ಹಣ ಕದ್ದಿದ್ದಾನೆ ಎಂಬ ಶಂಕೆಗೆ ಸ್ನೇಹಿತನನ್ನು ಕೊಂದಿದ್ದ ಆರ್ಮುಗಂ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Feb 17, 2021 | 1:04 PM

ಸ್ನೇಹಿತನ ಕೊಲೆ ಕೇಸ್‌ನಲ್ಲಿ ಆರ್ಮುಗಂ ಮತ್ತೆ ಜೈಲು ಸೇರಿದ್ದಾನೆ. ತನ್ನ 4,000 ರೂಪಾಯಿ ಕದ್ದ ಶಂಕೆಯಿಂದ ಜನವರಿ 27ರಂದು ಭೀಮಪ್ಪ ಹುಸೇನ್ ಎಂಬ ಸ್ನೇಹಿತನನ್ನು ಆರ್ಮುಗಂ ಕೊಲೆ ಮಾಡಿದ್ದ. ಈ ಪ್ರಕರಣ ಸಂಬಂಧ ಬೆಂಗಳೂರಿನ ತಲಘಟ್ಟಪುರ ಪೊಲೀಸರು ಆರ್ಮುಗಂನನ್ನು ಬಂಧಿಸಿದ್ದಾರೆ.

ಹಣ ಕದ್ದಿದ್ದಾನೆ ಎಂಬ ಶಂಕೆಗೆ ಸ್ನೇಹಿತನನ್ನು ಕೊಂದಿದ್ದ ಆರ್ಮುಗಂ ಅರೆಸ್ಟ್
ಆರೋಪಿ ಆರ್ಮುಗಂ
Follow us on

ಬೆಂಗಳೂರು: ಸ್ನೇಹಿತನ ಕೊಲೆ ಕೇಸ್‌ನಲ್ಲಿ ಆರ್ಮುಗಂ ಮತ್ತೆ ಜೈಲು ಸೇರಿದ್ದಾನೆ. ತನ್ನ 4,000 ರೂಪಾಯಿ ಕದ್ದ ಶಂಕೆಯಿಂದ ಜನವರಿ 27ರಂದು ಭೀಮಪ್ಪ ಹುಸೇನ್ ಎಂಬ ಸ್ನೇಹಿತನನ್ನು ಆರ್ಮುಗಂ ಕೊಲೆ ಮಾಡಿದ್ದ. ಈ ಪ್ರಕರಣ ಸಂಬಂಧ ಬೆಂಗಳೂರಿನ ತಲಘಟ್ಟಪುರ ಪೊಲೀಸರು ಆರ್ಮುಗಂನನ್ನು ಬಂಧಿಸಿದ್ದಾರೆ. ಈ ಆರೋಪಿ ಇದೇ ಮೊದಲ ಬಾರಿಗೆ ಜೈಲಿಗೆ ಹೋಗುತ್ತಿರುವುದಲ್ಲ. ಇವರ ಮೇಲೆ ನಾಲ್ಕ್ ನಾಲ್ಕು ಕೇಸ್​ಗಳಿವೆ. ಜೈಲನ್ನು ಮಾವನ ಮನೆಯಂತೆ ಆಗಾಗ ಎಂಟ್ರಿ ಕೊಡ್ತಾನೆ ಇತ್ರಾನೆ. ಜೈಲೂಟಕ್ಕೆ ಇವನು ಪರಮನೆಂಟ್ ಅತಿಥಿ.

ಸಣ್ಣ ಕಿರಿಕ್​ಗೆ ಕೊಲೆನೇ ಮಾಡ್ತಾನೆ ಈ ಆರ್ಮುಗಂ
ಆರ್ಮುಗಂ ಮೇಲೆ ನಾಲ್ಕು ಕೊಲೆ ಕೇಸ್​ಗಳಿವೆ. ಮೊದಲನೆಯದಾಗಿ 1997ರಲ್ಲೇ ಸಣ್ಣ ಕಿರಿಕ್‌ಗೆ ಆರ್ಮುಗಂ ತನ್ನ ಅತ್ತಿಗೆಯನ್ನೇ ಕೊಲೆ ಮಾಡಿದ್ದ. ಮಾರಕಾಸ್ತ್ರದಿಂದ ಕೊಚ್ಚಿ, ಕೊಚ್ಚಿ ಅತ್ತಿಗೆಯನ್ನು ಕೊಂದು ಜೈಲು ಸೇರಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಳಿಕ ಮೈಸೂರಿನಲ್ಲಿ 2001ರಲ್ಲಿ ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಸೇರಿಸಿ ಡಬಲ್ ಮರ್ಡರ್ ಮಾಡಿದ್ದ. ಈ ಕೇಸ್​ನಲ್ಲಿ ಆರ್ಮುಗಂಗೆ ಜೀವಾವಧಿ ಶಿಕ್ಷೆ ಸಿಕ್ಕಿತ್ತು. 14 ವರ್ಷದ ಸೆರೆವಾಸದ ಬಳಿಕ 2015ರಲ್ಲಿ ಸನ್ನಡತೆ ಆಧಾರದ ಮೇಲೆ ಆರ್ಮುಗಂ ಬಿಡುಗಡೆಯಾದ. ಜೈಲಿನಿಂದ ಬಿಡುಗಡೆಯಾದ ಬಳಿಕ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ.

ಜೈಲಿನಿಂದ ಬಿಡುಗಡೆಯಾಗಿ ಒಬ್ಬಂಟಿಯಾಗಿದ್ದ ಆರ್ಮುಗಂ
ಇನ್ನು ಬಿಡುಗಡೆಯಾದ ಬಳಿಕ ಒಬ್ಬಂಟಿ ಜೀವನ ನಡೆಸುತ್ತಿದ್ದ ಆರ್ಮುಗಂ ತಲಘಟ್ಟಪುರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಜನವರಿ 27ರಂದು ತನ್ನ ಸ್ನೇಹಿತ ಭೀಮಪ್ಪ ಹುಸೇನ್ ಜೊತೆ ಪಾರ್ಟಿ ಮಾಡಿದ್ದ. ಈ ವೇಳೆ ಆರ್ಮುಗಂನ 4 ಸಾವಿರ ರೂ ಮಿಸ್ಸಿಂಗ್ ಆಗಿತ್ತು. ಆಗ ತನ್ನ ಸ್ನೇಹಿತ ಭೀಮಪ್ಪನೇ ಕದ್ದಿರಬೇಕೆಂಬ ಅನುಮಾನ ಆರ್ಮುಗಂಗೆ ಬಂದಿತ್ತು. ಆರ್ಮುಗಂ ಹಾಗೂ ಭೀಮಪ್ಪನ ನಡುವೆ ಮಾತಿನ ಚಕಮಕಿಯಾಗಿತ್ತು. ಮಾತಿಗೆ ಮಾತು ಬೆಳೆದು ಆರ್ಮುಗಂ ಸ್ನೇಹಿತನ ತಲೆ ಮೇಲೆ ಹಾಲೋಬ್ಲಾಕ್ ಇಟ್ಟಿಗೆ ಹಾಕಿ ಕೊಲೆ ಮಾಡಿದ್ದ. ಸದ್ಯ ಈ ಪ್ರಕರಣ ಸಂಬಂಧ ಫಿಂಗರ್ ಪ್ರಿಂಟ್ ಆಧರಿಸಿ ತಲೆಮರಿಸಿಕೊಂಡಿದ್ದ ಆರೋಪಿ ಆರ್ಮುಗಂನನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಇದನ್ನೂ ಓದಿ: ಆನೇಕಲ್: ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಕೊಲೆ- ಕಂಠ ಪೂರ್ತಿ ಕುಡಿದು ಹತ್ಯೆಯಾದ ಮನೆಯಲ್ಲಿಯೇ ಮಲಗಿಬಿಟ್ಟಿದ್ದ ನಿವೃತ್ತ ಎಎಸ್ಐ!