Pogaru Title Song: ಪೊಗರು ಹೊತ್ತು, ಮೈಮೇಲಿದ್ದ ಧೂಳು ಕೊಡವಿ ಬಂದ ಧ್ರುವ ಸರ್ಜಾ
ನಾನಾ ಕಾರಣಗಳಿಂದ ಮುಂದೂಡುತ್ತಲೇ ಬಂದಿದ್ದ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಇದೇ ಫೆಬ್ರವರಿ 19ರಂದು ಚಿತ್ರ ತೆರೆಗೆ ಬರುತ್ತಿದೆ. ಇದಕ್ಕೂ ಮೊದಲು ಸಿನಿಮಾ ತಂಡ ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡಿಕೊಂಡಿದೆ.
ದಾವಣೆಗೆರೆಯಲ್ಲಿ ಇಂದು ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ‘ಕರಾಬು…’ ಹಾಡಿನ ಮಾದರಿಯಲ್ಲೇ ಈ ಹಾಡು ಕೂಡ ಹಿಟ್ ಆಗುವ ಎಲ್ಲಾ ಲಕ್ಷಣ ಗೋಚರವಾಗಿದೆ. ಪೊಗರು ಟೈಟಲ್ ಸಾಂಗ್ ತುಂಬಾನೇ ಅದ್ದೂರಿಯಾಗಿ ಮೂಡಿ ಬಂದಿದೆ. ಧ್ರುವ ಸರ್ಜಾ ಈ ಹಾಡಿನಲ್ಲಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಹಾಡಿನಲ್ಲಿ ಹಾಕಿರುವ ನಾನಾ ರೀತಿಯ ಸೆಟ್ ಎಲ್ಲರ ಗಮನ ಸೆಳೆಯುತ್ತಿದೆ.
POGARUU Title video Song ??https://t.co/ekUFxyi4UR
— Dhruva Sarja (@DhruvaSarja) February 14, 2021
ನಾನಾ ಕಾರಣಗಳಿಂದ ಮುಂದೂಡುತ್ತಲೇ ಬಂದಿದ್ದ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಇದೇ ಫೆಬ್ರವರಿ 19ರಂದು ಚಿತ್ರ ತೆರೆಗೆ ಬರುತ್ತಿದೆ. ಇದಕ್ಕೂ ಮೊದಲು ಸಿನಿಮಾ ತಂಡ ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡಿಕೊಂಡಿದೆ. ಈ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದು ವಿಶೇಷವಾಗಿತ್ತು.
ಈ ಹಾಡು ರಿಲೀಸ್ ಆದ ಗಂಟೆಗಳಲ್ಲಿ ಬರೋಬ್ಬರಿ 5 ಲಕ್ಷ ವೀಕ್ಷಣೆ ಕಂಡಿದೆ. ಈ ಹಾಡನ್ನು ಅಭಿಮಾನಿಗಳು ಮೆಚ್ಚಿಕೊಂಡಿರುವುದು ಕಮೆಂಟ್ ಬಾಕ್ಸ್ ನೋಡಿದರೆ ಗೊತ್ತಾಗುತ್ತದೆ. ಚಂದನ್ ಶೆಟ್ಟಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಮೊದಲು ತೆರೆಕಂಡ ಕರಾಬು ಹಾಡು ಯೂಟ್ಯೂಬ್ನಲ್ಲಿ 20 ಕೋಟಿ ವೀಕ್ಷಣೆ ಕಂಡಿದ್ದು ಹಾಡಿನ ಹೆಚ್ಚುಗಾರಿಕೆ.