ಆನೇಕಲ್: ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಕೊಲೆ- ಕಂಠ ಪೂರ್ತಿ ಕುಡಿದು ಹತ್ಯೆಯಾದ ಮನೆಯಲ್ಲಿಯೇ ಮಲಗಿಬಿಟ್ಟಿದ್ದ ನಿವೃತ್ತ ಎಎಸ್ಐ!
ಆನೇಕಲ್ನ ಪಂಪ್ ಹೌಸ್ ನಿವಾಸಿ ಮುನಿರಾಜು (50) ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಮನೆಯ ಮಾಲೀಕ ಶ್ರೀಧರ್, ಮೃತ ವ್ಯಕ್ತಿ ಮುನಿರಾಜು ಮತ್ತು ನಿವೃತ್ತ ಎಎಸ್ಐ ಅರಸುರನ್ನು ಒಳಗೊಂಡತೆ ಮೂವರು ಸ್ನೇಹಿತರಿಂದ ಎಣ್ಣೆ ಪಾರ್ಟಿ ನಡೆದಿದ್ದು, ಕುಡಿದ ಮತ್ತಿನಲ್ಲಿ ಮುನಿರಾಜುರನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

ಆನೇಕಲ್: ಮದ್ಯದ ಅಮಲಿನಲ್ಲಿ ಸ್ನೇಹಿತರೇ ಗೆಳೆಯನನ್ನು ಕೊಲೆ ಮಾಡಿದ ಘಟನೆ ಬೆಂಗಳೂರು ನಗರದ ಆನೇಕಲ್ನ ಬಸವಣ್ಣ ಬೀದಿಯ ಶ್ರೀಧರ್ ಮನೆಯಲ್ಲಿ ನಡೆದಿದೆ. ಆನೇಕಲ್ನ ಪಂಪ್ ಹೌಸ್ ನಿವಾಸಿ ಮುನಿರಾಜು (50) ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಮನೆಯ ಮಾಲೀಕ ಶ್ರೀಧರ್, ಮೃತ ವ್ಯಕ್ತಿ ಮುನಿರಾಜು ಮತ್ತು ನಿವೃತ್ತ ಎಎಸ್ಐ ಅರಸುರನ್ನು ಒಳಗೊಂಡತೆ ಮೂವರು ಸ್ನೇಹಿತರು ಎಣ್ಣೆ ಪಾರ್ಟಿ ನಡೆಸಿದ್ದು, ಕುಡಿದ ಮತ್ತಿನಲ್ಲಿ ಮುನಿರಾಜುರನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ಮುನಿರಾಜುವನ್ನು ಹತ್ಯೆ ಮಾಡಿದ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಆದರೆ ಹೆಚ್ಚು ಪ್ರಮಾಣದಲ್ಲಿ ಕುಡಿದಿದ್ದ ನಿವೃತ್ತ ಎಎಸ್ಐ ಅರಸು ಅದೇ ಮನೆಯಲ್ಲಿಯೇ ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮುನಿರಾಜುವಿನ ಮೃತ ದೇಹ ಪಕ್ಕದಲ್ಲಿಯೇ ಕಂಡುಬಂದಿದೆ.ಅದನ್ನು ನೋಡಿ ಅರಸು ಕಿರುಚಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು, ಸದ್ಯ ನಿವೃತ್ತ ಎಎಸ್ಐ ಅರಸುನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿವಾಹಿತ ಮಹಿಳೆ ಹಾಗೂ ಯುವಕನನ್ನ ಕೊಚ್ಚಿ ಕೊಚ್ಚಿ ಕೊಂದ್ರು..



