ಮುಂಬರುವ ಕಾರ್ಪೊರೇಟರ್ ಎಲೆಕ್ಷನ್ ಸಿದ್ಧತೆಯಲ್ಲಿದ್ದ ವ್ಯಕ್ತಿಯ ಬರ್ಬರ ಕೊಲೆ, ಎಲ್ಲಿ?
ಬೆಂಗಳೂರು: ದುಷ್ಕರ್ಮಿಗಳಿಂದ ವ್ಯಕ್ತಿಯ ಬರ್ಬರ ಹತ್ಯೆ ನಡೆದಿರುವ ಘಟನೆ ನಗರದ ಯಲಹಂಕ ಬಳಿಯ ಪಾಲನಹಳ್ಳಿಯಲ್ಲಿ ನಡೆದಿದೆ. 35 ವರ್ಷದ ಚನ್ನಕೇಶವ ಅಲಿಯಾಸ್ ಕೇಶವ ಕೊಲೆಯಾದ ವ್ಯಕ್ತಿ. ನಿನ್ನೆ ತಡ ರಾತ್ರಿ 10:30ರ ಸುಮಾರಿಗೆ ಕೆಲ ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ಚನ್ನಕೇಶವನನ್ನು ತಡೆದು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೊಲೆಯಾದವ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ. ಮುಂಬರುವ […]
ಬೆಂಗಳೂರು: ದುಷ್ಕರ್ಮಿಗಳಿಂದ ವ್ಯಕ್ತಿಯ ಬರ್ಬರ ಹತ್ಯೆ ನಡೆದಿರುವ ಘಟನೆ ನಗರದ ಯಲಹಂಕ ಬಳಿಯ ಪಾಲನಹಳ್ಳಿಯಲ್ಲಿ ನಡೆದಿದೆ. 35 ವರ್ಷದ ಚನ್ನಕೇಶವ ಅಲಿಯಾಸ್ ಕೇಶವ ಕೊಲೆಯಾದ ವ್ಯಕ್ತಿ.
ನಿನ್ನೆ ತಡ ರಾತ್ರಿ 10:30ರ ಸುಮಾರಿಗೆ ಕೆಲ ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ಚನ್ನಕೇಶವನನ್ನು ತಡೆದು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೊಲೆಯಾದವ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ. ಮುಂಬರುವ ಕಾರ್ಪೊರೇಟರ್ ಎಲೆಕ್ಷನ್ಗೆ ಸ್ಪರ್ಧಿಸುವ ತಯಾರಿಯಲ್ಲಿದ್ದ.
Published On - 8:23 am, Fri, 10 July 20