ಟ್ರಾಫಿಕ್ ಪೊಲೀಸರ ಮೇಲೆಯೇ ವಾಹನ ಸವಾರನ ದರ್ಪ

|

Updated on: Nov 17, 2019 | 2:07 PM

ಬೆಳಗಾವಿ: ಟ್ರಾಫಿಕ್ ಪೊಲೀಸರ ಜೊತೆ ವಾಹನ ಸವಾರ್ ಕಿರಿಕ್ ಮಾಡಿಕೊಂಡು‌ ಪೊಲೀಸರ ಮೇಲೆಯೇ ದರ್ಪ ತೋರಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾನೆ. ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ಈ ಘಟನೆ ನಡೆದಿದೆ. ಟ್ರಾಫಿಕ್ ಎಸಿಪಿ ಆರ್​ಆರ್ ಕಲ್ಯಾಣಶೆಟ್ಟಿ ಮತ್ತು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಮಹಾರಾಷ್ಟ್ರ ನೋಂದಣಿ ಇರುವ ಬುಲೇರೊ ವಾಹನದ ದಾಖಲೆ ಸರಿಯಿರಲಿಲ್ಲ. ಹೀಗಾಗಿ ಚಾಲಕನನ್ನು ಸಂಚಾರಿ ಠಾಣೆಗೆ ಕರೆದೊಯ್ಯಲು ಟ್ರಾಫಿಕ್ ಪೊಲೀಸರು ಮುಂದಾದರು. ಈ ವೇಳೆ ಪೊಲೀಸರ ಮೇಲೆ ವಾಗ್ದಾಳಿ ನಡೆಸಿ, ತಳ್ಳಾಡಿ […]

ಟ್ರಾಫಿಕ್ ಪೊಲೀಸರ ಮೇಲೆಯೇ ವಾಹನ ಸವಾರನ ದರ್ಪ
Follow us on

ಬೆಳಗಾವಿ: ಟ್ರಾಫಿಕ್ ಪೊಲೀಸರ ಜೊತೆ ವಾಹನ ಸವಾರ್ ಕಿರಿಕ್ ಮಾಡಿಕೊಂಡು‌ ಪೊಲೀಸರ ಮೇಲೆಯೇ ದರ್ಪ ತೋರಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾನೆ. ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ಈ ಘಟನೆ ನಡೆದಿದೆ.

ಟ್ರಾಫಿಕ್ ಎಸಿಪಿ ಆರ್​ಆರ್ ಕಲ್ಯಾಣಶೆಟ್ಟಿ ಮತ್ತು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಮಹಾರಾಷ್ಟ್ರ ನೋಂದಣಿ ಇರುವ ಬುಲೇರೊ ವಾಹನದ ದಾಖಲೆ ಸರಿಯಿರಲಿಲ್ಲ. ಹೀಗಾಗಿ ಚಾಲಕನನ್ನು ಸಂಚಾರಿ ಠಾಣೆಗೆ ಕರೆದೊಯ್ಯಲು ಟ್ರಾಫಿಕ್ ಪೊಲೀಸರು ಮುಂದಾದರು.

ಈ ವೇಳೆ ಪೊಲೀಸರ ಮೇಲೆ ವಾಗ್ದಾಳಿ ನಡೆಸಿ, ತಳ್ಳಾಡಿ ಏರು ಧ್ವನಿಯಲ್ಲಿ ಮಾತನಾಡಿದ್ದಾನೆ. ಬಳಿಕ ಆರೋಪಿ ಕಿರಣ್ ರಾಠೋಡ್(35) ನನ್ನು ಖಡೆಬಜಾರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Published On - 2:06 pm, Sun, 17 November 19