ ಜೊತೆಗಿನ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಇದರಿಂದ ಕೋಪಗೊಂಡ ಪ್ರತಿಭಾ, ವಿಕಾಸ್​ನನ್ನು ಮುಗಿಸಿಬಿಡುವ ಹಂತಕ್ಕೆ ಹೋಗುತ್ತಾಳೆ. ಅದರಂತೆ ಪ್ರತಿಭಾ ಮತ್ತಿತರರು ಸೇರಿ ವಿಕಾಸ್​ನನ್ನು ಮನೆಯಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಪರಿಣಾಮವಾಗಿ ವಿಕಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದೆ.

ವಿಕಾಸ್ ಮತ್ತು ಪ್ರತಿಭಾ ಪರಸ್ಪರ ಪ್ರೀತಿಸುತ್ತಿದ್ದರು. ಕಾಲ ಉರುಳಿದಂತೆ ಪ್ರತಿಭಾಗೆ ಸುಶೀಲ್ ಎಂಬವನ ಮೇಲೆ ಪ್ರೇಮಾಂಕುರವಾಗುತ್ತದೆ. ಇದೇ ಪ್ರೀತಿ ದೈಹಿಕ ಸಂಪರ್ಕವರೆಗೂ ಹೋಗಿದೆ. ಇವರ ಕಳ್ಳಾಟ ಪ್ರಿಯತಮ ವಿಕಾಸ್​ಗೆ ತಿಳಿದಾಗ ಅವರ ನಡುವೆ ಜಗಳವೂ ನಡೆಯುತ್ತದೆ. ಇಷ್ಟಾದರೂ ಮಾತು ಕೇಳದ ಪ್ರತಿಭಾಳ ಜೊತೆಗಿನ ಖಾಸಗಿ ಫೋಟೋ, ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದಾನೆ. ಅಂದಿನಿಂದ ಪ್ರತಿಭಾ ವಿಕಾಸ್​ನನ್ನು ಮುಗಿಸಲು ಸಂಚು ರೂಪಿಸುತ್ತಾಳೆ.

ಪ್ರತಿಭಾಳ ಸಂಚಿನಲ್ಲಿ ಪ್ರಿಯಕರ ವಿಕಾಸ್ ಕೂಡ ಕೈ ಜೋಡಿಸಿದ್ದು, ಅಂದುಕೊಂಡಂತೆ ತಮ್ಮ ಸಹಚರರೊಂದಿಗೆ ಸೇರಿಕೊಂಡು ವಿಕಾಸ್​ನನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸುತ್ತಾರೆ. ಗಂಭೀರವಾಗಿ ಏಟು ತಿಂದ ವಿಕಾಸ್ ಸಾವನ್ನಪ್ಪುತ್ತಾನೆ. ಸದ್ಯ ಪ್ರಕರಣ ಸಂಬಂಧ ಸುಶೀಲ್, ಗೌತಮ್, ಪ್ರತಿಭಾ, ಸೂರ್ಯ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಡಿಜಿಟಲ್ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 am, Mon, 10 October 22