ಮಂಗಳೂರಿನಲ್ಲಿ ತಡರಾತ್ರಿ ಇಬ್ಬರ ಹತ್ಯೆ, ಬೆಚ್ಚಿಬಿದ್ದ ಕಡಲನಗರಿ

|

Updated on: Nov 30, 2019 | 10:20 AM

ಮಂಗಳೂರು: ದಕ್ಷಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಸುರತ್ಕಲ್‌ನಲ್ಲಿ ಯುವಕರ ಮೇಲೆ ದಾಳಿ ಮಾಡಿ ಓರ್ವನನ್ನು ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ. ಗುಂಪಾಗಿ ಬಂದ ದುಷ್ಕರ್ಮಿಗಳು ಯುವಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಸಂದೇಶ್(33) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಗಾಯಾಳು ನವೀನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿದ್ದಾರೆ. ತೊಕ್ಕೊಟ್ಟು ಬಳಿ ಮತ್ತೊಂದು ಕೊಲೆ: ತಡರಾತ್ರಿಯೇ ಮಂಗಳೂರು ಹೊರವಲಯದಲ್ಲಿ ಮತ್ತೊಂದು ಕೊಲೆಯಾಗಿದೆ. ತೊಕ್ಕೊಟ್ಟು ರೈಲ್ವೇ ಹಳಿ ಬಳಿ […]

ಮಂಗಳೂರಿನಲ್ಲಿ ತಡರಾತ್ರಿ ಇಬ್ಬರ ಹತ್ಯೆ, ಬೆಚ್ಚಿಬಿದ್ದ ಕಡಲನಗರಿ
Follow us on

ಮಂಗಳೂರು: ದಕ್ಷಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಸುರತ್ಕಲ್‌ನಲ್ಲಿ ಯುವಕರ ಮೇಲೆ ದಾಳಿ ಮಾಡಿ ಓರ್ವನನ್ನು ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ. ಗುಂಪಾಗಿ ಬಂದ ದುಷ್ಕರ್ಮಿಗಳು ಯುವಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಸಂದೇಶ್(33) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಗಾಯಾಳು ನವೀನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿದ್ದಾರೆ.

ತೊಕ್ಕೊಟ್ಟು ಬಳಿ ಮತ್ತೊಂದು ಕೊಲೆ:
ತಡರಾತ್ರಿಯೇ ಮಂಗಳೂರು ಹೊರವಲಯದಲ್ಲಿ ಮತ್ತೊಂದು ಕೊಲೆಯಾಗಿದೆ. ತೊಕ್ಕೊಟ್ಟು ರೈಲ್ವೇ ಹಳಿ ಬಳಿ ಸುದರ್ಶನ್(20) ಕೊಲೆಯಾಗಿದೆ. ಸುದರ್ಶನ್, ಕೇರಳದ ಕಾಸರಗೋಡು ತಾಲೂಕಿ‌ನ ಪುತ್ತಿಗೆ ನಿವಾಸಿ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

Published On - 8:22 am, Sat, 30 November 19