ಗುರುಗ್ರಾಮ: ಕುಡಿದ ಮತ್ತಿನಲ್ಲಿ 3 ಮಂದಿಗೆ ಜೀಪ್ ಡಿಕ್ಕಿ ಹೊಡೆಸಿದ ಪೊಲೀಸ್ ಹೆಡ್ಕಾನ್ಸ್ಟೆಬಲ್ ಬಂಧನ
ಕುಡಿದ ಮತ್ತಿನಲ್ಲಿ ಮೂರು ಮಂದಿಗೆ ಜೀಪ್ ಗುದ್ದಿದ ಆರೋಪದ ಮೇಲೆ ಗುರುಗ್ರಾಮದ ಪೊಲೀಸ್ ಹೆಡ್ ಕಾನ್ ಸ್ಟೆಬಲ್ನನ್ನು ಬಂಧಿಸಲಾಗಿದೆ.
ಗುರುಗ್ರಾಮ, ಆಗಸ್ಟ್ 1: ಕುಡಿದ ಮತ್ತಿನಲ್ಲಿ ಮೂರು ಮಂದಿಗೆ ಜೀಪ್ ಗುದ್ದಿದ ಆರೋಪದ ಮೇಲೆ ಗುರುಗ್ರಾಮದ ಪೊಲೀಸ್ ಹೆಡ್ ಕಾನ್ ಸ್ಟೆಬಲ್ನನ್ನು ಬಂಧಿಸಲಾಗಿದೆ. ದೆಹಲಿ-ಜೈಪುರ ಹೆದ್ದಾರಿಯ ಮನೇಸರ್ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಯನ್ನು ರಾನ್ ಸಿಂಗ್ ಎಂದು ಗುರುತಿಸಲಾಗಿದೆ. ಅವರನ್ನು ಮನೇಸರ್ ಪೊಲೀಸ್ ಠಾಣೆಯ ಸೈಬರ್ ಕ್ರೈಂ ಘಟಕದಲ್ಲಿ ನಿಯೋಜಿಸಲಾಗಿದೆ. ಉತ್ತರ ಪ್ರದೇಶದ ಅಮೇಠಿ ಮೂಲದ ಅವಧೇಶ್ ಕುಮಾರ್ ಎಂಬುವರು ನೀಡಿದ ದೂರಿನ ಪ್ರಕಾರ, ಭಾನುವಾರ ರಾತ್ರಿ ತಮ್ಮ ಮಗನನ್ನು ಚಿಕಿತ್ಸೆಗಾಗಿ ಮನೇಸರ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಾಪಸ್ ಬರುವಾಗ ಕಾರು ಡಿಕ್ಕಿ ಹೊಡೆದಿದೆ.
ಮತ್ತಷ್ಟು ಓದಿ: ಚಲಿಸುತ್ತಿದ್ದ ಜೈಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಗುಂಡಿನ ದಾಳಿ, ನಾಲ್ವರು ಸಾವು
ರಾತ್ರಿ 8.30ರ ಸುಮಾರಿಗೆ ನಾನು ಹಾಗೂ ನನ್ನ ಮಗ ಡಿವೈಡರ್ ಬಳಿ ನಿಂತಿದ್ದಾಗ, ಪೊಲೀಸ್ ಜೀಪ್ ವೇಗವಾಗಿ ಬಂದು ನಮಗೆ ಡಿಕ್ಕಿ ಹೊಡೆದಿತ್ತು, ನಾವು ಕೆಳಗೆ ಬಿದ್ದೆವು, ಇನ್ನೊಬ್ಬ ವ್ಯಕ್ತಿಗೂ ಗಾಯಗಳಾಗಿತ್ತು ಎಂದು ಕುಮಾರ್ ಹೇಳಿದ್ದಾರೆ. ಪೊಲೀಸರ ಕಾರು ನಮಗೆ ಗುದ್ದುವ ಮೊದಲು ಕಾರೊಂದಕ್ಕೆ ಡಿಕ್ಕಿ ಹೊಡೆದಿತ್ತು, ಕೆಲ ಸ್ಥಳೀಯರು ಸಿಂಗ್‌ನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಲಾಯಿತು, ಆದರೆ ತನಿಖೆಗೆ ಸೇರಿದ ನಂತರ ಜಾಮೀನಿನ ಮೇಲೆ ಬಿಡಲಾಯಿತು ಎಂದು ಮಾನೇಸರ್‌ನ ಸಹಾಯಕ ಪೊಲೀಸ್ ಕಮಿಷನರ್ ಸುರೇಂದರ್ ಸಿಂಗ್ ಹೇಳಿದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ