KPL ಮ್ಯಾಚ್ ಫಿಕ್ಸಿಂಗ್‌ ಮೋಸದ ಜಾಲ ಬಯಲಿಗೆಳೆದ ಬೆಂಗಳೂರು ಸಿಸಿಬಿ

|

Updated on: Nov 19, 2020 | 12:00 AM

ಬೆಂಗಳೂರು: 2019ರ ಮತ್ತೊಂದು ಅತಿ ದೊಡ್ಡ ಘಟನೆ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್‌. ಸಿಸಿಬಿ ಪೊಲೀಸರು ಬೆಟ್ಟಿಂಗ್ ಜಾಲವೊಂದರ ಹಿಂದೆ ಬಿದ್ದಾಗ ಬಯಲಾದ ಮಹಾ ಮೋಸವಿದು. ಬೆಟ್ಟಿಂಗ್‌ ಜಾಲವೊಂದನ್ನ ಅರೆಸ್ಟ್ ಮಾಡಿದ ಪೊಲೀಸರಿಗೆ ತನಿಖೆ ವೇಳೆ ಇದು ಕೇವಲ ಬೆಟ್ಟಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯದಲ್ಲಿ ನಡೆದ ಕೆಪಿಎಲ್‌ ಟೂರ್ನಿಯಲ್ಲಿ ಫಿಕ್ಸಿಂಗ್ ಮಾಡಿತ್ತು ಅನ್ನೋ ಸ್ಫೋಟಕ ಅಂಶ ಗೊತ್ತಾಗಿತ್ತು. ಸಿಸಿಬಿ ಕೆಪಿಎಲ್‌ ಫಿಕ್ಸಿಂಗ್ ಜಾಲದ ಹಿಂದೆ ಬಿದ್ದಿದ್ದಾರೆ. ನಂತ್ರ ಇದರ ಹಿಂದೆ ದೊಡ್ಡ ದೊಡ್ಡ ಕೈವಾಡ ಇದೆ ಅನ್ನೋದು ಗೊತ್ತಾಗಿದೆ. […]

KPL ಮ್ಯಾಚ್ ಫಿಕ್ಸಿಂಗ್‌ ಮೋಸದ ಜಾಲ ಬಯಲಿಗೆಳೆದ ಬೆಂಗಳೂರು ಸಿಸಿಬಿ
Follow us on

ಬೆಂಗಳೂರು: 2019ರ ಮತ್ತೊಂದು ಅತಿ ದೊಡ್ಡ ಘಟನೆ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್‌. ಸಿಸಿಬಿ ಪೊಲೀಸರು ಬೆಟ್ಟಿಂಗ್ ಜಾಲವೊಂದರ ಹಿಂದೆ ಬಿದ್ದಾಗ ಬಯಲಾದ ಮಹಾ ಮೋಸವಿದು. ಬೆಟ್ಟಿಂಗ್‌ ಜಾಲವೊಂದನ್ನ ಅರೆಸ್ಟ್ ಮಾಡಿದ ಪೊಲೀಸರಿಗೆ ತನಿಖೆ ವೇಳೆ ಇದು ಕೇವಲ ಬೆಟ್ಟಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯದಲ್ಲಿ ನಡೆದ ಕೆಪಿಎಲ್‌ ಟೂರ್ನಿಯಲ್ಲಿ ಫಿಕ್ಸಿಂಗ್ ಮಾಡಿತ್ತು ಅನ್ನೋ ಸ್ಫೋಟಕ ಅಂಶ ಗೊತ್ತಾಗಿತ್ತು.

ಸಿಸಿಬಿ ಕೆಪಿಎಲ್‌ ಫಿಕ್ಸಿಂಗ್ ಜಾಲದ ಹಿಂದೆ ಬಿದ್ದಿದ್ದಾರೆ. ನಂತ್ರ ಇದರ ಹಿಂದೆ ದೊಡ್ಡ ದೊಡ್ಡ ಕೈವಾಡ ಇದೆ ಅನ್ನೋದು ಗೊತ್ತಾಗಿದೆ. ಬೆಳಗಾವಿ ಪ್ಯಾಂಥರ್ಸ್ ಅಸ್ವಾಕ್‌ ಆಲಿ, ಗೋವಾ ರಣಜಿ ತಂಡದ ನಾಯಕ ಸಿಎಂ ಗೌತಮ್‌, ಅಸ್ಸಾಂ ಟೀಂ ರಣಜಿ ಪ್ಲೇಯರ್ ಅಕ್ಬರ್ ಖಾಜಿ, ಬೆಂಗಳೂರಿನ ಕ್ರಿಕೆಟ್ ಕೋಚ್‌ ವಿನು ಪ್ರಸಾದ್‌ ಸೇರಿದಂತೆ ಹಲವರನ್ನ ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು ಈ ಬಗ್ಗೆ ಇನ್ನೂ ವಿಚಾರಣೆ ಮುಂದುವರೆಸಿದ್ದಾರೆ. ಒಟ್ನಲ್ಲಿ 2019 ಹಲವು ಪಾಪಗಳಿಗೆ, ಪಾಪಿಷ್ಟರ ಕೃತ್ಯಗಳಿಗೆ ಸಾಕ್ಷಿಯಾಗಿದೆ.

Published On - 12:04 pm, Mon, 30 December 19