
ದಕ್ಷಿಣ ಕನ್ನಡ: ಗ್ರಾಮ ಪಂಚಾಯತ್ ಸದಸ್ಯನ ಮನೆಗೆ ನುಗ್ಗಿ ತಲವಾರ್ನಿಂದ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಮೇರೆಮಜಲು ಎಂಬಲ್ಲಿ ಮುಂಜಾನೆ ನಡೆದಿದೆ.
ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಮತ್ತು ಆತನ ಪತ್ನಿ ಶೋಭಾ ಮೇಲೆ ತಲ್ವಾರ್‌ನಿಂದ ಹಲ್ಲೆ ಮಾಡಲಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿಶೀಟರ್ ಪ್ರಸಾದ್ ಬೆಳ್ಚಾಡ, ಆತನ ಸಹಚರರು ಹಲ್ಲೆ ಮಾಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:41 am, Fri, 29 November 19