ಕೊಪ್ಪಳ: ಭತ್ತದ ನಾಡು ಗಂಗಾವತಿಯಲ್ಲಿ ಈಗಾಗಲೇ ರಾಜಕೀಯ ಕಾವು ಜೋರಾಗಿದೆ. ಈ ಮಧ್ಯೆ ನಿನ್ನೆ(ಮಾ.19) ಸಂಜೆ ನಡೆದ ಇದೊಂದು ಘಟನೆ ಇಡೀ ಗಂಗಾವತಿ ನಗರವನ್ನೆ ಬೆಚ್ವಿ ಬಿಳಿಸಿದೆ. ಹೌದು ಜಿಲ್ಲೆಯ ಗಂಗಾವತಿ ಅಂದರೆ ಅತೀ ಸಂಪತ್ಬರಿತ ನಾಡು ಅಂತಲೇ ಫೇಮಸ್. ಹೀಗಾಗಿಯೇ ಅಷ್ಟೆ ಪ್ರಮಾಣದ ಕಾನೂನು ಬಾಹಿರ ದಂಧೆಗಳು ನಡೆಯುತ್ತವೆ. ಅದರಲ್ಲೂ ಈ ಇಸ್ಪೀಟ್ ಅಡ್ಡಾ ಹಾಗೂ ಮೀಟರ್ ಬಡ್ಡಿ ದಂಧೆಯಂತು ಎಗ್ಗಿಲದೇ ನಡೆಯುತ್ತಿವೆ. ಇದಕ್ಕೆ ಗಂಗಾವತಿ ನಗರ ಹಾಗೂ ಗ್ರಾಮೀಣ ಪ್ರದೇಶದ ಯುವಕರು ದಾಸರಾಗಿದ್ದಾರೆ. ಹೀಗಾಗಿಯೇ ಒಬ್ಬರೊಬ್ಬರು ಗ್ಯಾಂಗ್ ಕಟ್ಟಿಕೊಂಡು ಗಲಾಟೆ ಮಾಡುವುದು ಕಾಮನ್ ಆಗಿದೆ. ನಿನ್ನೆಯೂ ಭಗತಸಿಂಗ್ ನಗರದ ಮಾರುತಿ ಹಾಗೂ ಲಿಂಗರಾಜ ಕ್ಯಾಂಪ್ ನ ರವಿ ಗ್ಯಾಂಗ್ ಮಧ್ಯೆ ಕಿರಿಕ್ ಶುರುವಾಗಿದೆ. ಮನೆಯಲ್ಲಿದ್ದ ಮಾರುತಿಯನ್ನ ಪೋನ್ ಮಾಡಿ ಕರೆದಿದ್ದ ರವಿ ಅಂಡ್ ಪಟಾಲಂ ವಿದ್ಯಾನಗರದ ರೈಲ್ವೇ ಬ್ರಿಡ್ಜ್ ಬಳಿ ಬರ್ತಿದ್ದಂತೆ ಅಟ್ಯಾಕ್ ಮಾಡಿದೆ. ನೆಲಕ್ಕೆ ಬಿದ್ದರೂ ಬಿಡದ ದುರುಳರು ಕಲ್ಲಿನಿಂದ ಜಜ್ಜಿ ಅಟ್ಟಹಾಸ ಮೆರೆದಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಾರುತಿಯನ್ನ ಕೊಪ್ಪಳದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಸಧ್ಯ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಮಾರುತಿಯನ್ನ ನೊಡಿ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ಯಾರ ತಂಟೆಗೂ ಹೋಗದ ಮಗನನ್ನ ಹೀನಾಯವಾಗಿ ಹಲ್ಲೆ ಮಾಡಿದ್ದಾರೆ ಎಂದು ತಾಯಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ.
ಲಿಂಗರಾಜ ಕ್ಯಾಂಪ್ ನ ರವಿಯದ್ದು ಇಸ್ಪೀಟ್ ಅಡ್ಡಾ, ಮೀಟರ್ ದಂಧೆ ಮಾಡೋದಲ್ಲದೇ, ರೌಡಿಸಂ ಮಾಡಿ ಜನರನ್ನ ಹೆದರಿಸುತ್ತಿದ್ದನಂತೆ. ಈತನ ಸಹವಾಸ ಸಾಕು ಎಂದು ಮಾರುತಿ ಆತನಿಂದ ದೂರ ಇದ್ದನಂತೆ. ಹೀಗಾಗೇ ಎಲ್ಲಿ ಮಾರುತಿ ತನ್ನ ದಂಧೆಗೆ ಅಡ್ಡಿಯಾಗುತ್ತಾನೆ ಎನ್ನೋ ಕಾರಣಕ್ಕೆ ಆಗಾಗ ತಕರಾರು ತೆಗೆಯುತ್ತಿದ್ದ ಎಂದು ಕುಟುಬಸ್ಥರು ಅರೋಪಿಸುತ್ತಿದ್ದಾರೆ. ಅಲ್ಲದೇ ಪರೋಕ್ಷವಾಗಿ ರವಿ ದಂಧೆಗೆ ಮಾರುತಿ ಅಡ್ಡಿಯಾಗ್ತಿದ್ದಾನೆ ಎನ್ನುವ ಸಿಟ್ಟಿತ್ತಂತೆ. ಹೀಗಾಗೇ ನಿನ್ನೆ ಬಳ್ಳಾರಿ ಹಾಗೂ ಕೋಳಿ ಮಂಜ್ಯಾ ಗ್ಯಾಂಗ್ ಜೊತೆಗೂಡಿ ಮರ್ಡರ್ ಗೆ ಫ್ಲ್ಯಾನ್ ಮಾಡಿದ್ದ ಅಂದುಕೊಂಡಂತೆ ಅಟ್ಯಾಕ್ ಕೂಡ ಮಾಡಿದ್ದಾನೆ.
ಇದನ್ನೂ ಓದಿ:ಕಲಬುರಗಿ: ರೈತ ಮಹಿಳೆಯ ಬರ್ಬರ ಕೊಲೆ; ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವ ಶಂಕೆ
ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಗಂಗಾವತಿ ಪೊಲೀಸರು 15 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರಂತೆ. ಅಲ್ಲದೇ ಘಟನೆಗೆ ನಿಖರ ಕಾರಣ ಏನೂ, ಯಾರ ಕೈವಾಡವಿದ್ದರೂ ಬಿಡೋದಿಲ್ಲ ಎನ್ನುತ್ತಾರೆ ಎಸ್ಪಿ.
ಇನ್ನು ರವಿಯ ಪಟಾಲಂ ಅಟ್ಟಹಾಸ ಎಷ್ಟಿತ್ತೆಂದರೆ ಆಸ್ಪತ್ರೆ ಬಳಿ ಬಂದಿದ್ದ ಮಾರುತಿ ಸ್ನೇಹಿತ ಭರತ್ ಮೇಲೆಯೂ ಅಟ್ಯಾಕ್ ಮಾಡಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಶಾಂತವಾಗಿದ್ದ ಗಂಗಾವತಿಯಲ್ಲಿ ಮತ್ತೆ ಪುಡಿ ರೌಡಿಗಳು ಬಾಲ ಬಿಚ್ಚಿದ್ದಾರೆ. ಜಿಲ್ಲೆಗೆ ಹೊಸದಾಗಿ ಬಂದಿರೋ ಎಸ್ಪಿ ಯಶೋಧಾ ಅವರು ಅದು ಹೇಗೆ ಕಂಟ್ರೋಲ್ ಮಾಡ್ತಾರೋ ಕಾದು ನೋಡಬೇಕು.
ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:15 am, Wed, 22 March 23