Nigerian drug peddler arrested ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ, ಕಾರು ಜಪ್ತಿ

Nigerian drug peddler arrested ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Nigerian drug peddler arrested ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ, ಕಾರು ಜಪ್ತಿ
ಬಂಧಿತ ಆರೋಪಿ ಇಫೇನ್ಯಿ ಒಹೆಚುಲ್ವು ಮೈಕ್
Edited By:

Updated on: Feb 09, 2021 | 11:57 AM

ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಬಂಧಿತ ಆರೋಪಿಯಿಂದ ಡ್ರಗ್ಸ್ ಮತ್ತು ಕಾರನ್ನು ಜಪ್ತಿ ಮಾಡಿದ್ದಾರೆ.

ನೈಜೀರಿಯಾ ಮೂಲದ ಇಫೇನ್ಯಿ ಒಹೆಚುಲ್ವು ಮೈಕ್ (41) ಎಂಬಾತ ಪಾಸ್​ ಪೋರ್ಟ್​ ಅವಧಿ ಮೀರಿದ್ದರೂ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದು, ಡ್ರಗ್ಸ್ ಮಾರುತ್ತಿದ್ದ. ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 100 ಗ್ರಾಂ ಎಕ್ಸ್ಟೇಸಿ ಟ್ಯಾಬ್ಲೇಟ್, ಹೊಂಡಾ ಸಿಟಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ಒಟ್ಟು 10 ಲಕ್ಷ ಬೆಲೆಬಾಳುವ ಡ್ರಗ್ಸ್ ವಶಪಡಿಸಿಕೊಂಡಿದ್ದು, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sandalwood Drug Case: ಸಂಜನಾ – ರಾಗಿಣಿ ನಂತ್ರ ಇನ್ನೂ ಒಂದಷ್ಟು ಮಂದಿಗೆ ಸಿಕ್ಕಿದೆ ಜಾಮೀನು ಬಿಡುಗಡೆ ಭಾಗ್ಯ!