ಬೆಂಗಳೂರು ಗ್ರಾಮಾಂತರ: ತಾಯಿಯನ್ನು ಸಾಕುವ ವಿಚಾರಕ್ಕೆ ಕುಟುಂಬಸ್ಥರ ಮಧ್ಯೆ ಜಗಳ ನಡೆದು ಐವರ ಮೇಲೆ ಮಚ್ಚು, ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದೊಡ್ಡಸಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಾಗರಹಳ್ಳಿಯಲ್ಲಿ ನಿನ್ನೆ ರಾತ್ರಿ ಜಾಂಗುಮಾ, ರೇಷ್ಮಾ, ಮೌಲಾ ಸೇರಿ ಐವರ ಮೇಲೆ ಹಲ್ಲೆ ನಡೆದಿದೆ.
ಜಾಂಗುಮಾ ಹಾಗೂ ಸಹೋದರ ಇಮಾಮ್ ಸಾಬ್ ನಡುವೆ ತಾಯಿ ಬಿಜುಮಾ ಸಾಕುವ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಜಾಂಗುಮಾ ಸಹೋದರ ಇಮಾಮ್ ಕಡೆಯವರಿಂದ ಹಲ್ಲೆ ಮಾಡಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದಕ್ಕೆ ಹೇಳೋದು ಒಂದು ತಾಯಿ ಹತ್ತಾರು ಮಕ್ಕಳನ್ನ ಸಾಕ್ತಾಳೆ ಆದ್ರೆ ಆ ಹತ್ತಾರು ಮಕ್ಕಳು ಒಬ್ಬ ತಾಯಿಯನ್ನ ಸಾಕಲು ಹಿಂಜರಿತಾರೆ ಅಂತ.
Published On - 9:52 am, Mon, 3 February 20