ಮದ್ಯಪಾನ ರಂಪಾಟದ ಜೊತೆಗೆ DySP ಲಕ್ಷ್ಮೀ ವಿರುದ್ಧ ಇತ್ತು ಮತ್ತೊಂದು ಗಂಭೀರ ಆರೋಪ!

| Updated By: ಸಾಧು ಶ್ರೀನಾಥ್​

Updated on: Dec 23, 2020 | 10:14 AM

ತರಬೇತಿ ವೇಳೆ ನೀಡಿದ್ದ ಪಿಸ್ತೂಲ್ ಬ್ಯಾರೆಲ್ ಕಳೆದಿದ್ದ ಆರೋಪ DySP ಲಕ್ಷ್ಮಿ ಮೇಲಿತ್ತು. ಪೊಲೀಸ್ ಇಲಾಖೆಯಲ್ಲಿ ಶಸ್ತ್ರಾಸ್ತ್ರ ಕಳೆದುಕೊಳ್ಳುವುದು ಗಂಭೀರ ಅಪರಾಧ. ಆದ್ದರಿಂದ ಲಕ್ಷ್ಮಿಯ ಬೇಜವಾಬ್ದಾರಿತನವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ. ಈ ಬಗ್ಗೆ ವಿಚಾರಣೆ ನಡೆಸುತ್ತಿತ್ತು ಎಂದು ತಿಳಿದು ಬಂದಿದೆ.

ಮದ್ಯಪಾನ ರಂಪಾಟದ ಜೊತೆಗೆ DySP ಲಕ್ಷ್ಮೀ ವಿರುದ್ಧ ಇತ್ತು ಮತ್ತೊಂದು ಗಂಭೀರ ಆರೋಪ!
ಡಿವೈಎಸ್​ಪಿ ಲಕ್ಷ್ಮೀ
Follow us on

ಬೆಂಗಳೂರು: ಇತ್ತೀಚೆಗೆ ಅನುಮಾನಾಸ್ಪದವಾಗಿ ಮೃತಪಟ್ಟ ಪೊಲೀಸ್​ ಅಧಿಕಾರಿ DySP ಲಕ್ಷ್ಮೀ ಅವರ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಈ ಹಿಂದೆಯೇ DySP ಲಕ್ಷ್ಮೀ ಮದ್ಯ ಸೇವಿಸುವ ಅಭ್ಯಾಸ ಹೊಂದಿದ್ದರು ಎಂದು ಹೇಳಲಾಗಿತ್ತು. ಅದರ ಬಗ್ಗೆಯೂ ಅವರ ವಿರುದ್ಧ ತನಿಖೆ ನಡೆದಿತ್ತು. ಈ ಅಭ್ಯಾಸದಿಂದ ಇಲಾಖೆಯಲ್ಲೂ ಹೆಸರು ಹಾಳಾಗಿತ್ತು. ಈಗ ಇದರ ಜೊತೆಗೆ ಮತ್ತೊಂದು ಗಂಭೀರ ಅಪರಾಧ ಮಾಡಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

DySP ಲಕ್ಷ್ಮೀ ಒಂದಲ್ಲ ಎರಡೆರೆಡು ಇಲಾಖಾ ತನಿಖೆ ಎದುರಿಸುತ್ತಿದ್ದರು. ಪೊಲೀಸ್ ತರಬೇತಿಯಲ್ಲಿದ್ದಾಗಲೇ ಎರಡೆರಡು ಆರೋಪಕ್ಕೆ ಗುರಿಯಾಗಿದ್ದರು. ಬೆಳಗಾವಿಯಲ್ಲಿ ಪೊಲೀಸ್ ತರಬೇತಿ ಪಡೆಯುತ್ತಿದ್ದ ವೇಳೆ ಮದ್ಯ ಸೇವಿಸಿ ಗಲಾಟೆ ಮಾಡಿ ಇತರೆ ಮಹಿಳಾ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ಸಹ ನಡೆದಿತ್ತು. ಹಾಗೂ ಲಕ್ಷ್ಮೀ ತನಿಖೆಯನ್ನು ಎದುರಿಸುತ್ತಿದ್ದರು. ಇದರ ಜೊತೆ ಮತ್ತೊಂದು ಅಪರಾಧ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ತರಬೇತಿ ವೇಳೆ ನೀಡಿದ್ದ ಪಿಸ್ತೂಲ್ ಬ್ಯಾರೆಲ್ ಕಳೆದಿದ್ದ ಆರೋಪ ಲಕ್ಷ್ಮಿ ಮೇಲಿತ್ತು. ಪೊಲೀಸ್ ಇಲಾಖೆಯಲ್ಲಿ ಶಸ್ತ್ರಾಸ್ತ್ರ ಕಳೆದುಕೊಳ್ಳುವುದು ಗಂಭೀರ ಅಪರಾಧ. ಆದ್ದರಿಂದ ಲಕ್ಷ್ಮಿಯ ಬೇಜವಾಬ್ದಾರಿತನವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ, ಈ ಬಗ್ಗೆ ವಿಚಾರಣೆ ನಡೆಸುತ್ತಿತ್ತು ಎಂದು ತಿಳಿದು ಬಂದಿದೆ. ಅಧಿಕಾರಿಯಾಗಿಯೇ ಎರಡೆರಡು ಗಂಭೀರ ವಿಚಾರಣೆಗಳನ್ನು ಲಕ್ಷ್ಮೀ ಎದುರಿಸುತ್ತಿದ್ದರು.

DySP ಲಕ್ಷ್ಮೀ ವೃತ್ತಿಜೀವನಕ್ಕೆ ತೊಡಕಾಗಿ ಕಾಡಿತ್ತೇ ಆ ಒಂದು ಅಭ್ಯಾಸ?