ಬೆಂಗಳೂರು: ಮಲಗಿದ್ದ ಬೀದಿನಾಯಿಯೊಂದರ ಮೇಲೆ ಕಾರು ಹತ್ತಿಸಿ ಅಮಾನುಷವಾಗಿ ಕೊಂದಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿವೃತ್ತ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ರೊಬ್ಬರಿಂದ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.
ನಗರದ ಹುಳಿಮಾವು ಬಳಿಯ ದೊಡ್ಡಕಮ್ಮನಹಳ್ಳಿಯಲ್ಲಿ ಘಟನೆ ನಡೆದಿದೆ. ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ನಿವೃತ್ತ ಇನ್ಸ್ಪೆಕ್ಟರ್ ನಂತರ ಶ್ವಾನ ನೋವಿನಿಂದ ಕೂಗಿಟ್ಟರೂ ಕ್ಯಾರೇ ಎನ್ನದೆ ಹಾಗೇ ಹೊರಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿಕ್ಕಬಳ್ಳಾಪುರ: ನಾಮಕರಣದ ತಂಗಳು ಮಶ್ರೂಮ್ ಬಿರಿಯಾನಿ ಸೇವಿಸಿ 25 ಜನರು ಅಸ್ವಸ್ಥ