ಇಬ್ಬರು ಯುವತಿಯರ ಜೊತೆ ಬ್ರೇಕ​ಪ್, ಸಾಪ್ಟ್​ವೇರ್ ಇಂಜಿನಿಯರ್ ಮಾಡಿದ 3 ಕರೆ ವಿಧಾನಸೌಧವನ್ನು ನಡುಗಿಸಿತು

ವಿಧಾನಸೌಧಲ್ಲಿ ಬಾಂಬ್ ಇಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಳ್ಳುತ್ತೆ ಎಂದು 3 ಬಾರಿ ಕರೆ ಮಾಡಿ ಕಟ್​ ಮಾಡಿದ ಸಾಪ್ಟ್ ವೇರ್ ಇಂಜಿನಿಯರ್

ಇಬ್ಬರು ಯುವತಿಯರ ಜೊತೆ ಬ್ರೇಕ​ಪ್, ಸಾಪ್ಟ್​ವೇರ್ ಇಂಜಿನಿಯರ್ ಮಾಡಿದ 3 ಕರೆ ವಿಧಾನಸೌಧವನ್ನು ನಡುಗಿಸಿತು
ಆರೋಪಿ ಪ್ರಶಾಂತ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 08, 2022 | 5:12 PM

ಬೆಂಗಳೂರು: ಪ್ರಶಾಂತ್‌ ಸಾಪ್ಟ್ ವೇರ್ ಇಂಜಿನಿಯರ್ (Software Engineer), ಇಬ್ಬರು ಯುವತಿಯರ ಜೊತೆ ಬ್ರೇಕ್ ಮಾಡಿಕೊಂಡು,  ಜೊತೆಗೆ ಮನೆಯವರಿಂದಲೂ ಕಡೆಗಣನೆಗೊಂಡಿದ್ದಾನೆ. ಇದಿರಿಂದ ರಾಜ್ಯದ ವ್ಯವಸ್ಥೆ ವಿರುದ್ಧ ಅಸಮಧಾನಗೊಂಡು ದುಷ್ಕೃತ್ಯಕ್ಕೆ ಕೈ ಹಾಕಿದ್ದಾನೆ. ವಿಧಾನಸೌಧ (Vidhana Soudha) ಸಿಎಸ್ ಕಚೇರಿಯ ನಂಬರ್ ಗೂಗಲ್ ನಲ್ಲಿ ಸರ್ಚ್ ಮಾಡಿ, ನಂಬರ್​ ತೆಗೆದುಕೊಂಡು ವಿಧಾನಸೌಧಕ್ಕೆ ಬಾಂಬ್ ಇಡಲಾಗಿದೆ ಎಂದು ಮೂರು ಬಾರಿ ಕರೆ ಮಾಡಿದ್ದಾನೆ.

ವಿಧಾನಸೌಧಲ್ಲಿ ಬಾಂಬ್ ಇಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಳ್ಳುತ್ತೆ ಎಂದು 3 ಬಾರಿ ಕರೆ ಮಾಡಿ ಕಟ್​ ಮಾಡಿದ್ದಾನೆ. ಕೂಡಲೆ ಕಚೇರಿ ಸಿಬ್ಬಂದಿ ವಿಧಾನಸೌಧ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಕೇಂದ್ರ ವಿಭಾಗ ಪೊಲೀಸರು ಪೋನ್ ಕಾಲ್ ಮಾಹಿತಿ ಆಧರಿಸಿ ವಿಧಾನಸೌಧದಲ್ಲಿ ಒಂದು ವಿಶೇಷ ತಂಡ ರಚಿಸಿ ಪರಿಶೀಲನೆ ಮಾಡಿದ್ದಾರೆ. ಆದರೆ ಅದು ಹುಸಿ ಬಾಂಬ್​ ಕರೆ ಎಂದು ತಿಳದಿದ್ದಾರೆ.

ನಂತರ ಪೊಲೀಸರು ಪೋನ್ ಕಾಲ್ ಹಿಸ್ಟ್ರಿ ಆಧರಿಸಿ ಆರೋಪಿ ಪ್ರಶಾಂತ್​ನನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರಿಂದ ಬಂಧನ.

ಅಪ್ರಾಪ್ತೆ ಮೇಲೆ ಅತ್ಯಾಚಾರ: ನಾಲ್ವರು ಅಪರಿಚಿತರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲು

ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ  ವಾಗಿದೆ ಎಂದು ನಾಲ್ವರು ಅಪರಿಚಿತರ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಗೆ ಪೋಷಕರಿಂದ ದೂರು ನೀಡಲಾಗಿದೆ. ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಹಾಗೂ ಬಾಲಕಿ ಕಳೆದ ಎರಡು ವರ್ಷಗಳಿಂದ ಪರಿಚಿತರು ಎನ್ನಲಾಗುತ್ತಿದೆ. ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒನ್ ಸೈಡ್ ಪ್ರೀತಿಯ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ತಾನು  ಪ್ರೀತಿಸುತ್ತಿದ್ದ ಯುವತಿಯ ಪ್ರಿಯಕರನನ್ನು ಹಲ್ಲೆ ಮಾಡಲು ಹೋಗಿ ರಸ್ತೆಯಲ್ಲಿ ಸಿಕ್ಕ ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಮಾಗಡಿರೋಡ್​ನ ಬಾರ್ ಬಳಿ ಮಂಜೇಶ್ ಹಾಗೂ ಆತನ ಗ್ಯಾಂಗ್ ಹುಚ್ಚಾಟಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಆಸ್ಪತ್ರೆ ಸೇರುವಂತಾಗಿದೆ. ನಡುರಸ್ತೆಯಲ್ಲಿ ಭೀಕರವಾಗಿ ಹಲ್ಲೆ ನಡೆದಿದ್ದು ಸಿಸಿಟಿವಿಯಲ್ಲಿ ಘಟನೆ ದೃಶ್ಯ ಸೆರೆಯಾಗಿದೆ.

ಹಲ್ಲೆ ಮಾಡಿದ ಮಂಜೇಶ್ ಗೆ ಯುವತಿಯೋರ್ವಳ ಮೇಲೆ ಪ್ರೀತಿಯಾಗಿತ್ತು. ಆದ್ರೆ ಆ ಯುವತಿಗೆ ನಿತೀನ್ ಎಂಬಾತನ ಮೇಲೆ ಪ್ರೀತಿಯಾಗಿತ್ತು. ಹೀಗಾಗಿ ತಾನು ಇಷ್ಟ ಪಟ್ಟ ಯುವತಿಯ ಪ್ರಿಯಕರನ ಮೇಲೆ ಕೋಪಗೊಂಡಿದ್ದ ಮಂಜೇಶ್, ಆತನನ್ನು ಮಾತನಾಡಿಸುವ ನೆಪದಲ್ಲಿ ಕರೆದು ಹಲ್ಲೆ ಮಾಡಲು ತಂತ್ರ ಮಾಡಿದ್ದ. ಈ ವೇಳೆ ನಿತಿನ್ ತನ್ನ ಸಹೋದರನ ಜೊತೆ ಬರೋದಾಗಿ ಹೇಳಿದ್ದ. ಈ ವೇಳೆ ಮಂಜೇಶ್ ಅಂಡ್ ಗ್ಯಾಂಗ್ ನಿತಿನ್ ಎಂದು ಭಾವಿಸಿ ಹಲ್ಲೆ ನಡೆಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ

ಕಲಬುರಗಿ: ಕೊಟಗಾ ಗ್ರಾಮದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಚಂದನಕೇರಾ ಗ್ರಾಮದ ಮೋಹನ್ (20) ಕೊಲೆಯಾದ ಯುವಕ. ಕುಡಿದ ಮತ್ತಿನಲ್ಲಿ ಸ್ನೇಹಿತರಿಂದಲೇ ಮೋಹನ್ ಬರ್ಬರ ಹತ್ಯೆ ಮಾಡಲಾಗಿದೆ. ಆನಂದ ಮತ್ತು ಭೀಮಾ ಎಂಬುವರಿಂದ ಮೋಹನ್ ಕೊಲೆ ಮಾಡಿದ್ದಾರೆ. ಹಳೆ ವೈಷಮ್ಯದ ಹಿನ್ನಲೆಯಲ್ಲಿ ಮೋಹನ್‌ನ ಆರೋಪಿಗಳು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ರಟಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:00 pm, Sat, 8 October 22

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ