ಕ್ಲಿನಿಕಲ್​ ಡಿಪ್ರೆಶನ್​ಗೆ ಒಳಗಾಗಿದ್ದ ಜಯಶ್ರೀ ಸಂಬಂಧಗಳ ಬಗ್ಗೆ ತುಂಬ ಭಯ ಬೆಳೆಸಿಕೊಂಡಿದ್ದರು: ಭಾವನಾ ಬೆಳಗೆರೆ

ಕಳೆದ ಬಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದು ನನಗೇ ಮೊದಲು ಗೊತ್ತಾಗಿತ್ತು. ನಮ್ಮ ಬಿಗ್​ಬಾಸ್​ ಗ್ರೂಪ್​ನಿಂದ ಕ್ಟಿಟ್​ ಆಗಿದ್ದಳು. ನಂಬರ್​ ಚೇಂಜ್​ ಮಾಡಿಕೊಂಡಿದ್ದಳು. ನಾವೆಲ್ಲ ಬೈತೀವಿ ಎಂದು ಹೆದರಿದ್ದಳು.

ಕ್ಲಿನಿಕಲ್​ ಡಿಪ್ರೆಶನ್​ಗೆ ಒಳಗಾಗಿದ್ದ ಜಯಶ್ರೀ ಸಂಬಂಧಗಳ ಬಗ್ಗೆ ತುಂಬ ಭಯ ಬೆಳೆಸಿಕೊಂಡಿದ್ದರು: ಭಾವನಾ ಬೆಳಗೆರೆ
ಜಯಶ್ರೀ ರಾಮಯ್ಯ
Follow us
Lakshmi Hegde
|

Updated on:Jan 25, 2021 | 3:43 PM

ಬಿಗ್​ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಶ್ರೀ ಹೇಗಿದ್ದರು, ಅವರಿಗೆ ಇದ್ದ ನಿಜವಾದ ಸಮಸ್ಯೆಯೇನು ಎಂಬ ಬಗ್ಗೆ ಪತ್ರಕರ್ತೆ, ಸಿನಿಮಾ ನಿರ್ಮಾಪಕಿ ಭಾವನಾ ಬೆಳಗೆರೆ ಟಿವಿ 9 ಕನ್ನಡ ಡಿಜಿಟಲ್​ ಜತೆ ಹಂಚಿಕೊಂಡಿದ್ದಾರೆ.

ಜಯಶ್ರೀ ಖಿನ್ನತೆಯಿಂದ ಬಳಲುತ್ತಿದ್ದುದು ಸತ್ಯ. ಆಕೆಯ ಮೂಡ್ ತುಂಬ ಸ್ವಿಂಗ್ ಆಗುತ್ತಿತ್ತು. ನಾನೂ ಅನೇಕ ಬಾರಿ ಅವಳಿಗೆ ತಿಳಿ ಹೇಳಿದ್ದೆ. ಬಿಗ್​ಬಾಸ್​ ಮುಗಿದ ಮೇಲೆ ನಮ್ಮನೆಗೂ ಬಂದು ಎರಡು ದಿನ ಇದ್ದಳು. ತುಂಬ ಡಿಪ್ರೆಶನ್​ ಇತ್ತು. ನನಗೆ ಯಾರೂ ಇಲ್ಲ, ಅಪ್ಪ-ಅಮ್ಮ ಇದ್ದರೂ ಚೆನ್ನಾಗಿ ನೋಡಿಕೊಳ್ಳೋದಿಲ್ಲ. ಬೆಂಬಲ ಕೊಡೋದಿಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದಳು. ನನಗೆ ಯಾರೂ ಇಲ್ಲ ಎಂಬುದನ್ನೇ ಪದೇಪದೆ ಕೊರಗುತ್ತ ಹೇಳಿಕೊಳ್ಳುತ್ತಿದ್ದಳು. ಆದರೆ ತಾತನ ಬಗ್ಗೆ ಮಾತ್ರ ತುಂಬ ಗೌರವ ಹೊಂದಿದ್ದಳು. ನನ್ನ ಅಮ್ಮಂಗೂ ಮಾನಸಿಕವಾಗಿ ಸಮಸ್ಯೆಯಿದೆ ಎಂಬುದನ್ನೂ ಹೇಳಿಕೊಂಡಿದ್ದಳು.

ಆಕೆಗೆ ಯಾವುದೇ ಸಂಬಂಧಕ್ಕೆ ತುಂಬ ಅಂಟಿಕೊಳ್ಳಲು ಭಯ ಇತ್ತು. ಅವರೇನಾದರೂ ಹೇಳಿಬಿಟ್ಟರೆ ನನಗೆ ನೋವಾಗುತ್ತದೆ ಎಂದೇ ಸದಾ ಯೋಚಿಸುತ್ತಿದ್ದಳು. ಆಕೆಯಲ್ಲಿ ನೆಗೆಟಿವ್​ ಥಿಂಕಿಂಗ್​ ಜಾಸ್ತಿಯಿತ್ತು. ನೀನು ನೆಗೆಟಿವ್​ ಆಗಿ ಯೋಚಿಸಬೇಡ, ನಗುತ್ತ ಇರು ಎಂದೆಲ್ಲ ನಾನು ಹೇಳಿದ್ದೆ. ಅವಳಿಗೆ ಕಾಲೇಜಿನಲ್ಲಿ ಇದ್ದಾಗ ಒಬ್ಬನೊಂದಿಗೆ ಪ್ರೀತಿಯಿತ್ತು. ನಂತರ ಅದು ಬ್ರೇಕ್​ಅಪ್​ ಆಗಿತ್ತು ಅಂತ ಬಿಗ್​ಬಾಸ್​ನಲ್ಲಿ ಇದ್ದಾಗ ಹೇಳಿಕೊಂಡಿದ್ದಳು. ನಾನೂ ಅವಳನ್ನು ಸಮಾಧಾನ ಮಾಡಿದ್ದೆ. ಸಂಬಂಧ ಎಂದಮೇಲೆ ಅಲ್ಲಿ ಏರುಪೇರುಗಳು ಇದ್ದೇ ಇರುತ್ತದೆ. ಅದನ್ನೆಲ್ಲ ನಿಭಾಯಿಸಬೇಕು ಎಂದೂ ಯಾವಾಗಲೂ ಹೇಳುತ್ತಿದ್ದೆ. ಆಗೆಲ್ಲ, ಆಯಿತು ನಾನು ಪ್ರಯತ್ನ ಮಾಡುತ್ತೇನೆ, ಇನ್ನು ಮುಂದೆ ಚೆನ್ನಾಗಿರುತ್ತೇನೆ ಎಂದೆಲ್ಲ ಹೇಳುತ್ತಿದ್ದಳು. ಆದರೆ ನಾವು ಎಷ್ಟೇ ಬುದ್ಧಿ ಹೇಳಿದರೂ, ಸಮಾಧಾನ ಮಾಡಿದರೂ ಸ್ವಲ್ಪ ಹೊತ್ತಿಗೆ ಅದನ್ನು ಮರೆತೇ ಬಿಡುತ್ತಿದ್ದಳು. ನಾವು ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳುತ್ತಿದ್ದಳು ಆದರೆ ಯಾವುದನ್ನೂ ಕಾರ್ಯರೂಪಕ್ಕೆ ತರುತ್ತಿರಲಿಲ್ಲ. ಮತ್ತೆ ಅದೇ ಖಿನ್ನತೆಗೆ ಜಾರುತ್ತಿದ್ದಳು.

ಕಳೆದ ಬಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದು ನನಗೇ ಮೊದಲು ಗೊತ್ತಾಗಿತ್ತು. ನಮ್ಮ ಬಿಗ್​ಬಾಸ್​ ಗ್ರೂಪ್​ನಿಂದ ಕ್ಟಿಟ್​ ಆಗಿದ್ದಳು. ನಂಬರ್​ ಚೇಂಜ್​ ಮಾಡಿಕೊಂಡಿದ್ದಳು. ನಾವೆಲ್ಲ ಬೈತೀವಿ ಎಂದು ಹೆದರಿದ್ದಳು. ಆಗ ಜೆಪಿ ನಗರ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಳು. ನಾವು ಅಲ್ಲಿಗೆ ಹೋಗಬೇಕು ಎನ್ನುವಷ್ಟರಲ್ಲೇ ಡಿಸ್​ಚಾರ್ಜ್​ ಮಾಡಿಕೊಂಡು ಹೊರಟಿದ್ದಳು. ಜಯಶ್ರೀ ಸಾದಾ ಖಿನ್ನತೆಗೆ ಒಳಗಾಗಿರಲಿಲ್ಲ. ಕ್ಲಿನಿಕಲ್​ ಡಿಪ್ರೆಶನ್​ನಿಂದ ಬಳಲುತ್ತಿದ್ದಳು. ಅವಳು ಸದಾ ಸಾವಿನ ಬಗ್ಗೆ ಯೋಚಿಸಲು ಶುರು ಮಾಡಿದ್ದಳು. ಸಾವೊಂದೇ ತನ್ನ ಮುಂದಿರುವ ದಾರಿ ಎಂದು ಭಾವಿಸಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಳು. ತನ್ನ ಮನಸನ್ನು ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ದುರದೃಷ್ಟಕ್ಕೆ ಕೊನೆಗೂ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು.

ಭಾವನಾ ಬೆಳಗೆರೆ

ಸಾವಿನ ಹಾದಿಯನ್ನೇ ತುಳಿದ ಬಿಗ್​ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ; ವೃದ್ಧಾಶ್ರಮದಲ್ಲಿ ಆತ್ಮಹತ್ಯೆ

Published On - 3:41 pm, Mon, 25 January 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್