Bihar News: ವಿಜಯ ದಶಮಿಯ ರಾತ್ರಿ ತನ್ನ ಅಪ್ರಾಪ್ತ ಮಗನನ್ನು ಬಲಿ ಕೊಟ್ಟ ತಂದೆ

| Updated By: Rakesh Nayak Manchi

Updated on: Oct 08, 2022 | 8:26 PM

Crime news: ವಾಮಾಚಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗನನ್ನು ವಿಜಯದಶಮಿಯ ರಾತ್ರಿ ಬಲಿಕೊಟ್ಟ ಕ್ರೂರ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Bihar News: ವಿಜಯ ದಶಮಿಯ ರಾತ್ರಿ ತನ್ನ ಅಪ್ರಾಪ್ತ ಮಗನನ್ನು ಬಲಿ ಕೊಟ್ಟ ತಂದೆ
ವಿಜಯ ದಶಮಿಯ ರಾತ್ರಿ ತನ್ನ ಅಪ್ರಾಪ್ತ ಮಗನನ್ನು ಬಲಿ ಕೊಟ್ಟ ತಂದೆ
Follow us on

ವಾಮಾಚಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗನನ್ನು ವಿಜಯದಶಮಿಯ ರಾತ್ರಿ ಬಲಿಕೊಟ್ಟ ಕ್ರೂರ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ವಾಮಾಚಾರವನ್ನು ಅಭ್ಯಾಸ ಮಾಡುತ್ತಿದ್ದ ಆರೋಪಿ ದೀಪಕ್ ಶರ್ಮಾ, ಬ್ಲಾಕ್ ಮ್ಯಾಜಿಕ್ ಮಂತ್ರಗಳನ್ನು ಗಳಿಸಲು ವಿಜಯ ದಶಮಿಯ ರಾತ್ರಿ ತನ್ನ ಏಳು ವರ್ಷದ ಮಗ ರಾಘವ್ ಕುಮಾರ್‌ನನ್ನು ಕತ್ತು ಹಿಸುಕಿ ಕೊಂದು ಹಾಕಿದ್ದಾನೆ. ಬಂಕಾ ಜಿಲ್ಲೆಯ ಅಮರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಜಯದಶಮಿಯ ರಾತ್ರಿ ತನ್ನ ಪತಿ ತನ್ನ ಮಗ ರಾಘವ್‌ನನ್ನು ಕೊಂದಿದ್ದಾನೆ ಎಂದು ಮೃತನ ತಾಯಿ ಖುಷ್ಬೂ ದೇವಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

“ನಾವು ದೀಪಕ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ ಶುಕ್ರವಾರ ಹತ್ತಿರದ ನಿರ್ಜನ ಸ್ಥಳದಿಂದ ಬಂಧಿಸಿದ್ದೇವೆ. ಕೃತ್ಯ ಎಸಗಿದ ಬಳಿಕ ಮನೆಯಿಂದ ಸ್ವಲ್ಪ ದೂರದಲ್ಲಿರುವ ಪೊದೆಗಳ ಮರೆಯಲ್ಲಿ ಅಡಗಿಕೊಂಡಿದ್ದ. ಸದ್ಯ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ” ಎಂದು ಅಮರಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಆರೋಪಿಯ ಕೊಠಡಿಯ ಹುಡುಕಾಟದ ಸಮಯದಲ್ಲಿ ಬ್ಲ್ಯಾಕ್ ಮ್ಯಾಜಿಕ್‌ಗೆ ಸಂಬಂಧಿಸಿದ ಕೆಲವು ಪುಸ್ತಕಗಳು, ಸೆನ್ಸಾರ್ ಕ್ಯಾಮೆರಾ ಮತ್ತು ಪೆನ್ ಡ್ರೈವ್ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಯು ಕಳೆದ ಕೆಲವು ತಿಂಗಳುಗಳಿಂದ ಮಾಟಮಂತ್ರದಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ವಿಜಯದಶಮಿಯಂದು ತನ್ನ ಮಗನ ಬಲಿ ಕೊಡಲು ಮತ್ತು ವಾಮಾಚಾರದ ಮಾಟಮಂತ್ರವನ್ನು ಸಾಧಿಸಲು ಕಾಯುತ್ತಿದ್ದನು ಎಂದು ಕುಮಾರ್ ಹೇಳಿದರು.

ಮತ್ತಷ್ಟು ಅಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sat, 8 October 22