AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್: ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಉಡುಪಿ ಮೂಲದ ಮಹಿಳೆ

ಚುನಾವಣೆಯಲ್ಲಿ ಒಟ್ಟು 4 ಮಂದಿ ಸ್ಪರ್ಧಿಸಿದ್ದು, ರಶ್ಮಿ ಅವರು ಒಟ್ಟು 3708 ಮತಗಳಲ್ಲಿ 1966 (ಶೇ 53) ಮತಗಳನ್ನು ಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರು ಗಳಿಸಿದ ಒಟ್ಟು ಮತಗಳು ಇತರ ಮೂರು ಮಂದಿ ಗಳಿಸಿದ ಒಟ್ಟು ಮತಗಳಿಗಿಂತಲೂ ಹೆಚ್ಚಾಗಿತ್ತು. ಆ ಮೂಲಕ ರಶ್ಮಿ ಇತಿಹಾಸ ಬರೆದಿದ್ದಾರೆ.

ಲಂಡನ್: ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಉಡುಪಿ ಮೂಲದ ಮಹಿಳೆ
ಉಡುಪಿ ಮೂಲದ ಎಂ.ಎಸ್. ರಶ್ಮಿ ಸಾಮಂತ್ ಆಕ್ಸ್​ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 13, 2021 | 5:09 PM

ಉಡುಪಿ: ಜಿಲ್ಲೆಯ ಮಾಹೆ ವಿಶ್ವವಿದ್ಯಾಲಯದ ಎಂಐಟಿ ಹಳೆಯ ವಿದ್ಯಾರ್ಥಿನಿ ಎಂ.ಎಸ್. ರಶ್ಮಿ ಸಾಮಂತ್ ಅವರು ಲಂಡನ್ನಿನ ಪ್ರತಿಷ್ಟಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದು, ಆ ಮೂಲಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಎಂಐಟಿಯಲ್ಲಿ 2016ರಿಂದ 2020ರವರೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ರಶ್ಮಿ ಪ್ರಸ್ತುತ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ಎಂಬ ವಿಷಯದಲ್ಲಿ ಎಂಎಸ್ಸಿ ಪದವಿ ವಿದ್ಯಾರ್ಥಿಯಾಗಿದ್ದಾರೆ.

ರಶ್ಮಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಿಶ್ವವಿದ್ಯಾಲಯ ಪರಿಸರದಲ್ಲಿರುವ ಕ್ರಿಸ್ಟೋಫರ್ ಕೊಡ್ರಿಂಗ್ಟನ್ ಸೇರಿದಂತೆ ಸಾಮ್ರಾಜ್ಯಶಾಹಿಯ ಎಲ್ಲಾ ಪ್ರತಿಮೆಗಳನ್ನು ತೆಗೆದುಹಾಕುವ, ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಸಾಂಕ್ರಾಮಿಕದ ಸಂಪೂರ್ಣ ನಿಯಂತ್ರಣದ ಘೋಷಣೆವರೆಗೆ ವಿದ್ಯಾರ್ಥಿಗಳ ವಲಸೆ ನಿಯಮಗಳನ್ನು ಸಡಿಲಿಸುವ, ಮಾನಸಿಕ ಆರೋಗ್ಯ ಕಾರ್ಯಯೋಜನೆಗೆ ಹೆಚ್ಚಿನ ಹಣಕ್ಕಾಗಿ ಲಾಬಿ ನಡೆಸುವ ಮತ್ತು ಶೀಘ್ರವೇ ಕಾಲೇಜು ಕ್ಯಾಂಪಸಿನಿಂದ ಪರಿಸರಕ್ಕೆ ಮಾರಕವಾಗುವ ಇಂಧನಗಳನ್ನು ದೂರ ಮಾಡುವ ನಾಲ್ಕು ಮಹತ್ವದ ಭರವಸೆಗಳನ್ನು ನೀಡಿದ್ದರು.

Oxford university

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ

ಚುನಾವಣೆಯಲ್ಲಿ ಒಟ್ಟು 4 ಮಂದಿ ಸ್ಪರ್ಧಿಸಿದ್ದು, ರಶ್ಮಿ ಅವರು ಒಟ್ಟು 3708 ಮತಗಳಲ್ಲಿ 1966 (ಶೇ 53) ಮತಗಳನ್ನು ಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರು ಗಳಿಸಿದ ಒಟ್ಟು ಮತಗಳು ಇತರ ಮೂರು ಮಂದಿ ಗಳಿಸಿದ ಒಟ್ಟು ಮತಗಳಿಗಿಂತಲೂ ಹೆಚ್ಚಾಗಿತ್ತು. ಆ ಮೂಲಕ ರಶ್ಮಿ ಇತಿಹಾಸ ಸೃಷ್ಟಿಸಿದ್ದಾರೆ.

Atmanirbharta word in oxford languages 2020 ಆತ್ಮನಿರ್ಭರತಾ ಪದ ಆಕ್ಸ್​ಫರ್ಡ್ ಭಾಷಾ ಪಟ್ಟಿಗೆ ಸೇರ್ಪಡೆಯಾಯ್ತು!