ನಿನ್ನೆ ರಾತ್ರಿ ಊಟ ಮಾಡಿ ರೂಂ ಸೇರಿದ್ದ ಜಯಶ್ರೀ ಹೊರಬರಲಿಲ್ಲ..

ಜಯಶ್ರೀ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು ಬೆಳಗ್ಗೆ 11.30ರ ಹೊತ್ತಲ್ಲಾದರೂ, ಅವರು ನಿನ್ನೆ ತಡರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿನ್ನೆ ರಾತ್ರಿ ಊಟ ಮಾಡಿ ರೂಂ ಸೇರಿದ್ದ ಜಯಶ್ರೀ ಹೊರಬರಲಿಲ್ಲ..
ಜಯಶ್ರೀ ರಾಮಯ್ಯ
Lakshmi Hegde

|

Jan 25, 2021 | 4:23 PM

ಬೆಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ರಾಮಯ್ಯ ಇಂದು ಸಂಧ್ಯಾಕಿರಣ ಪುನರ್ವಸತಿ ಕೇಂದ್ರ ಮತ್ತು ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಜಯಶ್ರೀಯವರು ಡಿ.25ರಂದು ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದು. ಅಲ್ಲವರಿಗೆ ಕೌನ್ಸೆಲಿಂಗ್​ ನಡೆಯುತ್ತಿತ್ತು. ನಿನ್ನೆ ರಾತ್ರಿ ಊಟ ಮಾಡಿ ತನ್ನ ಕೊಠಡಿಗೆ ಹೋಗಿದ್ದ ಜಯಶ್ರೀ ಮುಂಜಾನೆಯಿಂದಲೂ ಹೊರಬಂದಿರಲ್ಲಿ. ಎಷ್ಟೇ ಬಾಗಿಲು ಬಡಿದರೂ ತೆರೆಯದಾಗ ಪುನರ್ವಸತಿ ಕೇಂದ್ರ ಸಿಬ್ಬಂದಿಯೇ ಬಾಗಿಲು ತೆರೆದು ಒಳಹೋಗಬೇಕಾಯಿತು. ಇದೆಲ್ಲ ನಡೆದಿದ್ದು ಬೆಳಗ್ಗೆ 11.30ರ ಹೊತ್ತಲ್ಲಾದರೂ, ಜಯಶ್ರೀ ನಿನ್ನೆ ತಡರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕ್ಲಿನಿಕಲ್​ ಡಿಪ್ರೆಶನ್​ಗೆ ಒಳಗಾಗಿದ್ದ ಜಯಶ್ರೀ ಸಂಬಂಧಗಳ ಬಗ್ಗೆ ತುಂಬ ಭಯ ಬೆಳೆಸಿಕೊಂಡಿದ್ದರು: ಭಾವನಾ ಬೆಳಗೆರೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada