ಪ್ರವಾಸಿ ವೀಸಾ ಕಾಯ್ದೆ ಉಲ್ಲಂಘನೆ, ಐವರು ವಿದೇಶಿ ತಬ್ಲಿಘಿಗಳಿಗೆ ಶಿಕ್ಷೆ

| Updated By:

Updated on: Jun 25, 2020 | 2:23 PM

ಬೆಂಗಳೂರು: ಪ್ರವಾಸಿ ವೀಸಾ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಐವರು ವಿದೇಶಿ ತಬ್ಲಿಘಿಗಳಿಗೆ ಕೋರ್ಟ್​ ಶಿಕ್ಷೆ ವಿಧಿಸಿದೆ. 27 ದಿನ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ACMM ಕೋರ್ಟ್ ಆದೇಶಿಸಿದೆ. ಇಂಗ್ಲೆಂಡ್, ಫ್ರಾನ್ಸ್, ಕೀನ್ಯಾದ ತಲಾ ಒಬ್ಬರು ಹಾಗೂ ಕಜಕಿಸ್ತಾನದ ಇಬ್ಬರು ವಿದೇಶದಿಂದ ದೆಹಲಿಯ ಮೂಲಕ ಬೆಂಗಳೂರಿಗೆ ಬಂದಿದ್ದರು. ಅಲ್ಲದೆ ಜಮಾತ್ ಧರ್ಮ ಪ್ರಚಾರದಲ್ಲಿ ಇವರು ಪಾಲ್ಗೊಂಡಿದ್ದರು. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸರು ಕೇಸ್ ದಾಖಲಿಸಿದ್ದರು. ವಿದೇಶಿ ತಬ್ಲೀಗಿಗಳು […]

ಪ್ರವಾಸಿ ವೀಸಾ ಕಾಯ್ದೆ ಉಲ್ಲಂಘನೆ, ಐವರು ವಿದೇಶಿ ತಬ್ಲಿಘಿಗಳಿಗೆ ಶಿಕ್ಷೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪ್ರವಾಸಿ ವೀಸಾ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಐವರು ವಿದೇಶಿ ತಬ್ಲಿಘಿಗಳಿಗೆ ಕೋರ್ಟ್​ ಶಿಕ್ಷೆ ವಿಧಿಸಿದೆ. 27 ದಿನ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ACMM ಕೋರ್ಟ್ ಆದೇಶಿಸಿದೆ.

ಇಂಗ್ಲೆಂಡ್, ಫ್ರಾನ್ಸ್, ಕೀನ್ಯಾದ ತಲಾ ಒಬ್ಬರು ಹಾಗೂ ಕಜಕಿಸ್ತಾನದ ಇಬ್ಬರು ವಿದೇಶದಿಂದ ದೆಹಲಿಯ ಮೂಲಕ ಬೆಂಗಳೂರಿಗೆ ಬಂದಿದ್ದರು. ಅಲ್ಲದೆ ಜಮಾತ್ ಧರ್ಮ ಪ್ರಚಾರದಲ್ಲಿ ಇವರು ಪಾಲ್ಗೊಂಡಿದ್ದರು. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸರು ಕೇಸ್ ದಾಖಲಿಸಿದ್ದರು. ವಿದೇಶಿ ತಬ್ಲೀಗಿಗಳು 27 ದಿನ ನ್ಯಾಯಾಂಗ ಬಂಧನದಲ್ಲಿದ್ದರು.

Published On - 2:20 pm, Thu, 25 June 20