ಹಣಕ್ಕಾಗಿ ಜೀವದ ಗೆಳಯನಿಗೆ ಗುಂಡು, ಆರೋಪಿಗಳು ಅಂದರ್

ಮಂಗಳೂರು: ದುಡ್ಡಿನ ಮುಂದೆ ಯಾವ ಸಂಬಂಧವೂ ಲೆಕ್ಕಕ್ಕಿಲ್ಲ. ಎಂಥಾದ್ದೇ ಗಟ್ಟಿ ಸಂಬಂಧ ಆದ್ರೂ ಹಣದ ಮುಂದೆ ಕ್ಷಣಾರ್ಧದಲ್ಲಿ ಚೂರು ಚೂರಾಗಿ ಬಿಡುತ್ತೆ. ಅದೆಷ್ಟೋ ವರ್ಷಗಳ ಕಾಲ ಜೀವದ ಗೆಳೆಯರಂತೆ ವ್ಯವಹಾರ ಮಾಡಿದ್ರು. ಆದ್ರೆ, ಹಣ ಅನ್ನೋ ಭೂತ ಸ್ನೇಹಿತನ ರಕ್ತ ಹರಿಯುವಂತೆ ಮಾಡಿತು..! ನವೆಂಬರ್ 27 ಮುಸ್ಸಂಜೆ ಸಮಯ. ದಕ್ಷಿಣ ಕನ್ನಡ ಪತ್ತೂರು ನಗರ ಠಾಣಾ ವ್ಯಾಪ್ತಿಯ ಕಬಕ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು. ಜನ್ರೆಲ್ಲಾ ಏನಾಯ್ತು ಏನಾಯ್ತು ಅಂತಾ ಮನೆಬಿಟ್ಟು ಹೊರಗೆ ಓಡಿ ಬಂದಿದ್ರು. ಯಾಕಂದ್ರೆ, ದುಷ್ಕರ್ಮಿಗಳು […]

ಹಣಕ್ಕಾಗಿ ಜೀವದ ಗೆಳಯನಿಗೆ ಗುಂಡು, ಆರೋಪಿಗಳು ಅಂದರ್
Follow us
ಸಾಧು ಶ್ರೀನಾಥ್​
|

Updated on:Dec 03, 2019 | 1:28 PM

ಮಂಗಳೂರು: ದುಡ್ಡಿನ ಮುಂದೆ ಯಾವ ಸಂಬಂಧವೂ ಲೆಕ್ಕಕ್ಕಿಲ್ಲ. ಎಂಥಾದ್ದೇ ಗಟ್ಟಿ ಸಂಬಂಧ ಆದ್ರೂ ಹಣದ ಮುಂದೆ ಕ್ಷಣಾರ್ಧದಲ್ಲಿ ಚೂರು ಚೂರಾಗಿ ಬಿಡುತ್ತೆ. ಅದೆಷ್ಟೋ ವರ್ಷಗಳ ಕಾಲ ಜೀವದ ಗೆಳೆಯರಂತೆ ವ್ಯವಹಾರ ಮಾಡಿದ್ರು. ಆದ್ರೆ, ಹಣ ಅನ್ನೋ ಭೂತ ಸ್ನೇಹಿತನ ರಕ್ತ ಹರಿಯುವಂತೆ ಮಾಡಿತು..!

ನವೆಂಬರ್ 27 ಮುಸ್ಸಂಜೆ ಸಮಯ. ದಕ್ಷಿಣ ಕನ್ನಡ ಪತ್ತೂರು ನಗರ ಠಾಣಾ ವ್ಯಾಪ್ತಿಯ ಕಬಕ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು. ಜನ್ರೆಲ್ಲಾ ಏನಾಯ್ತು ಏನಾಯ್ತು ಅಂತಾ ಮನೆಬಿಟ್ಟು ಹೊರಗೆ ಓಡಿ ಬಂದಿದ್ರು. ಯಾಕಂದ್ರೆ, ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ರು.

ಅಷ್ಟಕ್ಕೂ ಆವತ್ತು ಕಬಕ ನಿವಾಸಿ ಅಬ್ದುಲ್ ಖಾದರ್ ಮೇಲೆ ಗುಂಡಿನ ದಾಳಿ ಆಗಿತ್ತು. ಎದೆಗೆ ಗುಂಡು ಬಿದ್ದು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ರು. ಸ್ಥಳಕ್ಕೆ ಬಂದಿದ್ದ ಜನರು ಇವ್ರನ್ನ ಆಸ್ಪತ್ರೆಗೆ ಸೇರಿಸಿದ್ರು. ಆದ್ರೆ, ಮುಸ್ಸಂಜೆ ಹೊತ್ತಲ್ಲಿ ಫೈರಿಂಗ್ ಮಾಡಿದ್ಯಾರು ಅನ್ನೋದೇ ಖಾಕಿಗೆ ದೊಡ್ಡ ಸವಾಲಾಗಿತ್ತು.

ಮೂವರು ದಾಳಿಕೋರರ ಹೆಡೆಮುರಿ ಕಟ್ಟಿದ ಖಾಕಿ..! ಆವತ್ತು ಕೇಸ್ ದಾಖಲಿಸಿಕೊಂಡು ಫೀಲ್ಡಿಗಿಳಿದಿದ್ದ ಪೊಲೀಸರಿಗೆ, ಗ್ರಾಮಸ್ಥರೆಲ್ಲಾ ಓರ್ವನ ಮೇಲೆ ಅನುಮಾನ ವ್ಯಕ್ತಪಡಿಸಿದ್ರು. ಅದ್ರ ಆಧಾರದ ಮೇಲೆ ಪುತ್ತೂರು ನಗರ ಠಾಣೆ ಪೊಲೀಸರು ಮೂವರ ಹೆಡೆಮುರಿಕಟ್ಟಿದ್ದಾರೆ. ಹಸನ್ ಸಾಧಿಕ್ ಮತ್ತೋರ್ವ, ಹನೀಫ್ ಜೋಗಿ ಮತ್ತು ಗುರುನಾರಾಯಣ್ ಕೈಗೆ ಕೋಳ ತೊಡಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.

ಹಣಕಾಸಿನ ವ್ಯವಹಾರಕ್ಕೆ ನಡೆದಿತ್ತು ಫೈರಿಂಗ್..! ಅಬ್ದುಲ್ ಖಾದರ್ ಕಲ್ಲುಕ್ವಾರಿ ಮಾಲೀಕ. ಹಸನ್ ಸಾಧಿಕ್, ಅಬ್ದುಲ್ ಖಾದರ್ ಮಧ್ಯೆ ಹಣದ ವ್ಯವಹಾರ ಇತ್ತಂತೆ. ಹೀಗಾಗಿ ಇಬ್ಬರ ನಡುವೆ ಆಗಾಗ ಗಲಾಟೆ ಆಗ್ತಿತ್ತಂತೆ. ಇದೇ ವಿಚಾರವಾಗಿ 2 ವರ್ಷದ ಹಿಂದಷ್ಟೇ ಕೇಸ್ ಪುತ್ತೂರು ನಗರಠಾಣೆ ಮೆಟ್ಟಿಲೇರಿತ್ತು. ಆಗ ಹಸನ ಸಾಧಿಕ್ ಅರೆಸ್ಟ್ ಆಗಿ ಕೆಲ ತಿಂಗಳ ಕಾಲ ಜೈಲುವಾಸ ಕೂಡ ಅನುಭವಿಸಿದ್ದ.

ಇದ್ರಿಂದ ಕೋಪಗೊಂಡಿದ್ದ ಹಸನ್, ಹೇಗಾದ್ರೂ ಮಾಡಿ ಅಬ್ದುಲ್ ಖಾದರ್​ನನ್ನು ಮುಗಿಸಬೇಕೆಂದು ಸ್ಕೆಚ್ ಹಾಕಿದ್ದ. ಅದ್ರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ನವೆಂಬರ್ 27ರಂದು ಮನೆಯಲ್ಲಿದ್ದ ಖಾದರ್ ಮೇಲೆ ಗುಂಡು ಹಾರಿಸಿದ್ದನಂತೆ.ಸದ್ಯ, ಗುಂಡಿನ ದಾಳಿಗೆ ಒಳಗಾಗಿರೋ ಖಾದರ್ ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೊಂದ್ಕಡೆ, ಆರೋಪಿಗಳನ್ನು ಬಂಧಿಸಿರೋ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ. ತಲೆಮರೆಸಿಕೊಂಡಿರೋ ಮತ್ತೋರ್ವ ಆರೋಪಿಗಾಗಿ ಖಾಕಿ ಶೋಧ ನಡೆಸಿದೆ.

Published On - 1:26 pm, Tue, 3 December 19

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್