ಸಾವಿನ ಹಾದಿಯನ್ನೇ ತುಳಿದ ಬಿಗ್ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ; ವೃದ್ಧಾಶ್ರಮದಲ್ಲಿ ಆತ್ಮಹತ್ಯೆ
ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ರಾಮಯ್ಯ 2020ರ ಜುಲೈನಲ್ಲಿ ಕೂಡ ಆತ್ಮಹತ್ಯೆ ಯತ್ನ ಮಾಡಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ.
ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ರಾಮಯ್ಯ 2020ರ ಜುಲೈನಲ್ಲಿ ಕೂಡ ಆತ್ಮಹತ್ಯೆ ಯತ್ನ ಮಾಡಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ನಟ ಸುದೀಪ್ ಕೂಡ ಸಾಂತ್ವನದ ಮಾತುಗಳನ್ನಾಡಿದ್ದರು. ಕಳೆದ ಒಂದು ವಾರದಿಂದಲೂ ವೃದ್ಧಾಶ್ರಮದಲ್ಲಿ ವಾಸವಾಗಿದ್ದರು. ಇಂದು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಶ್ರೀ ರಾಮಯ್ಯ ಬಿಗ್ಬಾಸ್ 3 ಸೀಸನ್ರಲ್ಲಿ ಸ್ಪರ್ಧಿಯಾಗಿದ್ದರು. ಉಪ್ಪು ಹುಳಿ ಖಾರ, ಶಿರಾಡಿ ಘಾಟ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಳೆದ ಜುಲೈನಲ್ಲಿ ಆತ್ಮಹತ್ಯೆ ಯತ್ನ ನಡೆಸಿದ ನಂತರ ಮತ್ತೆ ಬದುಕಿನೆಡೆಗೆ ಉತ್ಸಾಹ ಹೊಂದಿದ್ದೇನೆ, ನಾನೀಗ ಆರಾಮಾಗಿ ಇದ್ದೇನೆ ಎಂದು ಹೇಳಿದ್ದ ಜಯಶ್ರೀ,ತಲೆಯನ್ನು ಪೂರ್ತಿ ಬೋಳಾಗಿಸಿಕೊಂಡು, ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ನೀಡಿ ಮಾದರಿಯಾಗಿದ್ದರು. ಒಳ್ಳೆಯ ನಾಳೆಗೆ ಮೊದಲ ಹೆಜ್ಜೆ ಎಂದೂ ತಮ್ಮ ಫೋಟೋಕ್ಕೆ ಕ್ಯಾಪ್ಷನ್ ನೀಡಿದ್ದರು.
Published On - 1:45 pm, Mon, 25 January 21



