ಸೆನ್ಸೇಷನಲ್ ಕ್ರೈಮ್ ಕತೆಗಳು: ಜೋಡಿ ಕೊಲೆ ನಡೆದು 130 ವರ್ಷ ಕಳೆದರೂ ಹಂತಕ/ಕಿ ಇನ್ನೂ ಸಿಕ್ಕಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2022 | 7:54 AM

ಆ್ಯಂಡ್ರ್ಯೂ ಮಧ್ಯಾಹ್ನ ಮನೆಗೆ ವಾಪಸ್ಸಾದಾಗ ಹೆಂಡತಿ ಅಬ್ಬಿ ಮನೆಯಲ್ಲಿರಲಿಲ್ಲ. ಅಸಲಿಗೆ ಅಬ್ಬಿ ಌಂಡ್ರ್ಯೂ ನ ಎರಡನೇ ಹೆಂಡತಿ. ಲಿಜ್ಜಿ ಅವನ ಮೊದಲ ಹೆಂಡತಿಯ ಮಗಳು. ಅಂದರೆ ಲಿಜ್ಜಿಗೆ ಅಬ್ಬಿ ಮಲತಾಯಿ. ಸರಿ, ಮಮ್ಮಿ ಎಲ್ಲೆಂದು ಆ್ಯಂಡ್ರ್ಯೂ ಕೇಳಿದಾಗ, ಯಾರೋ ಫ್ರೆಂಡ್ ಒಬ್ಬರನ್ನು ನೋಡಲು ಆಚೆ ಹೊಗಿದ್ದಾಳೆ ಎಂದು ಲಿಜ್ಜಿ ಹೇಳಿದಳು.

ಸೆನ್ಸೇಷನಲ್ ಕ್ರೈಮ್ ಕತೆಗಳು: ಜೋಡಿ ಕೊಲೆ ನಡೆದು 130 ವರ್ಷ ಕಳೆದರೂ ಹಂತಕ/ಕಿ ಇನ್ನೂ ಸಿಕ್ಕಿಲ್ಲ!
ಲಿಜ್ಜೀ, ಆ್ಯಂಡ್ರ್ಯೂ ಮತ್ತು ಅಬ್ಬಿ ಬೋರ್ಡೆನ್
Follow us on

ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ಸುಮಾರು 130 ವರ್ಷಗಳ ನಡೆದ ಜೋಡಿ ಕೊಲೆಯ ಬಗ್ಗೆ ಹೇಳುತ್ತಿದ್ದೇವೆ. ಇದು ಕೂಡ ಒಂದೂವರೆ ಶತಮಾನ ಕಳೆದರೂ ಬಗೆಹರಿಯದ ಪ್ರಕರಣ. ಅಮೆರಿಕದ ಇತಿಹಾಸದಲ್ಲಿ ಇದು ಬಹಳ ಖ್ಯಾತಿ ಪಡೆದ ಕೇಸ್ ಆಗಿದೆ ಅನ್ನೋದು ಸುಳ್ಳಲ್ಲ. ಕೊಲೆಯಾಗಿದ್ದು ಆ್ಯಂಡ್ರ್ಯೂ (Andrew) ಮತ್ತು ಅಬ್ಬಿ ಬೊರ್ಡೆನ್ (Abby Borden,) ದಂಪತಿ. ಅವತ್ತು ಆಗಸ್ಟ್ 4, 1892. ಅಮೆರಿಕದ ಮ್ಯಾಸಚ್ಯೂಸೆಟ್ಸ್ ನ (Massachusetts) ಫಾಲ್ ರಿವರ್ ನಲ್ಲಿ ವಾಸವಾಗಿದ್ದ ಬೊರ್ಡೆನ್ ಕುಟುಂಬದ ಬೆಳಗು ಎಂದಿನಂತೆಯೇ ಆಗಿತ್ತು. ಮನೆಯ ಯಜಮಾನ ಌಂಡ್ರ್ಯೂ ಜರೂರು ಕೆಲಸದ ನಿಮಿತ್ತ ಪೇಟೆ ಕಡೆ ಹೋದಾಗ ಮನೆಯಲ್ಲಿ ಉಳಿದಿದ್ದು, ಸಂಡೇ ಸ್ಕೂಲೊಂದರಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ 32-ವರ್ಷ-ವಯಸ್ಸಿನ ಅವನ ಮಗಳು ಲಿಜ್ಜಿ (Lizzie), ಹೆಂಡತಿ ಅಬ್ಬಿ ಮತ್ತು ಮನೆಕೆಲಸದಾಳು ಬ್ರಿಗೆಟ್ ಸುಲಿವಾನ್ (Bridget Sullivan).

ಆ್ಯಂಡ್ರ್ಯೂ ಮಧ್ಯಾಹ್ನ ಮನೆಗೆ ವಾಪಸ್ಸಾದಾಗ ಹೆಂಡತಿ ಅಬ್ಬಿ ಮನೆಯಲ್ಲಿರಲಿಲ್ಲ. ಅಸಲಿಗೆ ಅಬ್ಬಿ ಌಂಡ್ರ್ಯೂ ನ ಎರಡನೇ ಹೆಂಡತಿ. ಲಿಜ್ಜಿ ಅವನ ಮೊದಲ ಹೆಂಡತಿಯ ಮಗಳು. ಅಂದರೆ ಲಿಜ್ಜಿಗೆ ಅಬ್ಬಿ ಮಲತಾಯಿ. ಸರಿ, ಮಮ್ಮಿ ಎಲ್ಲೆಂದು ಆ್ಯಂಡ್ರ್ಯೂ ಕೇಳಿದಾಗ, ಯಾರೋ ಫ್ರೆಂಡ್ ಒಬ್ಬರನ್ನು ನೋಡಲು ಆಚೆ ಹೊಗಿದ್ದಾಳೆ ಎಂದು ಲಿಜ್ಜಿ ಹೇಳಿದಳು.

ಅದರೆ ಆಕೆ ಹೊರಗಡೆ ಎಲ್ಲೂ ಹೋಗಿರಲಿಲ್ಲ. ಮೊದಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದಳು. ತನ್ನ ತಂದೆಗೆ ಕುಡಿಯಲು ನೀರು ಕೊಟ್ಟು ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮಾಡುವಂತೆ ಲಿಜ್ಜೀ ಹೇಳಿದಳು. ಅಮೇಲೆ, ಸುಲಿವಾನ್ ಗೆ ಹತ್ತಿರದಲ್ಲೇ ಇದ್ದ ಡಿಪಾರ್ಟ್ ಮೆಂಟ್ ಸ್ಟೋರಲ್ಲಿ ಸೇಲ್ ನಡೀತಾ ಇದೆ, ಏನೇನಿದೆ ನೋಡಿಕೊಂಡು ಬಾ ಅಂತ ಹೇಳಿದಳು. ಆದರೆ ಅವನು ತನಗೆ ಹುಷಾರಿಲ್ಲ ಎಂದು ತನ್ನ ಕೋಣೆಗೆ ಹೋಗಿ ಮಲಗಿ ಕೂಡಲೇ ನಿದ್ರೆಗೆ ಜಾರಿಬಿಟ್ಟ.

ಆದರೆ ಸ್ವಲ್ಪ ಹೊತ್ತಿನಲ್ಲೇ ಜೋರಾದ ಕಿರುಚಾಟ ಅವನ ನಿದ್ರೆಗೆ ಭಂಗತಂದಿತು. ಅವನು ಎದ್ದು ಹೊರಬಂದಾಗ ನನ್ನ ತಂದೆಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಲಿಜ್ಜೀ ಜೋರಾಗಿ ಕಿರುಚಾಡುತ್ತಿದ್ದಳು. ಆ್ಯಂಡ್ರ್ಯೂ ರಕ್ತಸಿಕ್ತವಾಗಿದ್ದ ಮಂಚದಲ್ಲಿ ನಿಶ್ಚೇಶ್ಟಿತನಾಗಿ ಬಿದ್ದಿದ್ದ. ಅದನ್ನು ಕಂಡವನೇ ಸುಲಿವಾನ್ ಮನೆಯಿಂದ ಹೊರಗೋಡಿದ. ಅವನ ಮುಖದ ಮೇಲೂ ಗಾಯಗಳಾಗಿದ್ದವು ಮತ್ತು ರಕ್ತ ಸುರಿಯುತಿತ್ತು.

ಸ್ವಲ್ಪ ಸಮಯದ ನಂತರ ಲಿಜ್ಜಿ, ಆಘಾತದಲ್ಲಿದ್ದ ಸುಲಿವಾನನ್ನು ಕರೆದು ಮಮ್ಮಿ ಮೊದಲ ಮಹಡಿಯಲ್ಲಿ ಏನಾದರೂ ಇರಬಹುದಾ ನೋಡು ಅಂತ ಅವನನ್ನು ಮೇಲೆ ಕಳಿಸಿದಳು. ಸುಲಿವಾನ್ ಅರ್ಧದಷ್ಟು ಮೆಟ್ಟಿಲಿ ಹತ್ತಿದಾಗಲೇ ಅಬ್ಬಿ ಕೂಡ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಾಣಿಸಿತು.

ಪೊಲೀಸರು ನಡೆಸಿದ ತನಿಖೆಯ ಪ್ರಕಾರ ಅಬ್ಬಿಯ ದೇಹದ ಮೇಲೆ 19 ಬಾರಿ ಮಚ್ಚಿನಿಂದ ಹಲ್ಲೆ ಮಾಡಿದ ಗಾಯಗಳಿದ್ದರೆ, ಌಂಡ್ರ್ಯೂ ದೇಹದ ಮೇಲೆ 11 ಬಾರಿ ಹಲ್ಲೆ ಮಾಡಲಾಗಿತ್ತು. ಆರಂಭದಲ್ಲಿ ಪೊಲೀಸರು ಲಿಜ್ಜಿಯನ್ನೇನೂ ಶಂಕಿಸಲಿಲ್ಲ. ಆದರೆ, ಅವಳು ರಕ್ತದ ಕಲೆಗಳಿದ್ದ ತನ್ನ ಬಟ್ಟೆಗಳನ್ನು ಒಗೆಯುತ್ತಿದ್ದುದನ್ನು ನೋಡಿದ್ದಾಗಿ ಅವಳ ಗೆಳತಿಯೊಬ್ಬಳು ಪೊಲೀಸರಿಗೆ ತಿಳಿಸಿದಾಗ ಅವಳನ್ನು ಬಂಧಿಸಲಾಗಿತ್ತು.

ಆದರೆ, ಅವಳೇ ಕೊಲೆ ಮಾಡಿದ್ದಾಳೆ ಅನ್ನೋದಿಕ್ಕೆ ಬಲವಾದ ಸಾಕ್ಷ್ಯಗಳು ಸಿಗದ ಕಾರಣ ಅವಳು ನಿರ್ದೋಷಿ ಎಂದು ಕೋರ್ಟ್ ಘೋಷಿಸಿತು. ಅಲ್ಲದೆ, ಸಂಡೆ ಸ್ಕೂಲಲ್ಲಿ ಮಕ್ಕಳಿಗೆ ಬೈಬಲ್ ಪಾಠಗಳನ್ನು ಮಾಡುತ್ತಿದ್ದ ಆಕೆ ಅಷ್ಟು ಹೀನ ಕೃತ್ಯ ನಡೆಸಬಲ್ಲಳು ಅಂತ ಕೋರ್ಟ್ ಗೆ ಮನವರಿಕೆಯಾಗಲಿಲ್ಲ. ಕೋರ್ಟಲ್ಲಿ ಸಾಕ್ಷ್ಯ ನುಡಿದ ಸುಲಿವಾನ್ ಮತ್ತು ಇನ್ನೂ ಕೆಲವರು ಸಹ ಲಿಜ್ಜಿಯ ಬಗ್ಗೆ ಕೆಟ್ಟದ್ದೇನೂ ಹೇಳಲಿಲ್ಲ.

ಕೊಲೆಗಳು ಹೇಗೆ ನಡೆದಿರಬಹುದು, ಯಾರು ಮಾಡಿರಬಹುದು ಅಂತೆಲ್ಲ ಚರ್ಚೆಗಳು ಬಹಳ ದಿನಗಳವರೆಗೆ ನಡೆದವು. ಲಿಜ್ಜಿಯೇ ಕೊಂದಿರುತ್ತಾಳೆ ಕೆಲವರು ಹೇಳಿದರು. ಮತ್ತೂ ಕೆಲವರು ಸುಲಿವಾನ್ ಕೊಂದಿರುತ್ತಾನೆ ಎಂದರು. ಆದರೆ ಅಸಲು ಕೊಲೆಗಾರ/ಕೊಲೆಗಾರ್ತಿ ಯಾರೆನ್ನುವುದು ಒಂದೂಕಾಲು ಶತಮಾನ ಕಳೆದರೂ ನಿಗೂಢವಾಗೇ ಉಳಿದಿದೆ.