ಹಣಕ್ಕಾಗಿ ಗಂಡನಿಂದ ಹೆಂಡ್ತಿ ಕೊಲೆ, ಇಬ್ಬರು ಮಕ್ಕಳು ತಬ್ಬಲಿ
ಶಿವಮೊಗ್ಗ: ಹಣಕ್ಕಾಗಿ ತನ್ನ ಪತ್ನಿಯನ್ನೆ ಗಂಡ ಕೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆ ಆಯನೂರು ಸಮೀಪದ ಹೊಸೂರು ಗ್ರಾಮದಲ್ಲಿ ನಡೆದಿದೆ. ಶಿಲ್ಪಾ ಸಾವೇ ಮೃತ ಗೃಹಿಣಿ. ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಮೂಲದ ಶಿಲ್ಪಾಳನ್ನು ರಘು ಜೊತೆ ಮದುವೆ ಮಾಡಲಾಗಿತ್ತು. ದಂಪತಿಗೆ ಮೂರು ವರ್ಷದ ಗಂಡು ಮಗು ಹಾಗೂ ಒಂದೂವರೆ ವರ್ಷದ ಮಗಳು ಇದ್ದಾಳೆ. ಆದ್ರೆ ಗಂಡ ಹಾಗೂ ಗಂಡನ ಮನೆಯವ್ರು ದುಡ್ಡಿಗಾಗಿ ಶಿಲ್ಪಾಳಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದ್ರ ನಡುವೆ ನಿನ್ನೆ ರಾತ್ರಿ […]
ಶಿವಮೊಗ್ಗ: ಹಣಕ್ಕಾಗಿ ತನ್ನ ಪತ್ನಿಯನ್ನೆ ಗಂಡ ಕೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆ ಆಯನೂರು ಸಮೀಪದ ಹೊಸೂರು ಗ್ರಾಮದಲ್ಲಿ ನಡೆದಿದೆ. ಶಿಲ್ಪಾ ಸಾವೇ ಮೃತ ಗೃಹಿಣಿ. ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಮೂಲದ ಶಿಲ್ಪಾಳನ್ನು ರಘು ಜೊತೆ ಮದುವೆ ಮಾಡಲಾಗಿತ್ತು. ದಂಪತಿಗೆ ಮೂರು ವರ್ಷದ ಗಂಡು ಮಗು ಹಾಗೂ ಒಂದೂವರೆ ವರ್ಷದ ಮಗಳು ಇದ್ದಾಳೆ.
ಆದ್ರೆ ಗಂಡ ಹಾಗೂ ಗಂಡನ ಮನೆಯವ್ರು ದುಡ್ಡಿಗಾಗಿ ಶಿಲ್ಪಾಳಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದ್ರ ನಡುವೆ ನಿನ್ನೆ ರಾತ್ರಿ ಶಿಲ್ಪಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಡನ ಮನೆಯವ್ರೇ ಕೊಲೆ ಮಾಡಿದ್ದಾರೆಂದು ಶಿಲ್ಪಾಳ ಪೋಷಕರು ಆರೋಪಿಸಿದ್ದಾರೆ.
ಶಿಲ್ಪಾ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮನೆಯಲ್ಲಿ ಮಕ್ಕಳು ಇಲ್ಲದಿದಾಗ ದುರಂತ ನಡೆದಿದ್ದು, ಮೃತದೇಹವನ್ನ ಕುಣಿಕೆಯಿಂದ ಕೆಳಗಿಳಿಸಿ ಬೆಡ್ ಮೇಲೆ ಮಲಗಿಸಲಾಗಿತ್ತು. ಹೀಗಾಗಿ ಇದು ಕೊಲೆಯೇ ಅಂತಾ ಶಿಲ್ಪಾ ಪೋಷಕರು ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನು ಶಿಲ್ಪಾ ಸಾವಿನ ಬಳಿಕ ಗಂಡನ ಮನೆಯವ್ರು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ.
Published On - 9:30 pm, Sun, 17 November 19