AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟನಾಗಿರುವುದಕ್ಕೆ ತಂದೆ ಉತ್ತಮವಾಗಿ ಅಳುತ್ತಿದ್ದಾರೆ: ಸತ್ಯಜಿತ್ ಕಣ್ಣೀರನ್ನು ಟೀಕಿಸಿದ ಮಗಳು ಸ್ವಲೇಹಾ

ಈಗ ಹೊಸ ಆರೋಪ ಮಾಡಿರುವ ಸ್ವಲೇಹಾ, ನನ್ನ ತಂದೆ ಸತ್ಯಜಿತ್​​ಗೆ ಹಣ ಬೇಕಾಗಿದೆ. ಹೀಗಾಗಿ, 2 ತಿಂಗಳಿನಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ನಟನಾಗಿರುವುದಕ್ಕೆ ತಂದೆ ಉತ್ತಮವಾಗಿ ಅಳುತ್ತಿದ್ದಾರೆ: ಸತ್ಯಜಿತ್ ಕಣ್ಣೀರನ್ನು ಟೀಕಿಸಿದ ಮಗಳು ಸ್ವಲೇಹಾ
ಸ್ಸಲೇಹಾ- ತ್ಯಜಿತ್​
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​|

Updated on: Feb 12, 2021 | 5:22 PM

Share

ಬೆಂಗಳೂರು: ಕನ್ನಡದ ನಟ ಸತ್ಯಜಿತ್​ ಕುಟುಂಬ ಕಲಹ ಈಗ ಬೀದಿಗೆ ಬಂದಿದೆ. ಮಗಳು ಸ್ವಲೇಹಾ ಓದಿಗೆ ನಾನು ಹಣ ನೀಡಿದ್ದೇನೆ ಎಂದು ಸತ್ಯಜಿತ್​ ಹೇಳಿದರೆ, ತಂದೆ ನನಗೆ ಹಣವನ್ನೇ ನೀಡಿಲ್ಲ ಎಂದು ಸ್ವಲೇಹಾ ತಿರುಗೇಟು ನೀಡಿದ್ದಾರೆ. ಈಗ ಹೊಸ ಆರೋಪ ಮಾಡಿರುವ ಅವರು, ನನ್ನ ತಂದೆ ಸತ್ಯಜಿತ್​​ಗೆ ಹಣ ಬೇಕಾಗಿದೆ. ಹೀಗಾಗಿ, 2 ತಿಂಗಳಿನಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ನಾನು ಗರ್ಭಿಣಿ. ಹೀಗಾಗಿ ನನಗೆ ಸಂಬಳ ಬರುತ್ತಿಲ್ಲ. ಕುಟುಂಬ ನಿರ್ವಹಣೆ ನೀವೇ ನೋಡಿಕೊಳ್ಳಿ ಎಂದು ನಮ್ಮ ತಾಯಿಯವರಿಗೆ ತಿಳಿಸಿದ್ದೆ. ಅದೇ ದಿನ ರಾತ್ರಿಯೇ ತಂದೆ ನನಗೆ ಕರೆ ಮಾಡಿದ್ದರು. ಮನೆಗೆ ಬರುವಂತೆ ಗದರಿದ್ದರು. ನಾನು ನನ್ನ ಪತಿಯ ಜತೆ ತಂದೆ ಮನೆಗೆ ಹೋಗಿದ್ದೆ. ಅಲ್ಲಿ ಹಣ ನೀಡುವಂತೆ ಮತ್ತೆ ಕೇಳಿದ್ದರು. ಆಗ ನನ್ನ ಪತಿ, ನಿಮಗೆ ನಾವು ಏಕೆ ಹಣ ಕೊಡಬೇಕು ಎಂದು ನನ್ನ ಅಣ್ಣನನ್ನು ಪ್ರಶ್ನೆ ಮಾಡಿದ್ದರು. ಅಲ್ಲಿಂದ ಸಮಸ್ಯೆ ಆರಂಭವಾಯಿತು, ಎಂದು ಸ್ವಲೇಹಾ ಮಾಹಿತಿ ನೀಡಿದ್ದಾರೆ.

ತಂದೆ-ತಾಯಿ ಮನೆ ನಿರ್ವಹಣೆಗೆ ನಾನೇ ಹಣ ನೀಡುತ್ತಿದ್ದೆ. ನನಗೆ ಮದುವೆಯಾದರೂ ಹಣ ಕೊಡುವುದನ್ನು ಮುಂದುವರಿಸಿದ್ದೆ. ಇದನ್ನ ಯಾವತ್ತೂ ನನ್ನ ಪತಿ ಪ್ರಶ್ನೆ ಮಾಡಿಲ್ಲ. ನಾನು ಗರ್ಭಿಣಿಯಾದ ಕಾರಣ ಈಗ ಹಣ ನೀಡಲು ಆಗಿಲ್ಲ. ಈ ಕಾರಣಕ್ಕೆ ನನ್ನ ವಿರುದ್ಧ ವಿಡಿಯೋ ಮಾಡಿದ್ದಾರೆ. ನಾನು ತಿಂಗಳಿಗೆ 4 ಲಕ್ಷ ಸಂಪಾದನೆ ಮಾಡುತ್ತಿದ್ದೇನೆಂದು ಹೇಳುತ್ತಿದ್ದಾರೆ. ಆದರೆ, ಯಾವ ಏರ್‌ಲೈನ್ಸ್‌ನವರು ಅಷ್ಟೊಂದು ಸಂಭಾವನೆ ಕೊಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನ ತಂದೆ ವಿಡಿಯೋ ಮಾಡಿ ಅಳುತ್ತಿದ್ದಾರೆ. ನಟರಾಗಿ ಅವರಿಗೆ ಅಳುವುದು ಸಹಜವಾಗಿ ಬರುತ್ತದೆ ಎಂದು ಸ್ವಲೇಹಾ ಹಂಗಿಸಿದರು.

ಇದನ್ನೂ ಓದಿ: ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್