ಚಾಕೋಲೇಟ್ನಲ್ಲಿ ಶಾಲಾಮಕ್ಕಳಿಗೆ ಡ್ರಗ್ಸ್! ಅಂತಾರಾಷ್ಟ್ರೀಯ ದಂಧೆಕೋರ ಸಿಸಿಬಿ ಬಲೆಗೆ
ಬೆಂಗಳೂರು: ಸ್ವರ್ಗ ಸಮಾನವಾಗಿದ್ದ ಸುಂದರ ಬೆಂಗಳೂರಿನಲ್ಲಿ ಯಾಕೋ ಇತ್ತೀಚೆಗೆ ಈ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಅಂತಾರಾಷ್ಟ್ರೀಯ ದಂಧೆಕೋರ ಪೀಡೆ ಜಾಸ್ತಿಯಾಗಿದೆ. ಇದಕ್ಕೆ ಸಿಸಿಬಿಲ್ಲಿರುವ ಖಡಕ್ ಅಧಿಕಾರಿ ಸಂದೀಪ್ ಪಾಟೀಲರಂತಹ ಖಡಕ್ ಅಧಿಕಾರಿಗಳು ಕಡಿವಾಣ ಹಾಕಲೇಬೇಕಿದೆ. ಇತ್ತೀಚೆಗೆ ಏನಾಗಿದೆ ಅಂದ್ರೆ ಕೆನಡಾದಿಂದ ತರಿಸಿ ನಗರದಲ್ಲಿ ಹಶೀಶ್, ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ದಂಧೆಕೋರನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡಾರ್ಕ್ ನೆಟ್ ಮೂಲಕ ವ್ಯವಹಾರ ಮಾಡುತ್ತಿದ್ದ ಅತೀಫ್ ಸಲೀಂನನ್ನು ಸುದ್ದಗುಂಟೆ ಪಾಳ್ಯದಲ್ಲಿ ಅರೆಸ್ಟ್ ಮಾಡಲಾಗಿದೆ. […]
ಬೆಂಗಳೂರು: ಸ್ವರ್ಗ ಸಮಾನವಾಗಿದ್ದ ಸುಂದರ ಬೆಂಗಳೂರಿನಲ್ಲಿ ಯಾಕೋ ಇತ್ತೀಚೆಗೆ ಈ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಅಂತಾರಾಷ್ಟ್ರೀಯ ದಂಧೆಕೋರ ಪೀಡೆ ಜಾಸ್ತಿಯಾಗಿದೆ. ಇದಕ್ಕೆ ಸಿಸಿಬಿಲ್ಲಿರುವ ಖಡಕ್ ಅಧಿಕಾರಿ ಸಂದೀಪ್ ಪಾಟೀಲರಂತಹ ಖಡಕ್ ಅಧಿಕಾರಿಗಳು ಕಡಿವಾಣ ಹಾಕಲೇಬೇಕಿದೆ. ಇತ್ತೀಚೆಗೆ ಏನಾಗಿದೆ ಅಂದ್ರೆ ಕೆನಡಾದಿಂದ ತರಿಸಿ ನಗರದಲ್ಲಿ ಹಶೀಶ್, ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ದಂಧೆಕೋರನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡಾರ್ಕ್ ನೆಟ್ ಮೂಲಕ ವ್ಯವಹಾರ ಮಾಡುತ್ತಿದ್ದ ಅತೀಫ್ ಸಲೀಂನನ್ನು ಸುದ್ದಗುಂಟೆ ಪಾಳ್ಯದಲ್ಲಿ ಅರೆಸ್ಟ್ ಮಾಡಲಾಗಿದೆ. ಆರೋಪಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದ. ಚಾಕೋಲೇಟ್ ರೀತಿಯಲ್ಲಿ ಗಾಂಜಾ ಮತ್ತು ಮಾದಕ ವಸ್ತು ಅನ್ನು ಬೆರಸಿ ಸ್ಕೂಲ್ ಮಕ್ಕಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಅಮೆಜಾನ್ ಡೆಲಿವರಿ ರೀತಿ ಮಾರಾಟ: ಒಂದು ಚಾಕೋಲೇಟ್ಗೆ ಒಂದೂವರೆ ಸಾವಿರ ರೂಪಾಯಿಗೆ ಮಾರಾಟ ಮಾಡ್ತಿದ್ರು. Wickr me ಎಂಬ ಆ್ಯಪ್ ಮೂಲಕ ಆನ್ಲೈನ್ನಲ್ಲಿ ಆರ್ಡರ್ ಮಾಡಿ, ಮಾರಾಟ ಮಾಡುತ್ತಿದ್ದರು. ಮಿಲ್ಕ್ ಪೌಡರ್ ಬಾಕ್ಸ್ ಮೂಲಕ ಅಮೆಜಾನ್ ಡೆಲಿವರಿ ರೀತಿಯಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿತ್ತು. ಸದ್ಯ ಸಿಸಿಬಿ ಪೊಲೀಸರು ಅಂತಾರಾಷ್ಟ್ರೀಯ ಮಾರ್ಕೆಟ್ನಲ್ಲಿ 1 ಕೋಟಿ ಬೆಲೆ ಬಾಳುವ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
https://www.facebook.com/BlrCityPolice/posts/2882015388499872
Published On - 12:22 pm, Fri, 29 November 19