AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕ್ತಿದ್ದಾರಾ? ಹೀಗಂತ ವಿಡಿಯೋ ಬಿಟ್ಟವ ಅರೆಸ್ಟ್

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಮಹಾಮಾರಿ ಹೆಜ್ಜೆಯೂರಿದ್ದೇ ಅದರ ನಿಯಂತ್ರಣಕ್ಕೆ ಮೊದಲು ಮುಂದಾಗಿದ್ದೇ ರಾಜೀವ್​ಗಾಂಧಿ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆ. ಆದ್ರೆ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದಾರೆ? ಓಪಿಡಿ ವಿಭಾಗದಲ್ಲಿ ನೂರಾರು ರೋಗಿಗಳು ಜಮಾಯಿಸಿದ್ದು, ಪರಿಸ್ಥಿತಿ ಕೈಮೀರಿದೆ ಎಂಬಂತೆ ಆ ವಿಡಿಯೋ ತುಣುಕಿನಲ್ಲಿ ತೋರಿಸಲಾಗಿತ್ತು. ಆದ್ರೆ ಅರೋಪಿ ಸವೀರುಲ್ಲಾ ಎಂಬುವವನು ಬೇರೆ ರಾಜ್ಯದ ಆ ವಿಡಿಯೋವನ್ನು ವಿಕ್ಟೋರಿಯಾ ಆಸ್ಪತ್ರೆಯದ್ದು ಎಂಬಂತೆ ಬಂಬಿಸಿ ಅದನ್ನು ಫೇಸ್ ಬುಕ್​ನಲ್ಲಿ ಪೋಸ್ಟ್ ಮಾಡಿದ್ದ. […]

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕ್ತಿದ್ದಾರಾ? ಹೀಗಂತ ವಿಡಿಯೋ ಬಿಟ್ಟವ  ಅರೆಸ್ಟ್
ಸಾಧು ಶ್ರೀನಾಥ್​
|

Updated on: Jul 19, 2020 | 9:27 PM

Share

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಮಹಾಮಾರಿ ಹೆಜ್ಜೆಯೂರಿದ್ದೇ ಅದರ ನಿಯಂತ್ರಣಕ್ಕೆ ಮೊದಲು ಮುಂದಾಗಿದ್ದೇ ರಾಜೀವ್​ಗಾಂಧಿ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆ. ಆದ್ರೆ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದಾರೆ? ಓಪಿಡಿ ವಿಭಾಗದಲ್ಲಿ ನೂರಾರು ರೋಗಿಗಳು ಜಮಾಯಿಸಿದ್ದು, ಪರಿಸ್ಥಿತಿ ಕೈಮೀರಿದೆ ಎಂಬಂತೆ ಆ ವಿಡಿಯೋ ತುಣುಕಿನಲ್ಲಿ ತೋರಿಸಲಾಗಿತ್ತು.

ಆದ್ರೆ ಅರೋಪಿ ಸವೀರುಲ್ಲಾ ಎಂಬುವವನು ಬೇರೆ ರಾಜ್ಯದ ಆ ವಿಡಿಯೋವನ್ನು ವಿಕ್ಟೋರಿಯಾ ಆಸ್ಪತ್ರೆಯದ್ದು ಎಂಬಂತೆ ಬಂಬಿಸಿ ಅದನ್ನು ಫೇಸ್ ಬುಕ್​ನಲ್ಲಿ ಪೋಸ್ಟ್ ಮಾಡಿದ್ದ. ವಿಡಿಯೋ ನೋಡಿ ಜನ ಗಾಬರಿಯಾಗಿದ್ದರು. ಮೊದಲೇ ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿರುವ ಜನ ಏನಪ್ಪಾ ಇದು? ಪರಿಸ್ಥಿತಿ ಕೈಮೀರುತ್ತಿದೆಯಾ? ಎಂದು ಆತಂಕಗೊಂಡಿದ್ದರು. ಈ ವಿಡಿಯೋ ಟ್ವಿಟ್ಟರ್, ಫೇಸ್ ಬುಕ್, ಪಾಟ್ಸಪ್ ನಲ್ಲಿ ವೈರಲ್ ಆಗಿತ್ತು.

ಆದ್ರೆ ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು, ಕೇಸ್ ದಾಖಲಿಸಿಕೊಂಡು ತನಿಖೆ ಶುರುಹಚ್ಚಿಕೊಂಡಿದ್ದರು. ರಾಜ್ಯಕ್ಕೆ ಕಳಂಕ ತರುವ, ಅದಕ್ಕಿಂತ ಹೆಚ್ಚಿಗೆ.. ಮೊದಲೇ ಜನರು ಆತಂಕದಲ್ಲಿರುವಾಗ ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ವಿಡಿಯೋ ಹರಿಬಿಟ್ಟವರು ಯಾರು? ಅದರ ಅಸಲಿಯೆತ್ತು ಏನು? ಎಂದು ಪ್ರಾಥಮಿಕವಾಗಿ ವಿಚಾರಿಸಲಾಗಿ ‘ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ಹೇಳಲಾದ ವಿಡಿಯೋ’ ನಕಲಿಯದ್ದು, ಅದು ಬೇರೆ ರಾಜ್ಯವೊಂದರ ವಿಡಿಯೋ ಎಂಬುದು ರಾಜ್ಯ ಸೈಬರ್ ಕ್ರೈಂ ಪೊಲೀಸರಿಗೆ ಮನದಟ್ಟಾಗಿದೆ. ಅದಾಗುತ್ತಿದ್ದಂತೆ ತಕ್ಷಣ ಪೂರ್ಣ ಪ್ರಮಾಣದಲ್ಲಿ ಫೀಲ್ಡ್​ಗಿಳಿದ ಸೈಬರ್ ಕ್ರೈಂ ಪೊಲೀಸರು, ಕೇಸ್ ದಾಖಲಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದ ಕಿಡಿಗೇಡಿಯ ಬೆನ್ನುಹತ್ತಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಬಳಿ ಸೋಂಕು ಪರೀಕ್ಷೆ ಮಾಡಿಸೋಕೆ ಜನ ಕ್ಯೂ ನಿಂತಿದ್ದಾರೆ. ಅಲ್ಲದೆ ನೂರಾರು ಜನರಿಂದ ವೈದ್ಯರಿಗೆ ತೊಂದರೆಯಾಗ್ತಿದೆ ಎಂಬ ವಿಡಿಯೋ ವೈರಲ್ ಆಗುವಂತೆ ‘ನೋಡಿಕೊಂಡಿದ್ದು’ ಯಾರು? ಅದರ ಅಸಲಿಯೆತ್ತು ಏನು ಸಿಸಿಬಿ ಅಧಿಕಾರಿಗಳು ಪರಿಶೀಲಿಸತೊಡಗಿದಾಗ..

ಈ ಕುಕೃತ್ಯವೆಸಗಿದ ಅರೋಪಿ ಸಮೀರುಲ್ಲಾ ಎಂಬ ವ್ಯಕ್ತಿ ಎನ್ನುವುದು ಮನವರಿಕೆಯಾಗುತ್ತಿದ್ದಂತೆ ಸಿಸಿಬಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಅರೋಪಿ ಮೂಲತಃ ತಿಲಕ್ ನಗರ ನಿವಾಸಿಯಾಗಿದ್ದು, ಟಿಂಬರ್ ವ್ಯವಹಾರ, ಕೆಲವು ಸಿನಿಮಾ ಈವೇಂಟ್ ಆರ್ಗನೈಸ್​ ಮಾಡುವುದು ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಮುಂಬರುವ ಕಾರ್ಪೋರೆಟರ್ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ಲಾನ್ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ವಿಡಿಯೋ ವಿಕ್ಟೋರಿಯಾ ಆಸ್ಪತ್ರೆಯದ್ದಲ್ಲ. ಜನ ಭಯ ಪಡುವ ಅವಶ್ಯಕತೆಯಿಲ್ಲ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಕಿಡಿಗೇಡಿಯ ವಿರುದ್ಧ IT Act ಹಾಗೂ NDMA sec 505 ಅಡಿ ಕೇಸ್ ದಾಖಲಿಸಿಕೊಂಡು, ಅರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಮುಂದೆ ಯಾರೊಬ್ಬರೂ ಈ ರೀತಿ ಮಾಡದಂತೆ ಖಡಕ್ ವಾರ್ನಿಂಗ್ ಸಹ ನೀಡಿದ್ದಾರೆ. ಇದೇ ವೇಳೆ, ಈ ವಿಡಿಯೋ ವಿಕ್ಟೋರಿಯಾ ಆಸ್ಪತ್ರೆಯದ್ದಲ್ಲ. ಜನ ಅನಗತ್ಯವಾಗಿ ಭಯ ಪಡುವ ಅವಶ್ಯಕತೆಯಿಲ್ಲ ಎಂದೂ ಆಯುಕ್ತ ಸಂದೀಪ್ ಪಾಟೀಲ್ ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ.