ಹಣಕ್ಕಾಗಿ ಆಂಟಿಯ ಕೊಲೆ! ಫೋನ್​​ನಲ್ಲಿ ಪರಿಚಯ, ಎಣ್ಣೆ ಏಟಲ್ಲಿದ್ದ ಹಂತಕರು ಅಂದರ್

ಹಣಕ್ಕಾಗಿ ಆಂಟಿಯ ಕೊಲೆ! ಫೋನ್​​ನಲ್ಲಿ ಪರಿಚಯ, ಎಣ್ಣೆ ಏಟಲ್ಲಿದ್ದ ಹಂತಕರು ಅಂದರ್

ರಾಮನಗರ: ಆಕೆ ಮನೆಯಿಂದ ಹೊರ ಹೋಗಿದ್ರು. ಫ್ರೆಂಡ್ಸ್​ನ್ನ ಮೀಟ್ ಬರ್ತೀನಿ ಅಂತಾ ಹೇಳಿದ್ರು. ಆದ್ರೆ, ಎರಡು ದಿನ ಆದ್ರೂ ಮತ್ತೆ ಮನೆಗೆ ವಾಪಸ್ ಬಂದಿರಲಿಲ್ಲ. ಇಡೀ ಕುಟುಂಬಸ್ಥರಿಗೆ ಆತಂಕ ಮನೆ ಮಾಡಿತ್ತು. ಫೋನ್ ಮಾಡಿದ್ರೆ ರೀಚ್ ಆಗ್ತಿರಲಿಲ್ಲ. ಕೊನೆಗೆ ಆಕೆ ವಾಪಸ್ ಬಂದಿದ್ದು ಶವವಾಗಿ! ಮನೆಯಿಂದ ಹೊರ ಹೋದ ಮಹಿಳೆ ಮರ್ಡರ್! ಬೆಂಗಳೂರಿನ ಗಾರ್ಮೆಂಟ್ಸ್​ವೊಂದರಲ್ಲಿ ಕೆಲಸ ಮಾಡ್ತಿದ್ದ ರಾಮನಗರ ತಾಲೂಕಿನ ವಡೇರಹಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮ ಡಿಸೆಂಬರ್ 24ರಂದು ಮನೆಯಿಂದ ಹೊರ ಹೋಗಿದ್ರು. ಅದು ಕೂಡ ಸ್ನೇಹಿತರನ್ನ […]

sadhu srinath

|

Dec 30, 2019 | 4:19 PM

ರಾಮನಗರ: ಆಕೆ ಮನೆಯಿಂದ ಹೊರ ಹೋಗಿದ್ರು. ಫ್ರೆಂಡ್ಸ್​ನ್ನ ಮೀಟ್ ಬರ್ತೀನಿ ಅಂತಾ ಹೇಳಿದ್ರು. ಆದ್ರೆ, ಎರಡು ದಿನ ಆದ್ರೂ ಮತ್ತೆ ಮನೆಗೆ ವಾಪಸ್ ಬಂದಿರಲಿಲ್ಲ. ಇಡೀ ಕುಟುಂಬಸ್ಥರಿಗೆ ಆತಂಕ ಮನೆ ಮಾಡಿತ್ತು. ಫೋನ್ ಮಾಡಿದ್ರೆ ರೀಚ್ ಆಗ್ತಿರಲಿಲ್ಲ. ಕೊನೆಗೆ ಆಕೆ ವಾಪಸ್ ಬಂದಿದ್ದು ಶವವಾಗಿ!

ಮನೆಯಿಂದ ಹೊರ ಹೋದ ಮಹಿಳೆ ಮರ್ಡರ್! ಬೆಂಗಳೂರಿನ ಗಾರ್ಮೆಂಟ್ಸ್​ವೊಂದರಲ್ಲಿ ಕೆಲಸ ಮಾಡ್ತಿದ್ದ ರಾಮನಗರ ತಾಲೂಕಿನ ವಡೇರಹಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮ ಡಿಸೆಂಬರ್ 24ರಂದು ಮನೆಯಿಂದ ಹೊರ ಹೋಗಿದ್ರು. ಅದು ಕೂಡ ಸ್ನೇಹಿತರನ್ನ ಭೇಟಿ ಮಾಡಿ ಬರ್ತೀನಿ ಅಂತಾ ಮನೆಯಲ್ಲಿ ಹೇಳಿದ್ರು. ಆದ್ರೆ ಭಾಗ್ಯಮ್ಮ ಎರಡು ದಿನ ಆದ್ರೂ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಸಹಜವಾಗಿಯೇ ಕುಟುಂಬಸ್ಥರು ಭಯಗೊಂಡಿದ್ರು.

ಇಂಟ್ರೆಸ್ಟಿಂಗ್ ಅಂದ್ರೆ, ಮನೆಯಿಂದ ಹೊರ ಹೋದ ದಿನವೇ ಭಾಗ್ಯಮ್ಮ ಕೊಲೆಯಾಗಿ ಹೋಗಿದ್ರು. ಪೊಲೀಸರಿಗೆ ಎರಡು ದಿನದ ಬಳಿಕ ಮೃತದೇಹ ಸಿಕ್ಕಿತ್ತು. ಅದ್ರಲ್ಲೂ ಖಾಕಿಗೆ ಲೇಟಾಗಿ ಮಹಿಳೆ ಬಗ್ಗೆ ಮಾಹಿತಿ ದೊರೆತಿತ್ತು. ನಂತ್ರ ಹಂತಕರು ಕೂಡ ತಗ್ಲಾಕೊಂಡಿದ್ರು. ಒಬ್ಬ ಕನಕಪುರ ತಾಲೂಕಿನ ಯಡತೂರ್ ದೊಡ್ಡಿ ಗ್ರಾಮದ ರವಿಕುಮಾರ್, ಇನ್ನೊಬ್ಬ ಕರಿಕಲ್ ದೊಡ್ಡಿ ಗ್ರಾಮದ ಶ್ರೀನಿವಾಸ್.

ಫೋನ್​​ನಲ್ಲೇ ಪರಿಚಯ, ಹಣಕ್ಕಾಗಿ ಕೊಲೆ! ಭಾಗ್ಯಮ್ಮ ಹಾಗೂ ಹಂತಕರಿಗೆ ಸಂಬಂಧವೇ ಇಲ್ಲ. ಕೇವಲ ಫೋನ್​ನಲ್ಲಿ ಮಾತ್ರ ಪರಿಚಯ ಆಗಿತ್ತು. ಚಾಟಿಂಗ್ ಮಾಡ್ಕೊಂಡು ಫ್ರೆಂಡ್ಸ್ ಆಗಿದ್ರು. ಹೀಗಿದ್ದವರ ನಡುವೆ ಅದೇಗ್ ಹಣಕಾಸಿನ ವ್ಯವಹಾರ ಆಗಿತ್ತೋ ಗೊತ್ತಿಲ್ಲ. ಭಾಗ್ಯಮ್ಮ ರವಿ ಹಾಗೂ ಶ್ರೀನಿವಾಸ್ ಬಳಿ ಕಾಸು ಕೇಳಿದ್ದಾರೆ. ಈ ವೇಳೆ ಇಬ್ಬರು ಕಾಸು ಕೊಡ್ತೀವಿ ಬನ್ನಿ ಅಂತಾ ಡಿ.24ರಂದು ಕರೆಯಿಸಿಕೊಂಡಿದ್ದಾರೆ. ಬಳಿಕ ಕೆಂಪಯ್ಯನಪಾಳ್ಯ ಗ್ರಾಮದ ನೀಲಗಿರಿ ತೋಪಿನ ಹೋಗಿದ್ದಾರೆ. ಅಲ್ಲಿ ಭಾಗ್ಯಮ್ಮ ಎಣ್ಣೆ ಕುಡಿದ್ರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದ್ರೆ, ರವಿ ಹಾಗೂ ಶ್ರೀನಿವಾಸ್ ಮಾತ್ರ ಫುಲ್ ಟೈಟ್ ಆಗಿದ್ರು. ಈ ವೇಳೆ ಮೊದ್ಲೆ ಪ್ಲಾನ್ ಮಾಡಿದ್ದಂತೆ ಭಾಗ್ಯಮ್ಮನ ತಲೆಗೆ ದೊಣ್ಣೆಯಿಂದ ಹೊಡೆದು ಕೊಂದು ಎಸ್ಕೇಪ್ ಆಗಿದ್ರು.

ಒಟ್ನಲ್ಲಿ, ಒಂದು ನಿಗೂಢ ಕೊಲೆ ಕೇಸ್​ನ್ನ ಭೇದಿಸುವಲ್ಲಿ ಖಾಕಿ ಸಕ್ಸಸ್ ಆಗಿದೆ. ಅಷ್ಟೇ ಅಲ್ದೆ, ಹಂತಕರ ಮುಖವಾಡ ಕಳಚಿ, ಆರೋಪಿಗಳಿಗೆ ಜೈಲೂಟ ಫಿಕ್ಸ್ ಮಾಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada