Crime News: ಚಿಕನ್ ರೈಸ್ ತಿನ್ನಲು ಕರೆದೊಯ್ದು 7 ವರ್ಷದ ಭಿಕ್ಷುನ ಮಗಳ ಮೇಲೆ ಅತ್ಯಾಚಾರ ಎಸಗಿದ ಯುವಕ

| Updated By: shruti hegde

Updated on: Jul 28, 2021 | 11:40 AM

ಅಪ್ರಾಪ್ತ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಳು. ಚಿಕನ್ ರೈಸ್ ತಿನ್ನಲು ಕರೆದೊಯ್ಯುವ ನೆಪದಲ್ಲಿ ಆರೋಪಿ ಬಾಲಕಿಯ ತಾಯಿಯೊಂದಿಗೆ ಅನುಮತಿ ಕೋರಿದರು. ತಾಯಿ, ಬಾಲಕಿಯನ್ನು ಕರೆದೊಯ್ಯುವಂತೆ ಹೇಳಿದ್ದಾರೆ.

Crime News: ಚಿಕನ್ ರೈಸ್ ತಿನ್ನಲು ಕರೆದೊಯ್ದು 7 ವರ್ಷದ ಭಿಕ್ಷುನ ಮಗಳ ಮೇಲೆ ಅತ್ಯಾಚಾರ ಎಸಗಿದ ಯುವಕ
ಪ್ರಾತಿನಿಧಿಕ ಚಿತ್ರ
Follow us on

ಏಳು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಭಿಕ್ಷುಕನ ಮಗಳು ಹೊರಗಡೆ ಆಟವಾಡುತ್ತಿರುವುದನ್ನು ನೋಡಿದ 22 ವರ್ಷದ ಯುವಕ ಆಕೆಯನ್ನು ಅಪಹರಿಸಿದ್ದಾನೆ. ಘಟನೆ ಭಾನುವಾರ ಮುಂಬೈನಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ವರದಿಯ ಪ್ರಕಾರ, ಅಪ್ರಾಪ್ತ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಳು. ಚಿಕನ್ ರೈಸ್ ತಿನ್ನಲು ಕರೆದೊಯ್ಯುವ ನೆಪದಲ್ಲಿ ಆರೋಪಿ ಬಾಲಕಿಯ ತಾಯಿಯೊಂದಿಗೆ ಅನುಮತಿ ಕೋರಿದರು. ತಾಯಿ, ಬಾಲಕಿಯನ್ನು ಕರೆದೊಯ್ಯುವಂತೆ ಹೇಳಿದ್ದಾರೆ.

ಎಷ್ಟು ಹೊತ್ತಾದರೂ ಮಗಳು ಬಂದಿಲ್ಲದ್ದನ್ನು ಗಮನಿಸಿದ ಬಾಲಕಿಯ ತಾಯಿ ಮತ್ತು ತಂದೆ ಹುಡುಕಲು ಹೊರಟಿದ್ದಾರೆ. ಆದರೆ ಎಲ್ಲೂ ಕೂಡಾ ಮಗಳ ಸುಳಿವು ಸಿಕ್ಕಿಲ್ಲ. ತಕ್ಷಣವೇ ಹತ್ತಿರದ ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾರೆ.

ಅದೇ ದಿನ ರಾತ್ರಿ ಸುಮಾರು 10:30ರ ಸಮಯದಲ್ಲಿ ಕಾಲೋನಿಯಲ್ಲಿ ಹೆಣ್ಣುಮಗಳು ಕಿರುಚಾಡುವ ಶಬ್ದ ಕೇಳಿ ಬಂದಿದೆ. ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಾಲಕಿಯ ತುಟಿ, ತಲೆಯ ಭಾಗ ಹಾಗೂ ಜನಾಂಗಗಳಿಗೆ ಗಾಯಗಳಾಗಿವೆ ಎಂಬ ಮಾಹಿತಿ ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯೊಂದಿಗೆ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ:

Crime News: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗೆ ಗಲ್ಲು ಶಿಕ್ಷೆ

ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ಎಫ್​ಐಆರ್ ದಾಖಲಿಸಿಕೊಂಡ ರಾಷ್ಟ್ರೀಯ ತನಿಖಾ ದಳ