ದುಬೈನಲ್ಲಿ ಉದ್ಯೋಗ ಆಮಿಷ, ಆನ್ಲೈನ್ನಲ್ಲಿ ಮೋಸ ಹೋದ ಉಪನ್ಯಾಸಕ
ಬೆಂಗಳೂರು: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ಉಪನ್ಯಾಸಕರಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. IZEE ಎಂಬ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ವಂಚನೆಗೊಳಗಾದವರು. ಶ್ರೀನಿವಾಸ್ಗೆ JAZEERA ಎಂಬ ದುಬೈ ಯೂನಿವರ್ಸಿಟಿಯಿಂದ ಆಫರ್ ಲೆಟರ್ ಬಂದಿತ್ತು. ಆಫರ್ ಲೆಟರ್ ಅನ್ನು ವೆಬ್ ಸೈಟ್ನಲ್ಲಿ ಖಾತ್ರಿ ಪಡಿಸಿಕೊಂಡರು. ಬಳಿಕ ವರ್ಕ್ ಪರ್ಮಿಟ್ ವೀಸಾಗಾಗಿ ಹಣ ಕಳುಹಿಸಿ ಎಂದು ಹೇಳಲಾಗಿತ್ತು. ಕೆಲಸ ಸಿಕ್ಕ ಮೇಲೆ ಹಣ ಮತ್ತೆ ವಾಪಸ್ ನೀಡುವುದಾಗಿ ವೆಬ್ಸೈಟ್ನಲ್ಲಿ ಹೇಳಲಾಗಿತ್ತು. ಹೀಗಾಗಿ ನಿಶಾನ್ ಎಂಟರ್ಪ್ರೈಸಸ್ ಎಂಬ […]
ಬೆಂಗಳೂರು: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ಉಪನ್ಯಾಸಕರಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. IZEE ಎಂಬ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ವಂಚನೆಗೊಳಗಾದವರು.
ಶ್ರೀನಿವಾಸ್ಗೆ JAZEERA ಎಂಬ ದುಬೈ ಯೂನಿವರ್ಸಿಟಿಯಿಂದ ಆಫರ್ ಲೆಟರ್ ಬಂದಿತ್ತು. ಆಫರ್ ಲೆಟರ್ ಅನ್ನು ವೆಬ್ ಸೈಟ್ನಲ್ಲಿ ಖಾತ್ರಿ ಪಡಿಸಿಕೊಂಡರು. ಬಳಿಕ ವರ್ಕ್ ಪರ್ಮಿಟ್ ವೀಸಾಗಾಗಿ ಹಣ ಕಳುಹಿಸಿ ಎಂದು ಹೇಳಲಾಗಿತ್ತು. ಕೆಲಸ ಸಿಕ್ಕ ಮೇಲೆ ಹಣ ಮತ್ತೆ ವಾಪಸ್ ನೀಡುವುದಾಗಿ ವೆಬ್ಸೈಟ್ನಲ್ಲಿ ಹೇಳಲಾಗಿತ್ತು. ಹೀಗಾಗಿ ನಿಶಾನ್ ಎಂಟರ್ಪ್ರೈಸಸ್ ಎಂಬ ಅಕೌಂಟ್‌ಗೆ 1.90 ಲಕ್ಷ ಹಣ ವರ್ಗಾವಣೆ ಮಾಡಿದ್ದರು.
ನಂತರ ಹೆಲ್ತ್ ಇನ್ಸುರೆನ್ಸ್‌ಗೆ ಮತ್ತೆ 5000 ಯುಎಸ್ ಡಾಲರ್ ಹಣಕ್ಕಾಗಿ ವೆಬ್ಸೈಟ್ನಲ್ಲಿ ಬೇಡಿಕೆ ಬಂದಿತ್ತು. ಇದು ವಂಚನೆ ಎಂದು ಅರಿತ ಶ್ರೀನಿವಾಸ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Published On - 3:23 pm, Sat, 23 November 19