ಕೊಡಗು: ಐಪಿಎಸ್ ಅಧಿಕಾರಿ ಎಂದು ನಂಬಿಸಿ ಯುವತಿಯನ್ನು ಮದುವೆಯಾಗಿದ್ದ ನಕಲಿ ಐಪಿಎಸ್ ಅಧಿಕಾರಿ ಮತ್ತು ಆತನ ಸ್ನೇಹಿತರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿಯನ್ನು ಕೇರಳ ಮೂಲದ ತ್ರಿಶೂರ್ ಮಿಥುನ್ ವಿವಾಹವಾಗಿದ್ದ. ಅಲ್ಲದೆ, ಪತ್ನಿ ಮನೆಯವ್ರಿಗೆ ತಾನು ಐಪಿಎಸ್ ಅಧಿಕಾರಿ ಅಂತಾ ನಂಬಿಸಲು ಸ್ನೇಹಿತರ ಜೊತೆ ಬಂದು ಪೊಲೀಸ್ ಸಮವಸ್ತ್ರ ಸಹ ಖರೀದಿ ಮಾಡಿದ್ದ. ತವರು ಮನೆಗೆ ವಾಪಸ್ ಬಂದಿದ್ದ ಯುವತಿಗೆ ಪತಿಯ ವಂಚನೆ ಬಯಲಾಗಿದೆ. ವಂಚನೆ ಬಗ್ಗೆ ಗೊತ್ತಾದ ಬಳಿಕ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ನಾಪೋಕ್ಲು ಪೊಲೀಸರು ನಕಲಿ IPS ಅಧಿಕಾರಿ ತ್ರಿಶೂರ್ ಮಿಥುನ್ ಹಾಗೂ ಆತನ ಸ್ನೇಹಿತರಾದ ಮನೋಜ್, ಅಬುತಾಹಿರ್ ಮತ್ತು ವಿನೋದ್ನನ್ನು ಬಂಧಿಸಿದ್ದಾರೆ.