AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಘಟನೆ: ಬೆಂಗಳೂರಿನಲ್ಲಿ ಬಾರ್​​ ಕ್ಯಾಶಿಯರ್ ಹತ್ಯೆ, ಭಾವನಿಂದಲೇ ನಾದಿನಿ ಹತ್ಯೆಗೆ ಯತ್ನ

ಬೆಂಗಳೂರಿನನಲ್ಲಿ ಬಾರ್​​ ಕ್ಯಾಶಿಯರ್​ನ ತಲೆ ಮೇಲೆ ಕಲ್ಲು ಎತ್ತಿಹಾಕಿ​​​ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇನ್ನು ಕೋಲಾರದಲ್ಲಿ ಬಾವನೇ ನಾದಿನಿಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಪ್ರತ್ಯೇಕ ಘಟನೆಯ ಮಾಹಿತಿ ಈ ಕೆಳಗಿನಂತಿದೆ

ಪ್ರತ್ಯೇಕ ಘಟನೆ:  ಬೆಂಗಳೂರಿನಲ್ಲಿ ಬಾರ್​​ ಕ್ಯಾಶಿಯರ್ ಹತ್ಯೆ, ಭಾವನಿಂದಲೇ ನಾದಿನಿ ಹತ್ಯೆಗೆ ಯತ್ನ
Crime Scene
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Mar 02, 2023 | 10:14 AM

Share

ಬೆಂಗಳೂರು/ಕೋಲಾರ: ಬಾರ್​​ ಕ್ಯಾಶಿಯರ್ ತಲೆ ಮೇಲೆ ಕಲ್ಲು ಎತ್ತಿಹಾಕಿ​​​ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್​ಎಂಸಿ ಯಾರ್ಡ್​​​ ಬಳಿ ನಡೆದಿದೆ. ಶೇಖರ್ ಬಾರ್​ನ ಕ್ಯಾಶಿಯರ್​​ ಶಿವಕುಮಾರ್ ಕೊಲೆಯಾದ ವ್ಯಕ್ತಿ. ಮಾತಿಗೆ ಮಾತು ಬೆಳೆದು ಪರಸ್ಪರ ಅವಾಚ್ಯ ಶಬ್ಧದಿಂದ ನಿಂದನೆ ತಾರಕಕ್ಕೇರಿದೆ. ಬಳಿಕ ಕರ್ಣ ಅಲಿಯಾಸ್ ಸಿದ್ದೋಜಿ ರಾವ್ , ಗಿರೀಶ್ ಎಂಬುವರು, ಶೇಖರ್ ಬಾರ್​ನ ಕ್ಯಾಶಿಯರ್​​ ಶಿವಕುಮಾರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾವನಿಂದಲೇ ನಾದಿನಿ ಹತ್ಯೆಗೆ ಯತ್ನ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾವನಿಂದಲೇ ನಾದಿನಿ ಹತ್ಯೆಗೆ ಯತ್ನಿಸಿರುವ ಘಟನೆ ಇಂದು (ಮಾ.02) ಬೆಳಗ್ಗೆ ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ನಡೆದಿದೆ. ಶ್ರೀನಿವಾಸ್ ಎನ್ನುವಾತನೇ ತನ್ನ ನಾದಿನಿಯಾಗಬೇಕಿದ್ದ ಕವಿತಾ ಮೇಲೆ ಮಚ್ಚಿನಿಂದ ಮಾರಣಾಂತಿ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡಿರುವ ಕವಿತಾಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿದ್ದು, ಇನ್ನು ಆರೋಪಿ ಶ್ರೀನಿವಾಸ್​ನನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಕಾರ್ಯಕ್ಕೆ ಪ್ರಶಂಸೆ

ಇನ್ನು ಠಾಣೆಗೆ ಬರುತ್ತಿದ್ದ ಪೊಲೀಸ್ ಕಾನ್ಸ್​ಟೇಬಲ್​ ಅನಿತಾ, ಘಟನೆ ನೋಡಿ ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಕೋಲಾರ ನಗರ ಠಾಣೆ ಮಹಿಳಾ ಕಾನ್ ಸ್ಟೇಬಲ್ ಅನಿತಾ ಅವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಕಾನ್ ಸ್ಟೇಬಲ್ ಗಳಾದ ಅನಿತಾ, ಹೇಮಂತ್, ಮಹೇಶ್ ಅವರ ಕಾರ್ಯಕ್ಕೆ ಎಸ್ಪಿ ನಾರಾಯಣ್ ಮೆಚ್ಚಿ ತಲಾ ಹತ್ತು ಸಾವಿರ ಬಹುಮಾನ ಘೋಷಿಸಿದ್ದಾರೆ.

Published On - 10:08 am, Thu, 2 March 23