ಬೆಂಗಳೂರು: ಪತ್ನಿ, ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ

|

Updated on: Mar 02, 2023 | 3:26 PM

ಪತ್ನಿ, ಇಬ್ಬರು ಪುತ್ರಿಯರಿಗೆ ವಿಷವುಣಿಸಿ ಪತಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ಕೋಣನಕುಂಟೆಯ ಮನೆಯೊಂದರಲ್ಲಿ ನಡೆದಿದೆ.

ಬೆಂಗಳೂರು: ಪತ್ನಿ, ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ
ಮೃತ ಪತ್ನಿ, ಮಕ್ಕಳು, ಪತಿ ನಾಗೇಂದ್ರ
Follow us on

ಬೆಂಗಳೂರು: ಪತ್ನಿ, ಇಬ್ಬರು ಪುತ್ರಿಯರಿಗೆ ವಿಷವುಣಿಸಿ ಪತಿ ತಾನೂ ಆತ್ಮಹತ್ಯೆಗೆ (suicide) ಯತ್ನಿಸಿರುವಂತಹ ಘಟನೆ ನಗರದ ಕೋಣನಕುಂಟೆಯ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯ ಮನೆಯೊಂದರಲ್ಲಿ ನಡೆದಿದೆ. ಪತ್ನಿ ವಿಜಯಾ(28), ಪುತ್ರಿಯರಾದ ನಿಶಾ(7), ದೀಕ್ಷಾ(5) ಮೃತ ದುರ್ದೈವಿಗಳು. ಪತಿ ನಾಗೇಂದ್ರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಊಟದಲ್ಲಿ ವಿಷವುಣಿಸಿ ಹತ್ಯೆ ಶಂಕೆ ವ್ಯಕ್ತವಾಗಿದೆ. ಇನ್ನು ಪತಿ ನಾಗೇಂದ್ರ ಕ್ಯಾನ್ಸರ್​ನಿಂದ ಬಳತ್ತಿದ್ದು, ಬ್ಲೇಡ್​ನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. 2014ರಲ್ಲಿ ದಂಪತಿ ಮದುವೆಯಾಗಿದ್ದರು. ನಾಗೇಂದ್ರನಿಗೆ ವಿಪರೀತ ಕುಡಿದ ಚಟ ಇತ್ತು. ಪತ್ನಿ ವಿಜಯ ಮೆಡಿಕಲ್​ನಲ್ಲಿ ಕೆಲಸ ಮಾಡುತ್ತಿದ್ದರು. ವಿಜಯ ಆರ್ಥಿಕವಾಗಿ ಕುಟುಂಬಕ್ಕೆ ಆಧಾರವಾಗಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಕಿಮ್ಸ್​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದ ಅಮಲಿನಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆ

ಚಿತ್ರದುರ್ಗ: ಕುಡಿದ ಅಮಲಿನಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆ ಮಾಡಿರುವಂತಹ ಘಟನೆ ತಾಲೂಕಿನ ಜೋಡಿಚಿಕ್ಕೇನಹಳ್ಳಿ  ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ(40) ಮೃತ ಪತ್ನಿ. ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆರೋಪಿ ಪತಿ ಲಿಂಗರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ‌ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪೊಲೀಸರು ಅಲರ್ಟ್, ಬೈಕ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6.5 ಕೆ.ಜಿ ಚಿನ್ನ ವಶ

ಬೆಂಗಳೂರಿನಲ್ಲಿ ಬಾರ್​​ ಕ್ಯಾಶಿಯರ್ ಹತ್ಯೆ

ಬೆಂಗಳೂರು: ಬಾರ್​​ ಕ್ಯಾಶಿಯರ್ ತಲೆ ಮೇಲೆ ಕಲ್ಲು ಎತ್ತಿಹಾಕಿ​​​ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್​ಎಂಸಿ ಯಾರ್ಡ್​​​ ಬಳಿ ನಡೆದಿದೆ. ಶೇಖರ್ ಬಾರ್​ನ ಕ್ಯಾಶಿಯರ್​​ ಶಿವಕುಮಾರ್ ಕೊಲೆಯಾದ ವ್ಯಕ್ತಿ. ಮಾತಿಗೆ ಮಾತು ಬೆಳೆದು ಪರಸ್ಪರ ಅವಾಚ್ಯ ಶಬ್ಧದಿಂದ ನಿಂದನೆ ತಾರಕಕ್ಕೇರಿದೆ. ಬಳಿಕ ಕರ್ಣ ಅಲಿಯಾಸ್ ಸಿದ್ದೋಜಿ ರಾವ್ , ಗಿರೀಶ್ ಎಂಬುವರು, ಶೇಖರ್ ಬಾರ್​ನ ಕ್ಯಾಶಿಯರ್​​ ಶಿವಕುಮಾರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸ್ಟೆಲ್​ ಕಟ್ಟಡದಿಂದ ಜಿಗಿದು MBBS ವಿದ್ಯಾರ್ಥಿ ಶ್ರೀರಾಮ್ ಆತ್ಮಹತ್ಯೆ

ಬೀದರ್: ಇನ್ನೇನು ಓದು ಮುಗಿದು ವೈದ್ಯನಾಗಬೇಕು ಎನ್ನುವಷ್ಟರಲ್ಲೇ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಸಾವಿನ ಮನೆ ಸೇರಿದ್ದಾನೆ. ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ  ಶ್ರೀರಾಮ್ ಹಾಸ್ಟೆಲ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಇಂದು (ಫೆಬ್ರುವರಿ 28) ಬೀದರ್​ನ ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ತಾಯಿ‌ ಶವದೊಂದಿಗೆ 2 ದಿನ ಕಳೆದ ಬಾಲಕ, ಅಪ್ಪನ ಸ್ನೇಹಿತರು ಮನೆಗೆ ಬಂದಾಗ ಘಟನೆ ಬಯಲು

ಜಗಳ ಕೊಲೆಯಲ್ಲಿ ಅಂತ್ಯ

ಹಳೆಯ ದ್ವೇಷಕ್ಕೆ ಯುವಕನನ್ನು ಕತ್ತಿಯಿಂದ ಹಿರಿದು ಬರ್ಬರವಾಗಿ ಕೊಲೆ (Murder) ಮಾಡಿದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತ್ರಿಪುರಾಂತ ಬಳಿ ನಡೆದಿದೆ. ಆನಂದ್‌ ಪುಲೆ (26) ಭೀಕರವಾಗಿ ಕೊಲೆಯಾದ ದುರ್ದೈವಿ. ಇಬ್ಬರು ಯುವಕರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಉದಯ್ ಹಾಗೂ ಆತನ ಗುಂಪು ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.