ಹಳೆ ವೈಷಮ್ಯ: ಉಲ್ಲಾಳು ಬಳಿ ರೌಡಿಶೀಟರ್​ನ ಕೊಚ್ಚಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

Murder: ನಗರದ ಉಲ್ಲಾಳು ಬಳಿ ರೌಡಿಶೀಟರ್​ನ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಅರುಣ್ ಎಂಬ ರೌಡಿಶೀಟರ್​ನ ಬರ್ಬರ ಹತ್ಯೆಯಾಗಿದೆ. ಅರುಣ್​ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್​ ಆಗಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಅರುಣ್​ನನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.

  • TV9 Web Team
  • Published On - 22:26 PM, 16 Feb 2021
ಹಳೆ ವೈಷಮ್ಯ: ಉಲ್ಲಾಳು ಬಳಿ ರೌಡಿಶೀಟರ್​ನ ಕೊಚ್ಚಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು
ರೌಡಿಶೀಟರ್ ಅರುಣ್

ಬೆಂಗಳೂರು: ನಗರದ ಉಲ್ಲಾಳು ಬಳಿ ರೌಡಿಶೀಟರ್​ನ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಅರುಣ್ ಎಂಬ ರೌಡಿಶೀಟರ್​ನ ಬರ್ಬರ ಹತ್ಯೆಯಾಗಿದೆ. ಅರುಣ್​ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್​ ಆಗಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಅರುಣ್​ನನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಅರುಣ್​ ಶವವನ್ನು ರವಾನಿಸಲಾಗಿದೆ.

ಹಣಕ್ಕಾಗಿ ಭಿಕ್ಷುಕಿ ಕೊಲೆ
ಇತ್ತ, ಅರಮನೆ ನಗರಿ ಮೈಸೂರಿನ ಕೆ.ಟಿ.ಸ್ಟ್ರೀಟ್​ನಲ್ಲಿ ಭಿಕ್ಷುಕಿಯೊಬ್ಬರನ್ನು ಕೊಲೆಮಾಡಿರುವ ಶಂಕೆ ವ್ಯಕ್ತವಾಗಿದೆ. ಹಣಕ್ಕಾಗಿ ಭಿಕ್ಷುಕಿಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ, ಪೊಲೀಸರ ತನಿಖೆ ನಂತರ ಸಾವಿನ ಬಗ್ಗೆ ಮಾಹಿತಿ ಸಿಗಲಿದೆ. ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರೌಡಿಗಳ ನಡುವೆ ಮಾರಾಮಾರಿಯಲ್ಲಿ ರೌಡಿಶೀಟರ್​ ಕೊಲೆ
ಮುನೇಶ್ವರ ದೇವಸ್ಥಾನದ ಬಳಿ ಅರುಣ್ ಕುಮಾರ್​ ಕೊಲೆ ನಡಿದಿದೆ. ಕೃಷ್ಣ ಅಲಿಯಾಸ್ ಚಪ್ಪರ್ ಕೃಷ್ಣನ ಗ್ಯಾಂಗ್​ನಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತ ರೌಡಿಶೀಟರ್​ ಅರುಣ್​ ಉಲ್ಲಾಳು ಕಾರ್ತಿಕ್, ಸಾದಿಕ್​ ಗ್ಯಾಂಗ್​ನಲ್ಲಿದ್ದ.

ಈ ಮೊದಲು ಒಂದೇ ಗುಂಪಿನಲ್ಲಿದ್ದ ಕೃಷ್ಣ, ಅರುಣ್​ ಕುಮಾರ್​ ವೈಮನಸ್ಸಿನಿಂದ ಬೇರೆ ಬೇರೆಯಾಗಿದ್ದರು. ಇಂದು, ಸ್ಥಳೀಯ ಜಾತ್ರೆಯಲ್ಲಿ ಮುಖಾಮುಖಿಯಾಗಿದ್ದ ಕೃಷ್ಣ, ಅರುಣ್​ ರೌಡಿಗಳ 2 ಗುಂಪಿನ ಮಧ್ಯೆ ಹೊಡೆದಾಟದಲ್ಲಿ ಅರುಣ್ ಹತ್ಯೆಯಾಗಿದೆ.

ಇದನ್ನೂ ಓದಿ: ರಸ್ತೆ ಡಿವೈಡರ್​ಗೆ ಬೈಕ್ ಡಿಕ್ಕಿ: ತಾಯಿ, ಮಾವನ ಜೊತೆ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು