ಸತ್ಯಜಿತ್ ಕುಟುಂಬ ಕಲಹ; ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದ ನಟ

ನಾನು ಕಷ್ಟಪಟ್ಟು ದುಡಿದಿದ್ದೇನೆ. ಒಂದು ಕಾಲದಲ್ಲಿ ಆಟೋ ಓಡಿಸಿ, ಬಸ್​ ಡ್ರೈವರ್​ ಆಗಿ ಕೆಲಸ ನಿರ್ವಹಿಸಿ ಜೀವನ ಸಾಗಿಸಿದ್ದೇನೆ ಎಂದು ನಟ ಸತ್ಯಜಿತ್ ಹೇಳಿದ್ದಾರೆ.

  • TV9 Web Team
  • Published On - 16:39 PM, 14 Feb 2021
Actor sathyajit
ನಟ ಸತ್ಯಜಿತ್

ಬೆಂಗಳೂರು: ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ ನಟ ಸತ್ಯಜಿತ್ ಭಾನುವಾರ ಮತ್ತೊಂದು ಹೇಳಿಕೆ ನೀಡಿದ್ದಾರೆ. ಮಕ್ಕಳು ಸುಖವಾಗಿ ಬೆಳೆಯಬೇಕು ಎಂದು ಯಾವುದನ್ನೂ ಲೆಕ್ಕಿಸದೇ ಹಣ ಖರ್ಚು ಮಾಡಿ ಬೆಳಸುತ್ತೇವೆ. ನಮ್ಮ ಮಕ್ಕಳು ಒಳ್ಳೆಯ ಸ್ಥಿತಿಗೆ ಬರಲಿ ಎಂದು ಆಸೆ ಪಡುತ್ತೇವೆ. ಮಗಳು ಪೈಲಟ್ ಆಗಬೇಕೆಂದು ಆಸೆ ಹೊಂದಿದ್ದಳು, ಅದರಂತೆ ಲೋನ್ ಪಡೆದು ಅಮೆರಿಕಾಗೆ ಕಳುಹಿಸಿ ಓದಿಸಿದ್ದಾಗಿದೆ. ಮನೆ ಹರಾಜು ಹಾಕಿ ₹ 62 ಲಕ್ಷಕ್ಕೆ ಮಾರಿ, ₹ 54 ಲಕ್ಷ ಲೋನ್​ ತೀರಿಸಿದ್ದೆವು. ಮನೆಯನ್ನು ನಾನೇ ಕೊಡಿಸ್ತೀನಿ ಎಂದು ಹೇಳಿದ ಮಗಳು ಮದುವೆಯಾದ ನಂತರ ಸಂಪೂರ್ಣವಾಗಿ ಬದಲಾಗಿದ್ದಾಳೆ. ಇದೀಗ ಮನೆ ಕೊಡಿಸುವುದಿಲ್ಲವೆಂದು ಜಗಳ ಮಾಡುತ್ತಿದ್ದಾಳೆ ಎಂದು ನಟ ಸತ್ಯಜಿತ್ ಹೇಳಿಕೆ ನೀಡಿದ್ದಾರೆ.

ಅವಳ ಮೊದಲ ಡಿಲಿವರಿ ನಮ್ಮ ಮನೆಯಲ್ಲಿ ಆಗಬೇಕಿತ್ತು. ಅದಕ್ಕೂ ಅವಕಾಶ ಕೊಟ್ಟಿಲ್ಲ. ಗರ್ಭಿಣಿ ಮಗಳನ್ನು ನೋಡಿಕೊಂಡು ಬಾ ಎಂದು ನನ್ನ ಹೆಂಡತಿಯನ್ನು ಕಳುಹಿಸಿಕೊಟ್ಟಿದ್ದೆ. ಆದರೆ ತಾಯಿಗೆ ಬೈದು ವಾಪಸ್ ಕಳಿಸಿದ್ದಾರೆ. ಅದನ್ನು ಕೇಳಲೆಂದು ಮಗ ಅವರ ಮನೆಗೆ ಹೋಗಿದ್ದ. ಹೊಡೆಯಲು ಬಂದಿದ್ದಾನೆ ಎಂದು ಅವನ ವಿರುದ್ಧ ದೂರು ಕೊಟ್ಟಿದ್ದಾರೆ. ಮಗಳು ಸುಳ್ಳು ಹೇಳುತ್ತಿದ್ದಾಳೆ ಎಂದು ಅವರು ಹೇಳಿದ್ದಾರೆ.

ಇದೀಗ ನಾವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ನಮ್ಮ ಮಗ ಇರುವಾಗ ಯಾಕೆ ನಾನು ದುಡ್ಡು ಕೇಳಲಿ. ನಾನು ಕಷ್ಟಪಟ್ಟು ದುಡಿದಿದ್ದೇನೆ. ಒಂದು ಕಾಲದಲ್ಲಿ ಆಟೋ ಓಡಿಸಿ, ಬಸ್​ ಡ್ರೈವರ್​ ಆಗಿ ಕೆಲಸ ನಿರ್ವಹಿಸಿ ಜೀವನ ಸಾಗಿಸಿದ್ದೇನೆ. ಆದರೆ ಇದೀಗ ಮನೆ ಮಾರಿಕೊಂಡು ನಿನಗೋಸ್ಕರ ಹೀಗೆ ಆಗಿದ್ದೇವೆ ಎಂದರೆ ಮನೆಗಾಗಿ ಒಂದು ಲಕ್ಷ ಕೊಟ್ಟೆ ಎಂದು ಹೇಳ್ತಿದ್ದಾಳೆ. ಅದ್ರೆ ಎಲ್ಲಿ ಹಣ ಕೊಟ್ಟಿದ್ದಾಳೆ ಎಂದು ತೋರಿಸಲಿ. ನಮಗೆ ನೀನು ಬೇಡ ಎಂದು ಹೇಳಿಬಿಡು, ನಮ್ಮ ತಂಟೆಗೆ ಬರಬೇಡ. ನಾನು ಒಂದು ಮನೆ ಮಾಡಿಕೊಂಡು ಇದ್ದೀವಿ ಎಂದು ಪ್ರತಿಕ್ರಿಯಿಸಿದ್ದೂ ತಪ್ಪಾ? ಎಂದು ಮಗಳಿಗೆ ಪ್ರಶ್ನೆ ಒಡ್ಡಿದ್ದಾರೆ.

ನಮಗೆ ಡ್ಯಾಮೇಜ್​ ಮಾಡಬೇಕೆಂಬುದು ಅಳಿಯನ ಪ್ಲಾನ್. ಅದಕ್ಕೆ ನನ್ನ ಮಗಳನ್ನ ಬಳಸಿಕೊಳ್ಳುತ್ತಿದ್ದಾನೆ. ಕುಟುಂಬದ ವಿಚಾರ ಕುರಿತು ಬಗೆಹರಿಸಿಕೊಳ್ಳಲು ಯೋಚಿಸಿದ್ದೆವು. ಅದನ್ನ ಬಿಟ್ಟು ನಮ್ಮ ವಿರುದ್ಧವೇ ಕೇಸ್​ ಮಾಡಿದ್ದಾರೆ. ನನ್ನ ಮಗಳು ಸತ್ತುಹೋಗಿದ್ದಾಳೆ ಎಂದು ಬಿಟ್ಟುಬಿಟ್ಟಿದ್ದೇನೆ. ನಮಗೂ ಅವರಿಗೂ ಸಂಬಂಧವಿಲ್ಲ. ಅವರು ಹೇಳಿದ್ದೆಲ್ಲಾ ಸುಳ್ಳು. ಇದನ್ನ ಇಲ್ಲಿಗೆ ಬಿಟ್ಟು ಬಿಡೋಣ ಎಂದ ನಟ ಸತ್ಯಜಿತ್​​ ಹೇಳಿದ್ದಾರೆ.

ಇದನ್ನೂ ಓದಿ: ನಟನಾಗಿರುವುದಕ್ಕೆ ತಂದೆ ಉತ್ತಮವಾಗಿ ಅಳುತ್ತಿದ್ದಾರೆ: ಸತ್ಯಜಿತ್ ಕಣ್ಣೀರನ್ನು ಟೀಕಿಸಿದ ಮಗಳು ಸ್ವಲೇಹಾ

ಈ ಕುರಿತಂತೆ ಸತ್ಯಜಿತ್ ಮಗ ಖಾದರ್ ಮಾತನಾಡಿ, ನನ್ದನ ತಂಗಿಗೆ ಪೈಲಟ್ ಆಗಬೇಕೆಂಬ ಆಸೆ ಇತ್ತು. ಹಾಗಾಗಿ ಅಮೇರಿಕದಲ್ಲಿ ಪೈಲಟ್​ ಟ್ರೇನಿಂಗ್ ಬೇಕೆಂದು ಹಟಹಿಡಿದಿದ್ದಳು. ಊಟ ತಿಂಡಿ ಬಿಟ್ಟು ಜಗಳ ಮಾಡಿದ್ದಳು. ಟ್ರೇನಿಂಗ್ ಕಳುಹಿಸುವಾಗಲೇ ಹಣಕ್ಕಾಗಿ ಮನೆಯನ್ನು ಅಡವಿಟ್ಟಿದ್ದೆವೆ ಎಂಬ ವಿಷಯ ಅವಳಿಗೆ ಗೊತ್ತಿತ್ತು. ಈ ನಡುವೆ ನಾಲ್ಕು ವರ್ಷ ಕೆಲಸ ಕಳೆದುಕೊಂಡು ಇದ್ದಳು. ನಂತರ ಮತ್ತೆ ಕೆಲಸಕ್ಕೆ ಸೇರಿದ್ದಳು. ಆಗ, ಸೈಟ್​ ತೆಗೆದುಕೊಂಡು ಮನೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಳು. ಆದರೆ ಏನೂ ಮಾಡಿಕೊಡಲಿಲ್ಲ. ತಂಗಿಯ ಗಂಡ, ನಮ್ಮ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಕಾರು ಕೊಡಿ ಎಂದು ಆರೋಪಿಸುತ್ತಿದ್ದೇವೆ ಎಂದು ನಮ್ಮ ಮೇಲೆ ಸುಳ್ಳು ಆಪಾದನೆ ಹೇರಿದ್ದಾರೆ. ನಮಗೆ ಈಗಾಗಲೇ ಕಾರು ಇದೆ. ನಾವೇಕೆ ಅವರಲ್ಲಿ ಕಾರು ಕೇಳೋಣ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್