ಬೆಂಗಳೂರು: ಲಕ್ಕಿ ಡ್ರಾ ಆಸೆಗೆ ಬಿದ್ದು ವಿದ್ಯಾರ್ಥಿಯೊಬ್ಬ 84,000 ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಲಕ್ಕಿ ಡ್ರಾ ಹೆಸರಿನಲ್ಲಿ ನಗರದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ವಂಚನೆ ಆಗಿದೆ.
ಏನಿದು ಪ್ರಕರಣ?
ಲಕ್ಕಿ ಡ್ರಾ ಸೋಗಿನಲ್ಲಿ ನಿಮಗೆ 25 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಎಂದು N.R.ಕಾಲೋನಿಯ ವಿದ್ಯಾರ್ಥಿಯೊಬ್ಬನಿಗೆ ಆನ್ಲೈನ್ ವಂಚಕರು ಸಂದೇಶ ಕಳುಹಿಸಿದ್ದರು. ಆದರೆ, 25 ಲಕ್ಷ ಬಹುಮಾನ ಪಡೆಯಲು GST ಪಾವತಿಸಲು ಸೂಚಿಸಿದ್ದರು.
ಬಹುಮಾನದ ಆಸೆಗೆ ಬಿದ್ದ ಯುವಕ ಪ್ರಾಜೆಕ್ಟ್ ವರ್ಕ್ ಹೆಸರಿನಲ್ಲಿ ಪೋಷಕರಿಂದ ಹಣ ಪಡೆದಿದ್ದ. ಪೋಷಕರಿಂದ ಹಣ ಪಡೆದು ವಂಚಕ ಹೇಳಿದಂತೆ ಖಾತೆಗೆ ಹಣ ಡೆಪಾಸಿಟ್ ಮಾಡಿದ್ದನಂತೆ. ವಂಚಕರು ಹೇಳಿದ ಖಾತೆಗೆ ವಿದ್ಯಾರ್ಥಿ 80,000 ರೂಪಾಯಿ ಡೆಪಾಸಿಟ್ ಮಾಡಿದ್ದ.
ಈ ನಡುವೆ, ಮಿಕ ಬಲೆಗೆ ಬಿದ್ದ ಅಂತಾ ವಂಚಕರು ಮತ್ತಷ್ಟು ಹಣ ನೀಡುವಂತೆ BE ವಿದ್ಯಾರ್ಥಿಗೆ ಬೇಡಿಕೆ ಸಹ ಇಟ್ಟಿದ್ದರು. ಆಗ ತಾನು ಮೋಸ ಹೋಗಿರುವುದನ್ನು ಅರಿತ ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದ್ದಾನೆ. ದಕ್ಷಿಣ ವಿಭಾಗದ CEN ಠಾಣೆಗೆ ವಿದ್ಯಾರ್ಥಿ ದೂರು ನೀಡಿದ್ದಾನೆ.
ಇದನ್ನೂ ಓದಿ: ಸತ್ಯಜಿತ್ ಕುಟುಂಬ ಕಲಹ; ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದ ನಟ